ಎಸೆಸೆಲ್ಸಿ: ಕಿನ್ನಿಗೋಳಿ ವ್ಯಾಪ್ತಿಯ ಶಾಲೆಗಳಿಂದ ಉತ್ತಮ ಸಾಧನೆ
ಕಿನ್ನಿಗೋಳಿ ನಡುಗೋಡು ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಕಿನ್ನಿಗೋಳಿ ನಡುಗೋಡು ಸರಕಾರಿ ಪ್ರೌಢ ಶಾಲೆ ಶೇ.100 ಫಲಿತಾಂಶ ಗಳಿಸಿದೆ. ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ಎ ಪ್ಲಸ್ ಗಳಿಸಿದ್ದಾರೆ. ನಿರಂತರ ಮೂರು ವರ್ಷದಿಂದ ಶೇ.100 ಫಲಿತಾಂಶ ಪಡೆದುಕೊಳ್ಳುತ್ತಿದೆ.
------------------------------------
ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ
ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100 ಫಲಿತಾಂಶ ಗಳಿಸಿದೆ. ಒಟ್ಟು 45 ವಿದ್ಯಾರ್ಥಿಗಳು ಹಾಜರಾಗಿದ್ದು 2 ಎ ಪ್ಲಸ್ ಹಾಗೂ 14 ವಿದ್ಯಾರ್ಥಿಗಳು ಎ ಶ್ರೇಣಿ ಗಳಿಸಿದ್ದಾರೆ.
------------------------------------
ಕಿನ್ನಿಗೋಳಿ ಮೇರಿವೆಲ್ ಶಾಲೆಗೆ ಶೇ.96.29 ಫಲಿತಾಂಶ
ಕಿನ್ನಿಗೋಳಿ ಮೇರಿವೆಲ್ ಶಾಲೆ ಶೇ.96.29 ಫಲಿತಾಂಶ ಗಳಿಸಿದೆ. ಒಟ್ಟು 108 ವಿದ್ಯಾರ್ಥಿಗಳು ಹಾಜರಾಗಿದ್ದು 20 ಎ ಪ್ಲಸ್ ಹಾಗೂ 30 ವಿದ್ಯಾರ್ಥಿಗಳು ಎ ಶ್ರೇಣಿ ಗಳಿಸಿದ್ದಾರೆ. ಮೆಲಿಷಾ ರೊಡ್ರಿಗಸ್ 610 ಅಂಕ ಪಡೆದಿದ್ದಾರೆ.
------------------------------------
ಕಿನ್ನಿಗೋಳಿ ಲಿಟ್ಲ್ ಪ್ಲವರ್ ಪ್ರೌಢಶಾಲೆ ಶೇ.88 ಫಲಿತಾಂಶ
ಕಿನ್ನಿಗೋಳಿ ಲಿಟ್ಲ್ ಪ್ಲವರ್ ಪ್ರೌಢಶಾಲೆ ಶೇ.88 ಫಲಿತಾಂಶ ಗಳಿಸಿದೆ. ಒಟ್ಟು 58 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1 ಎ ಪ್ಲಸ್, 16 ಎ ಶ್ರೇಣಿ ಗಳಿಸಿದ್ದಾರೆ.
------------------------------------
ಕಟೀಲು ಪ್ರೌಢಶಾಲೆಗೆ ಶೇ.94.34 ಫಲಿತಾಂಶ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಶೇ. 94.34 ಫಲಿತಾಂಶ ಗಳಿಸಿದೆ.
ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮನು ಕಶ್ಯಪ್(613), ಸಮಿತ್ ಆಚಾರ್ಯ (608), ಚಿತ್ರಾಕ್ಷಿ(603), ವಿಶ್ವನಾಥ್(593), ವಾಣಿಶ್ರೀ (592), ನಿಖಿಲ್ ಆಚಾರ್ಯ(582), ಸುಷ್ಮಿತಾ(574), ಜಯರಾಜ್(572), ಆಶಿಕಾ(568), ಹರ್ಷಿತ್(566), ರವಿರಾಜ್(565) ಅಂಕ ಗಳಿಸಿದ್ದಾರೆ.







