ಮಂಜೇಶ್ವರ: ಬೊಳ್ನಾಡು ಗುತ್ತು ದೈವಸ್ಥಾನದಲ್ಲಿ ಕಳವು
.jpg)
ಮಂಜೇಶ್ವರ, ಮೇ 17: ಇಲ್ಲಿಗೆ ಸಮೀಪದ ಬೊಲ್ನಾಡು ಗುತ್ತು ಮಲರಾಯ ದೈವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ದೈವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೈವದ ಮೂರ್ತಿ, ಆಯುಧ, ಗಂಟೆ, ಗಂಟೆ ಮಣಿ, ಬೆಳ್ಳಿಯ ಚೆಂಬುಗಳನ್ನು ಕಳವುಗೈದಿದ್ದಾರೆ. ಪ್ರತಿ ಮಂಗಳವಾರ ಇಲ್ಲಿ ಪೂಜೆ ನಡೆಯುತ್ತಿದ್ದು, ಮಂಗಳವಾರ ಬೆಳಗ್ಗೆ ಪೂಜಾರಿ ತನಿಯಪ್ಪ, ರಮಾನಂದ ಶೆಟ್ಟಿ ದೈವಸ್ಥಾನಕ್ಕೆ ಆಗಮಿಸಿದಾಗ ಬಾಗಿಲು ಮುರಿದು ಕಳ್ಳತನ ನಡೆದಿರುವುದು ಕಂಡುಬಂದಿದೆ.
ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ನೀಡಲಾಗಿದ್ದು ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮಂಜೇಶ್ವರ ಪೊಲೀಸರು ವಿಫಲರಾಗಿರುವುದೇ ಕಳ್ಳತನ ಹೆಚ್ಚಾಗಲು ಕಾರಣವೆಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ.
Next Story





