ಕಿನ್ನಿಗೋಳಿ: ಗಾಳಿ, ಮಳೆಯಿಂದಾಗಿ ಹಾನಿ

ಮುಲ್ಕಿ, ಮೇ 17: ಸೋಮವಾರ ಸುರಿದ ಬಾರಿ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಮಾಗಂದಡಿ ಸದಾನಂದ ಪೂಜಾರಿ ಎಂಬವರ ಮನೆಗೆ ಮರದ ರೆಂಬೆ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ರಾತ್ರಿ ಸುಮಾರು 9 ಗಂಟೆಯ ಸಂದರ್ಭ ಸುರಿದ ಭಾರೀ ಗಾಳಿ ಸಹಿತ ಮಳೆಗೆ ಮನೆಯ ಮುಂಭಾಗದಲ್ಲಿದ್ದ ಧೂಪದ ಮರದ ಗೆಲ್ಲು ನೇರವಾಗಿ ಮನೆಯ ಮಹಡಿಗೆ ಬಿದ್ದಿದ್ದು, ಮನೆಯ ಮುಂಭಾಗದಲ್ಲಿ ಹಾಕಲಾಗಿದ್ದ ಶೀಟು ಸಂಪೂರ್ಣ ನೆಲಸಮವಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಟೀಲು ಪಂಚಾಯತ್ ಸದಸ್ಯ ಜನಾರ್ದನ ಕಿಲೆಂಜೂರು, ಗ್ರಾಮ ಕರಣಿಕ ಪ್ರದೀಪ್ ಶೆಣೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





