ಅರ್ಧದಷ್ಟು ಭೂಭಾಗ ಐಸಿಸ್ ಕಳೆದುಕೊಂಡಿದೆ: ಪೆಂಟಗನ್
ವಾಶಿಂಗ್ಟನ್, ಮೇ 17: ಇರಾಕ್ ಮತ್ತು ಸಿರಿಯಗಳಲ್ಲಿರುವ ತನ್ನ ಭೂಭಾಗಗಳನ್ನು ಭಯೋತ್ಪಾದಕ ಸಂಘಟನೆ ಐಸಿಸ್ ನಿರಂತರವಾಗಿ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ವಕ್ತಾರರೋರ್ವರು ಸೋಮವಾರ ಹೇಳಿದ್ದಾರೆ. ಇರಾಕ್‌ನಲ್ಲಿ ಅದು ಒಂದು ಕಾಲದಲ್ಲಿ ಹೊಂದಿದ್ದ ಭೂಭಾಗದ ಅರ್ಧದಷ್ಟು ಮಾತ್ರ ಈಗ ಅದರ ಬಳಿ ಇದೆ ಎಂದಿದೆ.
ಇರಾಕ್‌ನಲ್ಲಿ ತಾವು ಹೊಂದಿದ್ದ ಭೂಭಾಗದ ಸುಮಾರು 40 ಶೇಕಡ ಹಾಗೂ ಸಿರಿಯದಲ್ಲಿ ಹೊಂದಿದ್ದ ಭೂಭಾಗದ ಸುಮಾರು ಶೇ.10ರಷ್ಟನ್ನು ಐಸಿಸ್ ಭಯೋತ್ಪಾದಕರು ಕಳೆದುಕೊಂಡಿದ್ದಾರೆ ಎಂಬುದಾಗಿ ಪೆಂಟಗನ್ ಹಿಂದೆ ಅಂದಾಜಿಸಿತ್ತು. ಆದರೆ, ಇತ್ತೀಚಿನ ವಾರಗಳಲ್ಲಿ ಈ ಅಂಕಿಸಂಖ್ಯೆಗಳು ಹೆಚ್ಚಾಗಿವೆ ಎಂದು ಪೆಂಟಗನ್ ವಕ್ತಾರ ಪೀಟರ್ ಕುಕ್ ಹೇಳಿದರು.
Next Story





