Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನಿಮಗೆ ಬದುಕು ಕಷ್ಟವೆಂದು ಕಂಡಾಗ...

ನಿಮಗೆ ಬದುಕು ಕಷ್ಟವೆಂದು ಕಂಡಾಗ ಈತನನ್ನೊಮ್ಮೆ ನೋಡಿ ಬಿಡಿ !

ವಾರ್ತಾಭಾರತಿವಾರ್ತಾಭಾರತಿ18 May 2016 12:42 PM IST
share
ನಿಮಗೆ ಬದುಕು ಕಷ್ಟವೆಂದು ಕಂಡಾಗ ಈತನನ್ನೊಮ್ಮೆ ನೋಡಿ ಬಿಡಿ !
  •  ತಲೆಕೆಳಗಾಗಿ, ವಿರೂಪಗೊಂಡ ಕಾಲುಗಳೊಂದಿಗೆ ಹುಟ್ಟಿದ
  •  ಈತ ಹುಟ್ಟಿದಾಗ ವೈದ್ಯರು ತಾಯಿಗೆ ಹೇಳಿದ್ದು ‘‘ಈ ಮಗುವನ್ನು ಸಾಯಲು ಬಿಡಿ’’ ಎಂದು
  •  ಆದರೆ ವೈದ್ಯರ ಬುದ್ಧಿಗಿಂತ ತಾಯಿಯ ಮನಸ್ಸು ದೊಡ್ಡದು
  •  ಈಗ ಆತ ಅಂತಾರಾಷ್ಟ್ರೀಯ ವಾಗ್ಮಿ, ಲೇಖಕ

ಬ್ರೆಜಿಲ್ : ಆತನ ಹೆಸರು ಕ್ಲಾಡಿಯೋ ವೀರ ಡಿ ಒಲಿವೇರಾ. ಇತ್ತೀಚೆಗೆ ಆತ ತನ್ನ ಜೀವನಾಧರಿತ ಕೃತಿಯೊಂದನ್ನೂ ಹೊರತಂದಿದ್ದಾನೆ. ಇದರಲ್ಲಿ ಆಶ್ಚರ್ಯಪಡುವಂತಹ ವಿಷಯವೇನೂ ಇಲ್ಲವೆಂದು ಯಾರಿಗಾದರೂ ಅನಿಸದೇ ಇರದು. ಆದರೆ ಕ್ಲಾಡಿಯೋನನ್ನು ಒಮ್ಮೆ ನೋಡಿದವರು ಆತನ ಸಾಧನೆಗೆ ನಿಜವಾಗಿಯೂ ನಿಬ್ಬೆರಗಾಗುತ್ತಾರೆ.

ಹುಟ್ಟಿದಾಗ ಆತ ತಲೆಕೆಳಗಾಗಿ ವಿರೂಪಗೊಂಡ ಕೈಕಾಲುಗಳನ್ನು ಹೊಂದಿದ್ದ. ಆ ಮಗುವನ್ನು ನೋಡಿದ ವೈದ್ಯರು ಅದನ್ನು ಸಾಯಲು ಬಿಡಿ ಎಂದು ಆತನ ತಾಯಿಯಲ್ಲಿ ಹೇಳಿದ್ದಾರೆ. ಆದರೆ ಆತನ ತಾಯಿ ಅವರ ಮಾತನ್ನು ಧಿಕ್ಕರಿಸಿ ತನ್ನ ಮಗುವನ್ನು ಮಮತೆಯಿಂದ ಬೆಳೆಸಿದಳು. ಅದರ ಫಲವೇ ಇಂದು 40 ವರ್ಷದಕ್ಲಾಡಿಯೋ ವೀರಾ ಡಿ ಒಲಿವೇರಾ ಎಂಬ ಎಸರಿನ ಆತ ಎಲ್ಲಾ ಸವಾಲುಗಳನ್ನೂ ಮೆಟ್ಟಿ ನಿಂತು ತನ್ನ ಜೀವನಾಧರಿತ ಕೃತಿಯೊಂದನ್ನೂ ರಚಿಸಿದ್ದಾನೆ.

ಬ್ರೆಜಿಲ್ ನ ಮೊಂಟೆ ಸ್ಯಾಂಟೊ ನಿವಾಸಿಯಾಗಿರುವ ಆತ ಹುಟ್ಟುವಾಗಲೇ ಆಥ್ರೋಗ್ರಿಪೋಸಿಸ್ ಎಂಬ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು. ಈ ಸಮಸ್ಯೆಯಿರುವವರ ಮೂಳೆ ಸಂಧಿಗಳು ಅಂಟಿಕೊಂಡು ಅಂಗ ಊನತೆ ಉಂಟಾಗುತ್ತದೆ. ಒಲಿವೇರಾನ ತಲೆ ಬೆನ್ನಿಗಂಟಿಕೊಂಡಂತೆ ಇದೆ.
ಆದರೆ ತನ್ನ ಬಾಯಿಯಲ್ಲಿ ಪೆನ್ನನ್ನು ಹಿಡಿದು ಬರೆಯಬಲ್ಲೆ ಎಂದು ಆತನಿಗೆ ತಿಳಿದಾಗ ಹಾಗೂ ತನ್ನ ತುಟಿಯಿಂದ ಕಂಪ್ಯೂಟರ್ ಮೌಸ್ ಅಥವಾ ಫೋನ್ ಎತ್ತಬಹುದೆಂದು ಆತನಿಗೆ ತಿಳಿದಾಗ ಆತನ ಕೆಲಸಗಳೆಲ್ಲಾ ಸಲೀಸಾಗಿ ಹೋಗಿತ್ತು.

   

ಆತ ಅಕೌಂಟೆಂಟ್ ಹುದ್ದೆಗೂ ಅರ್ಹತೆ ಪಡೆದು ಈಗ ಅಂತರಾಷ್ಟ್ರೀಯ ವಾಗ್ಮಿ, ಲೇಖಕನಾಗಿದ್ದಾನೆ. ಇತ್ತೀಚೆಗೆ ಬಿಡುಗಡೆಯಾದ ಆತನ ಪ್ರಥಮ ಕೃತಿಯ ಹೆಸರು ‘ಎಲ್ ಮುಂಡೋ ಎಸ್ಟಾ ಎ ಕೊಂಟ್ರಮನೊ.’ (ದಿ ವರ್ಲ್ಡ್ ಈಸ್ ದಿ ರಾಂಗ್ ವೇ ಅರೌಂಡ್).

‘‘ಆತ ಹುಟ್ಟಿದಾಗ ಉಸಿರಾಟ ನಡೆಸಲೂ ಕಷ್ಟ ಪಡುತ್ತಿದ್ದ. ಮಗು ಬೇಗನೇ ಸಾಯಬಹುದೆಂದು ಹೇಳಿದ ಹಲವರು ಆತನಿಗೆ ಆಹಾರ ನೀಡದಿರಲು ತಿಳಿಸಿದ್ದರು. ಆದರೆ ಎಲ್ಲರ ಮಾತನ್ನೂ ನಿರ್ಲಕ್ಷಿಸಿ ಆತನಿಗೆ ಸ್ವತಂತ್ರವಾಗಿ ಹೇಗೆ ಬದುಕುವುದೆಂದು ಕಲಿಸಿ ಕೊಟ್ಟೆ,’’ಎಂದು ಒಲಿವೇರಾನ ತಾಯಿ ಮರಿಯಾ ಜೋಸ್ ಹೇಳುತ್ತಾಳೆ.

‘‘ಆದ ಅದೆಷ್ಟು ಸ್ವತಂತ್ರವಾಗಿ ಜೀವಿಸಲು ಇಷ್ಟಪಡುತ್ತಾನೆಂದರೆ ರಸ್ತೆಗಳಲ್ಲಿ ಜನರು ಆತನನ್ನೇ ದಿಟ್ಟಿಸಿ ನೋಡಿದರೂ ಆತ ನಡೆದೇ ಹೋಗುತ್ತಾನೆ, ಹಾಡುತ್ತಾನೆ ಹಾಗೂ ಕುಣಿಯುತ್ತಾನೆ,’’ಎಂದು ಆಕೆ ವಿವರಿಸುತ್ತಾಳೆ. ವೀಲ್ ಚೇರ್ ಕೂಡ ಉಪಯೋಗಿಸಲು ಆತನಿಗೆ ಸಾಧ್ಯವಾಗದ ಕಾರಣ ಆತನ ಕುಟುಂಬ ಆತನಿಗೆ ಸಹಾಯವಾಗಲೆಂದು ಮನೆಯ ಫ್ಲೋರಿಂಗ್ ಕೂಡ ಬದಲಿಸಿತ್ತು. ‘‘ನಾನು ತಲೆಕೆಳಗಾಗಿ ಹುಟ್ಟಿದರೂ ಜಗತ್ತನ್ನು ತಲೆಕೆಳಗಾಗಿ ನೋಡುವುದಿಲ್ಲ,’’ಎಂದುಒಲಿವೇರಾ ಹೇಳುತ್ತಾನೆ.

ಆತ ಅದೆಷ್ಟು ಜನಪ್ರಿಯನಾಗಿದ್ದಾನೆಂದರೆ ವಿಶ್ವದಾದ್ಯಂತ ಆತನಿಗೆ ಸ್ಫೂರ್ತಿದಾಯಕ ಭಾಷಣಗಳನ್ನು ನೀಡಲು ಕರೆಗಳು ಬರುತ್ತಿವೆ. ಆತನ ಆತ್ಮವಿಶ್ವಾಸ, ಬದುಕಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಆತನನ್ನು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವಂತೆ ಮಾಡಿದೆ. ಒಲಿವೇರಾ ಎದುರಿಸುತ್ತಿರುವ ಕಂಜೆನಿಟಲ್ ಅಥ್ರೋಗ್ರಿಪೋಸಿಸ್ ಬಹಳ ಅಪರೂಪವಾಗಿದ್ದು ಹುಟ್ಟುವ ಪ್ರತಿ 3000 ಮಕ್ಕಳಲ್ಲಿ ಒಂದು ಮಗುವಿನಲ್ಲಿ ಕಾಣಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X