ಸಿಆರ್‌ಪಿಎಫ್ ಜವಾನ ಆತ್ಮಹತ್ಯೆ
ಅಜ್ಮೀರ್ , ಮೇ 17 : ಸಿಆರ್‌ಪಿಎಫ್ ಜವಾನ ಹರಿಯಾಣ ಮೂಲದ ನಿವಾಸಿ ಧರ್ಮವೀರ ಸಿಂಗ್ (48) ಇಲ್ಲಿನ ಕೇಂದ್ರಿಯ ಪೊಲೀಸ್ ಪಡೆ ಶಿಬಿರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ 9:00 ಗಂಟೆಗೆ ಹೆಡ್ ಕಾನ್ಸ್‌ಸ್ಟೇಬಲ್ ಧರ್ಮವೀರ ಸಿಂಗ್ ಮೃತದೇಹ ತನ್ನ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ .
ಅಲ್ಲದೇ ಸಿಆರ್‌ಪಿಎಫ್ ಜವಾನ ತೆಗೆದು ಕೊಂಡಿರುವ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣವನ್ನು ಪತ್ತೆ ಹಚ್ಚುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
Next Story





