ಚಿಕ್ಕಮಗಳೂರು ಜಿಲ್ಲೆಯ 90 ಪ್ರೌಢಶಾಲೆಗಳಲ್ಲಿ ಶೇ. 100ಸಾಧನೆ
ಚಿಕ್ಕಮಗಳೂರು, ಮೇ 17: ಚಿಕ್ಕಮಗಳೂರು ಜಿಲ್ಲೆಯ 90 ಪ್ರೌಡಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ. ಚಿಕ್ಕಮಗಳೂರಿನ ಮಲ್ಲಂದೂರು, ಮಾಚಗೊಂಡನಹಳ್ಳಿ, ಬಸ್ಕಲ್, ಬೊಗಸೆಯ ಸರಕಾರಿ ಪ್ರೌಢಶಾಲೆಗಳು, ಸಿಂದಿಗೆರೆ, ಸರಪನಹಳ್ಳಿ, ಬಿಳೆಕಲ್ಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಬೆಳವಾಡಿ ಕೆಳಗೂರು ವಸ್ತಾರೆಯ ಅನುದಾನಿತ ಪ್ರೌಢಶಾಲೆಗಳು ಅಲ್ಲದೆ ಚಿಕ್ಕಮಗಳೂರು ನಗರದ ಮಾಡೆಲ್ ಪ್ರೌಢಶಾಲೆ, ಆಶಾಕಿರಣ ಪ್ರೌಢಶಾಲೆ, ಉಪ್ಪಳ್ಳಿಯ ಜ್ಞಾನ ರಶ್ಮಿ ಪ್ರೌಢಶಾಲೆ, ಸೈಂಟ್ ಮೆರೀಸ್, ಕುವೆಂಪು ವಿದ್ಯಾನಿಕೇತನ ಪ್ರೌಢಶಾಲೆ, ಆದಿಚುಂಚನಗಿರಿ ಪ್ರೌಢಶಾಲೆ, ರಾಯಲ್ ಪ್ರೌಢಶಾಲೆ, ಕೆಂಬ್ರೀಡ್ಜ್ ಪ್ರೌಢಶಾಲೆ, ಯುನೈಟೆಡ್ ಪ್ರೌಢಶಾಲೆ, ವಿದ್ಯಾಭಾರತಿ ಪ್ರೌಢ ಶಾಲೆ, ಎಸ್.ಎಂ.ಪೇಟೆಯ ಪೂರ್ಣ ಪ್ರಜ್ಞಾ ಪ್ರೌಢಶಾಲೆ, ಕಡಬಗೆರೆಯ ಜ್ಯೋತಿ ವಿಕಾಸ ಪ್ರೌಢಶಾಲೆ, ಆಲ್ದೂರಿನ ಸುಶಿಕ್ಷಿತ ಪ್ರೌಢಶಾಲೆ, ಮತ್ತು ಪೂರ್ಣ ಪ್ರಜ್ಞಾ ಪ್ರೌಢಶಾಲೆ ಆಲ್ದೂರು ಶೇ. 100 ಸಾಧನೆ ಮಾಡಿವೆ.
ಬೀರೂರು ಶೈಕ್ಷಣಿಕ ವಲಯದ ಗುಬ್ಬಿಹಳ್ಳಿ, ಜಿಗಣೇಹಳ್ಳಿ, ಎಸ್.ಬಿದರೆ. ಆಲಘಟ್ಟ, ಎಮ್ಮೆದೊಡ್ಡಿ, ಬಳ್ಳಾವರ, ಉಡೇವಾ, ಮಾಚಗೊಂಡನಹಳ್ಳಿಯ ಸ.ಪ್ರೌ.ಶಾಲೆಗಳು ಜೋಡಿಹೋಚಿಹಳ್ಳಿಯ ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಬಿಸಲೆಹಳ್ಳಿ, ಬಾಣೂರು, ದೊಡ್ಡಪಟ್ಟಣಗೆರೆ, ಪಿಳ್ಳೆನಹಳ್ಳಿಯ ಅನುದಾನಿತ ಪ್ರೌಢಶಾಲೆಗಳು ಸೆಂಟ್ ಆನ್ಸ್ ಪ್ರೌಢಶಾಲೆ ಬಳ್ಳಾವರ, ಕ್ರಮುಕ ಪ್ರೌಢಶಾಲೆ ಬೀರೂರು, ಶ್ರೀ ಗುರುಕ್ರಿಸ್ತ್ ಪ್ರೌಢಶಾಲೆ ಬೀರೂರು ಶೇ.100 ಸಾಧನೆ ಮಾಡಿದೆ.
ಕಡೂರು ತಾಲೂಕಿನ ವೈ ಮಲ್ಲಾಪುರ, ಗರುಗದಹಳ್ಳಿ, ಕುಪ್ಪಾಳಿನ ಸರಕಾರಿ ಪ್ರೌಢಶಾಲೆ, ಹಾಗೂ ಕಾಮನಕೆರೆ ಮತ್ತು ಕುಪ್ಪಾಳಿನ ಮೊರಾರ್ಜಿ ಶಾಲೆಗಳು, ಅಣ್ಣೀಗೆರೆ, ಸಿಂಗಟಗೆರೆ, ನಿಡುವಳ್ಳಿ, ಗಿರಿಯಾಪುರ, ಯಳ್ಳಂಬಳಸೆ, ವಡೆರಹಳ್ಳಿ, ಆಸಂದಿ, ಹೋಚಿಹಳ್ಳಿ, ಆಲಗಟ್ಟ, ಗ್ರಾಮಗಳ ಅನುದಾನಿತ ಶಾಲೆಗಳು, ಕಡೂರು ನಗರದ ಎಂ.ಎಸ್.ಆರ್.ಪ್ರೌಢಶಾಲೆ, ಹೈವೇ ಪ್ರೌಢಶಾಲೆ, ದೀಕ್ಷಾ ವಿದ್ಯಾಮಂದಿರ, ಜ್ಞಾನ ಭಾರತಿ ಪ್ರೌಢಶಾಲೆ, ಬಿ.ಜಿ.ಎಸ್. ಪ್ರೌಢಶಾಲೆ, ಗಿರಿಯಾಪುರದ ಗುರುಕೃಪಾ ಪ್ರೌಢಶಾಲೆ, ಪಂಚನಹಳ್ಳಿಯ ಸ್ನೇಹ ಪ್ರೌಢಶಾಲೆ, ನಿಡುವಳ್ಳಿಯ ನಿವೇಧಿತಾ ಪ್ರೌಢಶಾಲೆ ಶೇ. 100ಸಾಧನೆ ಸಾಧನೆ ಮಾಡಿದೆ.
ನ.ರಾಪುರ ತಾಲೂಕಿನ ಜೀವನ್‌ಜ್ಯೋತಿ ಪ್ರೌಢಶಾಲೆ, ನಿರ್ಮಲಾ ಪ್ರೌಢಶಾಲೆ ಬಾಳೆಹೊನ್ನೂರು, ಹಾಗೂ ಡಿಸಿಎಂಸಿ. ಪ್ರೌಢಶಾಲೆ, ತರೀಕೆರೆ ತಾಲೂಕಿನ ಸೊಲ್ಲಾಪುರ, ಕರಕುಚ್ಚಿ, ಸರಕಾರಿ ಪ್ರೌಢಶಾಲೆಗಳು, ಬಾವಿಕೆರೆಯ ಮೊರಾರ್ಜಿ ವಸತಿ ಶಾಲೆ, ಸೊಕ್ಕೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ತರೀಕೆರೆ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಅರುಣೋದಯ ಪ್ರೌಢಶಾಲೆ. ಶೃಂಗೇರಿ ತಾಲ್ಲೂಕಿನ ವೈಕುಂಠಪುರ ಸರಕಾರಿ ಪ್ರೌಢಶಾಲೆ ಶೃಂಗೇರಿ ಪಟ್ಟಣದ ಅಭಿನವ ವಿದ್ಯಾ ತೀರ್ಥ ಪ್ರೌಢಶಾಲೆ, ದರ್ಶಿನಿ ಪ್ರೌಢಶಾಲೆ, ರಾಮಕೃಷ್ಣ ಪ್ರೌಢಶಾಲೆ ಶೇ.100 ಸಾಧನೆ ಮಾಡಿವೆ.
ಮೂಡಿಗೆರೆ ತಾಲೂಕಿನ ಮೊರಾರ್ಜಿ ವಸತಿ ಶಾಲೆ ಬಿದರಹಳ್ಳಿ, ಏಕಲವ್ಯ ಮಾದರಿ ವಸತಿ ಶಾಲೆ ತರುವೆ, ಕಳಸದ ಜೆಇಎಂ ಪ್ರೌಢಶಾಲೆ ಹಾಗೂ ಪ್ರಭೋದಿನಿ ಪ್ರೌಢಶಾಲೆ. ಕೊಪ್ಪ ತಾಲೂಕಿನ ಅಗಳಗಂಡಿ, ಸಿದ್ದರಮಠ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹರಂದೂರು, ದುರ್ಗಾ ಪರಮೇಶ್ವರಿ ಪ್ರೌಢಶಾಲೆ, ಬಂಡಿಗಡಿ, ಸದ್ಗುರು ಪ್ರೌಢಶಾಲೆ ಬಸರಿಕಟ್ಟೆ, ವೆಂಕಟೇಶ್ವರ ವಿದ್ಯಾಮಂದಿರ ಕೊಪ್ಪ. ಸಂತಜೋಸೆಪರ ಪ್ರೌಢಶಾಲೆ ಕೊಪ್ಪ, ಜ್ಞಾನವಾಹಿನಿ ಪ್ರೌಢಶಾಲೆ ಕೊಪ್ಪ, ಸಚ್ಚಿದಾನಂದ ಸರಸ್ವತಿ ಪ್ರೌಢಶಾಲೆ ಕೊಪ್ಪ ಶಾಲೆಗಳು ಶೇ. 100ರಷ್ಟು ಸಾಧನೆ ಮಾಡಿವೆ.







