ಪರವೂರ್ ಸಿಡಿಮದ್ದು ದುರಂತ: ಇಂದು ಹೈಕೋರ್ಟ್‌ಗೆ ಮಧ್ಯಾಂತರ ವರದಿ ಸಲ್ಲಿಕೆ

ಕೊಲ್ಲಂ, ಮೇ 18: ಪರವೂರ್ ಸಿಡಿಮದ್ದು ದುರಂತಕ್ಕೆ ಸಂಬಂಧಿಸಿದ ಮಧ್ಯಾಂತರ ತನಿಖಾ ವರಧಿಕ್ರೈಂಬ್ರಾಂಚ್ ಬುಧವಾರ ಹೈಕೋರ್ಟ್‌ಗೆ ಸಮರ್ಪಿಸಲಿದೆ. ಈವರೆಗೆ ಪತ್ತೆಹಚ್ಚಿರುವ ಮಾಹಿತಿ ಮತ್ತು ಆರೋಪಿಗಳ ಸಾಕ್ಷ್ಯಗಳು ಪ್ರಧಾನವಾಗಿ ವರದಿಯಲ್ಲಿ ಇರಲಿದೆ. ದುರಂತಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಅಗತ್ಯವಿದೆಯೆಂದು ಹೇಳಿ ಸಲ್ಲಿಸಲಾದ ಅರ್ಜಿಯಯನ್ನು ಪರಿಗಣಿಸಿ ಮಧ್ಯಾಂತರ ಅರ್ಜಿಯನ್ನು ಮೇ 18ಕ್ಕೆ ಸಲ್ಲಿಸಲು ಹೈಕೋರ್ಟ್ ಆದೇಶಿಸಿತ್ತು ಎಂದು ವರದಿಯಾಗಿದೆ. ದುರಂತದಲ್ಲಿ ಮೃತರಾದ 110 ಮಂದಿಯ ಸಂಬಂಧಿಕರಲ್ಲಿ 25 ಮಂದಿಯ ಸಾಕ್ಷ್ಯಗಳನ್ನು ಈವರೆಗೆ ಪಡೆಯಲಾಗಿದೆ. ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾದ ದೇವಸ್ಥಾನ ಪರಿಸರ ಮತ್ತು ಕಲಕ್ಟರೇಟ್‌ನ ಸಿಸಿಟಿವಿ ಕ್ಯಾಮರಗಳು, ದೇವಳ ಮತ್ತು ಧ್ವಂಸವಾದ ಮನೆಗಳ ಪರಿಸರದಿಂದ ಶೇಖರಿಸಲಾದ ಸಿಡಿಮದ್ದುಗಳ ಸ್ಯಾಂಪಲ್‌ನ ಪರೀಕ್ಷೆಯ ಫಲಿತಾಂಶ ಇನ್ನೂ ಲಭಿಸಿಲ್ಲ.
ತಹಶೀಲ್ದಾರ್‌ವರೆಗಿನ ಅಧಿಕಾರಿಗಳ ಸಾಕ್ಷ್ಯಗಳನ್ನು ಮಾತ್ರವೇ ಈವರೆಗೆ ತನಿಖಾ ತಂಡ ಸಂಗ್ರಹಿಸಿದೆ. ಗಾಯಾಳುಗಳಿಗೆ ಚಿಕಿತ್ಸೆ ಮತ್ತು ಮೃತರಾದವರ ಪೋಸ್ಟ್‌ಮಾರ್ಟಂ ಮಾಡಿದ ವೈದ್ಯರು, ದುರಂತದಲ್ಲಿ ಗಾಯಗೊಂಡವರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಕಮಿಶನರ್, ಎಡಿಎಂ ಮುಂತಾವರ ಸಾಕ್ಷ್ಯಗಳನ್ನು ಇನ್ನಷ್ಟೇ ಸಂಗ್ರಹಿಸಬೇಕಾಗಿದೆ ಎಂದು ವರದಿಯಾಗಿದೆ.





