ಅದ್ಭುತ ಆದರೂ ಸತ್ಯ. 20ವರ್ಷದ ಯುವತಿ 70 ವರ್ಷದ ಮುದಕನನ್ನು ಮದುವೆಯಾದಳು!

ಹೊಸದಿಲ್ಲಿ, ಮೇ 18: ಸಂಬಂಧಗಳು ದೇವನಿಂದ ನಿಶ್ಚಿತ ಎಂದು ಹೇಳುತ್ತಾರೆ. ಆದರೆ ಕೆಲವರು ತಮ್ಮ ಸಂಬಂಧವನ್ನು ಸ್ವಯಂ ಮಾಡಿಕೊಳ್ಳುತ್ತಿದ್ದಾರೆ. ಇಪ್ಪತ್ತುವರ್ಷದ ಯುವತಿ ಎಪ್ಪತ್ತು ವರ್ಷದ ಮುದುಕನನ್ನು ಸ್ವ ಇಚ್ಛೆಯಿಂದ ಮದುವೆಯಾದ ಘಟನೆ ಬಿಹಾರದ ಗಯಾ ಜಿಲ್ಲೆಯಿಂದ ವರದಿಯಾಗಿದೆ. ಇವರಿಬ್ಬರು ಕೋರ್ಟ್‌ನಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ತಾವಿಬ್ಬರೂ ಸಂತೋಷದಲ್ಲಿದ್ದೇವೆಂಬಂತೆ ತೋರ್ಪಡಿಸಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾಡುತ್ತಾ ಎಪ್ಪತ್ತು ವರ್ಷದ ವರ ರಾಮ್‌ಆಶೀಷ್ ಯಾದವ್ ತನ್ನ ಮದುವೆಯ ಕತೆಯನ್ನು ಬಿಚ್ಚಿಟ್ಟಿದ್ದಾನೆ. ಕಳೆದವರ್ಷ ಅವರ ಪತ್ನಿ ನಿಧನರಾದ ನಂತರ ಕುಟುಂಬದವರು ನಿರ್ಲಕ್ಷಿಸ ತೊಡಗಿದ್ದರು. ಆದ್ದರಿಂದ ಅವರು ಎರಡನೆ ವದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಮದುವೆಯ ವೇಳೆ ತನಗೆ ಕೇವಲ ಐವತ್ತು ವರ್ಷ ಎಂದು ಹೇಳಿದ್ದಾರೆ. ಮದುಮಗಳು ಲಕ್ಷ್ಮೀದೇವಿ ಕೂಡಾ ಸಾಮಾಜಿಕವಾಗಿ ದಾರುಣ ಸ್ಥಿತಿಯಲ್ಲಿದ್ದಳು. ಅವಳಿಗೆ ಮದುವೆಯಾಗಿ ಒಂದು ಮಗುವಾದ ಮೇಲೆ ಪತಿ ಕೈಕೊಟ್ಟು ಹೋಗಿದ್ದ. ಆದ್ದರಿಂದ ಅವಳು ತನಗಿಂತ ಐವತ್ತು ವರ್ಷ ಹಿರಿಯ ವ್ಯಕ್ತಿಯನ್ನು ಸಂತೋಷದಿಂದ ಮದುವೆಯಾಗಿದ್ದಾಳೆ. ಈಮದುವೆ ಈಗ ಇಡೀ ಬಿಹಾರದಲ್ಲಿ ಚರ್ಚೆಯ ವಿಷಯವಾಗಿದೆ ಎಂದು ವರದಿಯಾಗಿದೆ.





