ದೇರಳಕಟ್ಟೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 100 ಶೇ. ಫಲಿತಾಂಶ
ಮಂಗಳೂರು, ಮೇ 17 :ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ದೇರಳಕಟ್ಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ)ಗೆ 100ಶೇ. ಫಲಿತಾಂಶ ಬಂದಿರುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 22 ವಿದ್ಯಾರ್ಥಿನಿಯರಲ್ಲಿ 3 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 19 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
2016-17 ರ ಸಾಲಿನಲ್ಲಿ 6 ರಿಂದ 9ನೆ ಆಂಗ್ಲ ಮಾಧ್ಯಮ ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿನಿಯರು ಕೂಡಲೇ ಪ್ರಾಂಶುಪಾಲರನ್ನು ಮೊ.ಸಂ.: 9449937134ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





