ಜೂ.7ಕ್ಕೆ ಬೆಂಗಳೂರು ವಿವಿ ಘಟಿಕೋತ್ಸವ
ಬೆಂಗಳೂರು, ಮೇ 17: ಕೇಂದ್ರ ಸಚಿವೆ ಸ್ಮತಿ ಇರಾನಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತವಾದ ಕಾರಣದಿಂದಾಗಿ ಎ.16ಕ್ಕೆ ನಡೆಯಬೇಕಿದ್ದ 51ನೇ ವಾರ್ಷಿಕ ಘಟಿಕೋತ್ಸವನ್ನು ಮುಂದೂಡಲಾಗಿದ್ದು, ಜೂ.7 ರಂದು ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವನ್ನು ಹಮ್ಮಿಕೊಳ್ಳಲಾಗಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎ.ಐ.ಸಿ.ಟಿ.ಇ) ಅಧ್ಯಕ್ಷ ಪ್ರೊ.ಅನಿಲ್ ಡಿ. ಸಹಸ್ರಬುಧೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕುಲ ಸಚಿವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





