ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 17: ಕೆನರಾ ಬ್ಯಾಂಕ್ ವತಿಯಿಂದ ಮೂರು ತಿಂಗಳ ಉಚಿತ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್, ಟ್ಯಾಲಿ, ಡಿ.ಟಿ.ಪಿ ತರಬೇತಿ ಜು.1 ರಿಂದ ಪ್ರಾರಂಭವಾಗಲಿರುವ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತರಬೇತಿಯು ಮೂರು ತಿಂಗಳ ಕಾಲ ನಡೆಯ ಲಿದೆ. ನಂತರದ ದಿನಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳು ವಿಕೆಯಲ್ಲಿ ಸಹಾಯವನ್ನು ಮಾಡಲಾಗುತ್ತದೆ. ಆಸಕ್ತ, ಅರ್ಹ ಯುವಕ, ಯುವತಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವವರು ಕನಿಷ್ಠ 10 ನೆ ತರಗತಿ ಉತ್ತೀರ್ಣವಾಗಿರಬೇಕು ಅಥವಾ ಯಾವುದೇ ಪದವಿಯನ್ನು ಪಡೆದಿರಬಹುದಾಗಿದೆ. ಕನಿಷ್ಠ 18 ಮತ್ತು ಗರಿಷ್ಠ 27ವರ್ಷ ವಯಸ್ಸುಳ್ಳವರಾಗಿರಬೇಕು, ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ 30 ವರ್ಷಗಳು ಗರಿಷ್ಠ ವಯಸ್ಸಾಗಿರಬೇಕಾಗಿರುತ್ತದೆ. ಕುಟುಂಬದ ವಾರ್ಷಿಕ ಆದಾಯ 50 ಸಾವಿರ ಮೀರಿರಬಾರದು ಅಥವಾ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಅಂತಹವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೇ 20 ರಂದು ಬೆಳಗ್ಗೆ 11.00 ಘಂಟೆಗೆ ನಡೆಯಲಿರುವ ಅರ್ಹತಾ ಪರೀಕ್ಷೆ ನಡೆಯುತ್ತದೆ. ಅರ್ಜಿ ಸಲ್ಲಿ ಸುವವರು, ನಿರ್ದೇಶಕರು, ಕೆನರಾಬ್ಯಾಂಕ್ ಇನ್ಸ್ ಟಿಟ್ಯೂಟ್ ಆಫ್ ಇನ್‌ಫ್‌ರ್‌ಮೇಷನ್ ಟೆಕ್ನಾಲಜಿ, 3ನೇ ಮಹಡಿ, ಚಿತ್ರಾಪುರ ಭವನ, 8ನೇ ಮುಖ್ಯ ರಸ್ತೆ, 15ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು - 560 055 ಇಲ್ಲಿ ಅರ್ಜಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫೋನ್ ನಂ. 080 23440036, 23463580 ಅಥವಾ 94485 38107 ಸಂಪರ್ಕಿಸಬಹುದೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.