ಆಟೋ ಚಲಾಯಿಸಿ ಬಡವರಿಗೆ ನೆರವಾಗುವ ಎಂಬಿಬಿಎಸ್ ವಿದ್ಯಾರ್ಥಿ
.jpeg)
ವಿನೀತ್ ವಿಜಯನ್ ತಮ್ಮ ಸ್ನೇಹಿತನ ತಾಯಿ ದಾಖಲಾಗಿರುವ ಬೆಂಗಳೂರಿನ ವೈದ್ಯಕೀಯ ಕಾಲೇಜಿಗೆ ಆಟೋದಲ್ಲಿ ತೆರಳಿದ್ದರು. ಆಗಲೇ ಅವರು ಹೆಸರು ಹೇಳಲಿಚ್ಛಿಸದ ಆಟೋ ಚಾಲಕನನ್ನು ಭೇಟಿಯಾಗಿದ್ದು.
ವಿಜಯನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಯುವ ಆಟೋ ಚಾಲಕನ ಬಳಿ ರಿಕ್ಷಾವನ್ನು ನಿಧಾನವಾಗಿ ಚಲಿಸುವಂತೆ ಹೇಳಿದ್ದರು. ಆತ ಮೃದುವಾಗಿ ಆಯಿತು ಎಂದು ಒಪ್ಪಿಕೊಂಡಿದ್ದರು. ಸಾಮಾನ್ಯವಾಗಿ ಎದುರುತ್ತರ ಕೊಡುವ ಆಟೋ ಚಾಲಕರನ್ನೇ ಕಂಡಿದ್ದ ವಿಜಯನ್ ಗೆ ಆಶ್ಚರ್ಯವಾಯಿತು.
ಆದರೆ ಆ ಚಾಲಕನ ವಿಶೇಷ ಅಷ್ಟೇ ಆಗಿರಲಿಲ್ಲ. ಪ್ರಯಾಣ ಮುಗಿದು ಆಸ್ಪತ್ರೆ ಬಳಿ ಪ್ರವೇಶಿಸಿದಾಗ ಚಾಲಕನ ಬಳಿ ಎಷ್ಟು ಶುಲ್ಕವಾಯಿತು ಎಂದು ಕೇಳಿದ್ದರು. ಆತ ಮೊತ್ತ ಹೇಳುವ ಬದಲಾಗಿ ಸೀಟಿನ ಬಳಿ ಇಟ್ಟಿದ್ದ ಬಾಕ್ಸನ್ನು ತೋರಿಸಿದ್ದ. ನಿಮ್ಮ ಪ್ರಯಾಣ ಸುಖಕರವಾಗಿದ್ದಕ್ಕೆ ಎಷ್ಟು ಕೊಡಬೇಕೆಂದುಕೊಂಡಿದ್ದೀರೋ ಅದನ್ನೇ ಬಾಕ್ಸಿಗೆ ಹಾಕಿ ಎಂದು ಚಾಲಕ ಹೇಳಿದ್ದ. ಆ ಬಾಕ್ಸಿನ ಮೇಲೆ ಬಡವರು ಮತ್ತು ಅಗತ್ಯ ರೋಗಿಗಳಿಗೆ ದಾನ ಎಂದು ಬರೆಯಲಾಗಿತ್ತು.
ಚಾಲಕ ಆಸ್ಪತ್ರೆಗೆ ಬಿಟ್ಟಾಗ ಭದ್ರತಾ ಸಿಬ್ಬಂದಿ ಆತನಿಗೆ ಪರಿಚಯದ ನಗು ಬೀರಿದ್ದ. ಇದನ್ನು ಕಂಡ ವಿಜಯನ್ ಸಿಬ್ಬಂದಿಯನ್ನು ವಿಚಾರಿಸಿದರು. ಆಗಲೇ ಚಾಲಕನ ನಿಜ ವಿವರ ತಿಳಿದಿತ್ತು.
ಆಟೋ ರಿಕ್ಷಾ ಚಾಲಕ 3ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ಆತನ ತಂದೆ ಕೆಲ ದಿನಗಳ ಹಿಂದೆ ತೀರಿಕೊಂಡಿದ್ದರು. ಹಿರಿಯಣ್ಣ ಪಕ್ಷಪಾತ ರೋಗಕ್ಕೆ ಗುರಿಯಾಗಿದ್ದಾರೆ. ಇಬ್ಬರು ಯುವ ತಂಗಿಯರು ಇದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾಗಿದ್ದಕ್ಕೆ ಆಸ್ಪತ್ರೆಯ ಸುಪರಿಟೆಂಡೆಂಟ್ ಈ ಆಟೋವನ್ನು ಬಹುಮಾನವಾಗಿ ಕೊಟ್ಟಿದ್ದರು. ಅಂದಿನಿಂದ ಅವರು ವೈದ್ಯಕೀಯ ಕಾಲೇಜಿಗೆ ಬರುವ ಪ್ರಯಾಣಿಕರ ಬಳಿ ಹಣ ಪಡೆಯುವುದಿಲ್ಲ. ಬದಲಾಗಿ ಬಾಕ್ಸಿಗೆ ಹಣ ಹಾಕಲು ಹೇಳುತ್ತಾರೆ. ಪ್ರತೀ ತಿಂಗಳ ಅಂತ್ಯದಲ್ಲಿ ಆ ಹಣವನ್ನು ಆಸ್ಪತ್ರೆಯಲ್ಲಿ ಅಗತ್ಯವಿದ್ದ ರೋಗಿಗಳಿಗೆ ಕೊಡುತ್ತಾರೆ.
ಹೀರೋ ಆಗಲು ಉತ್ತಮ ಹೃದಯ ಬೇಕು ಎನ್ನುವುದು ಇದರಲ್ಲೇ ತಿಳಿಯುತ್ತದೆ. ಎಲ್ಲಾ ಸೂಪರ್ ಹೀರೋಗಳು ವಿಶಿಷ್ಟ ಅಂಗಿ ತೊಟ್ಟು ಇರುವುದಿಲ್ಲ ಎನ್ನುವುದಕ್ಕೆ ಈ ಆಟೋ ಚಾಲಕ ಉದಾಹರಣೆ. ವಿಜಯನ್ ತಮ್ಮ ಈ ಹೀರೋನ ಪರಿಚಯದ ಬಗ್ಗೆ ಫೇಸ್ಬುಕ್ ಅಲ್ಲಿ ಬರೆದುಕೊಂಡಿದ್ದಾರೆ.
ಕೃಪೆ:www.businessinsider.in







