ಮಕ್ಕಾ : ಮಸ್ಜಿದುಲ್ ಹರಾಮ್ ಗೆ ಸೈಕಲ್ ನಲ್ಲಿ ಪ್ರವೇಶಿಸಿದ ವ್ಯಕ್ತಿ !

ಮಕ್ಕಾ, ಮೇ 17 : ಕಳೆದ ವಾರ ಮಕ್ಕಾದ ಮಸ್ಜಿದುಲ್ ಹರಾಮ್ ಗೆ ಸೈಕಲ್ ನೊಂದಿಗೆ ಪ್ರವೇಶಿಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಪ್ರವೇಶ ನಿಷೇಧಿತ ವಸ್ತುಗಳಲ್ಲಿ ಸೈಕಲ್ ಕೂಡ ಸೇರಿದೆ.
ಕಳೆದ ಗುರುವಾರ ಅರಬ್ ವ್ಯಕ್ತಿಯೊಬ್ಬ ಸೈಕಲ್ ನೊಂದಿಗೆ ಹರಮ್ ನ ಒಂದು ಗೇಟ್ ಮೂಲಕ ಪ್ರವೇಶಿಸಲು ಯತ್ನಿಸಿದಾಗ ಅಲ್ಲಿದ್ದ ಸುರಕ್ಷತಾ ಸಿಬ್ಬಂದಿ ಆತನನ್ನು ತಡೆದರು.
ಕೆಂಪು ಟೀ ಶರ್ಟ್ ಹಾಗು ನೀಲಿ ಬಣ್ಣದ ಜೀನ್ಸ್ ತೊಟ್ಟ ಆ ವ್ಯಕ್ತಿ ನೀಲಿ ಬಣ್ಣದ ಸೈಕಲ್ ಒಂದನ್ನು ಹಿಡಿದು ಕೊಂಡಿದ್ದ ಚಿತ್ರವನ್ನು ಅಲ್ಲೇ ಇದ್ದವರೊಬ್ಬರು ತೆಗೆದಿದ್ದರು. ಆ ವ್ಯಕ್ತಿಗೆ ಸೈಕಲ್ ಗೆ ಪ್ರವೇಶ ಇಲ್ಲ ಎಂಬುದು ತಿಳಿದಿರಲಿಲ್ಲ ಎಂದು ಮಸೀದಿಯ ಪ್ರವೇಶ ದ್ವಾರಗಳ ವಿಭಾಗದ ನಿರ್ದೇಶಕ ಮುಹಮ್ಮದ್ ಬತಿ ಅವರು ಹೇಳಿದ್ದಾರೆ.
Next Story





