ಗರ್ಭಿಣಿಯೇ ಅಲ್ಲ ಆದರೆ ಗರ್ಭಪಾತ ಮಾಡಿಸುವ ವೈದ್ಯರಿದ್ದಾರೆ!

ಹೊಸದಿಲ್ಲಿ, ಮೇ 18: ವೈದ್ಯರಲ್ಲಿ ನಾವು ಅಪಾರ ವಿಶ್ವಾಸ ವಿರಿಸುತ್ತೇವೆ. ಆದರೆ ಅವರು ಆ ನಂಬಿಕೆಗೆ ಪಾತ್ರರೇ? ಇತ್ತೀಚೆಗೆ ಪುಣೆಯ ಇಬ್ಬರು ವೈದ್ಯರು ಪುಸ್ತಕವೊಂದನ್ನು ಬರೆದಿದ್ದು ಹೇಗೆ ವೈದ್ಯರು ಜನರನ್ನು ವಂಚಿಸುತ್ತಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಪುಣೆಯ ಓರ್ವ ಸ್ತ್ರೀರೋಗ ತಜ್ಞ ವೈದ್ಯ ಅರುಣ್ ಗದ್ರೆ ಮತ್ತು ಪಿಜಿಶಿಯನ್ ಡಾ. ಅಭಯ್ ಶುಕ್ಲ ಬರೆದ ಟಿಸ್ಸೇಂಟಿಂಗ್ ಡಯಾಗ್ನೋಸಿಸ್ ಎಂಬ ಗ್ರಂಥದಲ್ಲಿ ಈ ಕುರಿತು ಸವಿವರವಾಗಿ ವಿವರಿಸಿದ್ದಾರೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ವಿರುದ್ಧ ಈ ಪುಸ್ತಕದಲ್ಲಿ ಪ್ರಶ್ನೆ ಎತ್ತಲಾಗಿದೆ. ಕೆಲವು ವೈದ್ಯರು ಹೀಗೆ ಮಾಡುತ್ತಿದ್ದಾರೆಂದು ಈ ಪುಸ್ತಕವನ್ನು ಮೆಡಿಕಲ್ ಕೌನ್ಸಿಲ್ ಸ್ವಾಗತಿಸಿದೆ.
ಪುಸ್ತಕದಲ್ಲಿ ವೈದ್ಯರು ಆಪರೇಶನ್‌ನ ಅಗತ್ಯವಿರದಿದ್ದರೂ ಆಪರೇಶನ್ ಮಾಡುತ್ತಾರೆ. ವೈದ್ಯರು ಮತ್ತು ಲ್ಯಾಬ್ ಒಗ್ಗೂಡಿ ರೋಗಿಗಳನ್ನು ದೋಚುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಕೆಲವು ಪರೀಕ್ಷೆಗಳನ್ನು ಲ್ಯಾಬ್‌ಗಳ ಮೂಲಕ ಮಾಡಿಸಲಾದರೂ ಅವುಗಳಲ್ಲಿ ಕೆಲವನ್ನು ವೈದ್ಯರು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ ರೋಗಿಗಳಿಗೆ ಅದರ ಅಗತ್ಯವಿರುವುದಿಲ್ಲ. ಈ ಪುಸ್ತಕ ಬರೆಯಲಿಕ್ಕಾಗಿ ಪುಣೆಯ ಈ ಇಬ್ಬರು ವೈದ್ಯರು ಆರು ರಾಜ್ಯಗಳ 78 ಸರಕಾರಿ ಮತ್ತು ಖಾಸಗಿ ವೈದ್ಯರೊಂದಿಗೆ ಮಾತಾಡಿದ್ದಾರೆ. ಪುಣೆ ಮುಂಬೈ, ಚೆನ್ನೈ, ಬೆಂಗಳೂರು, ಕೊಲ್ಕತಾ ಮತ್ತು ದಿಲ್ಲಿಯ ವೈದ್ಯರನ್ನು ಮಾತಾಡಿಸಲಾಗಿದೆ. ಕೆಲವೆಡೆವೈದ್ಯರು ಸಣ್ಣ ರೋಗವನ್ನು ಬಹುದೊಡ್ಡ ರೋಗ ಎಂದು ಹೇಳಿ ರೋಗಿಯಿಂದ ಹಣವನ್ನು ದೋಚುತ್ತಿದ್ದರು. ಗರ್ಭಿಣಿಯಾಗದ ಮಹಿಳೆಯನ್ನು ಗರ್ಭಿಣಿ ಎಂದು ಹೇಳಿ ಗರ್ಭಪಾತ ಮಾಡಿಸಿದಂತೆ ವರ್ತಿಸಿದ ಘಟನೆಯೂ ಹಣಮಾಡುವುದಕ್ಕಾಗಿ ನಡೆದಿದೆ ಎಂದುಪುಸ್ತಕದಲ್ಲಿ ಉದಾಹರಣೆಯಾಗಿ ನೀಡಲಾಗಿದೆ.
ಸಣ್ಣ ಕಿಡ್ನಿತೊಂದರೆಚಿಕಿತ್ಸೆಗೆ ಬಹುದೊಡ್ಡ ಮೊತ್ತವನ್ನು ಪೀಕಿಸಿದ ವೈದ್ಯರಿಗೆ ಆಸ್ಪತ್ರೆಯ ಆಡಳಿತ ತರಾಟೆಗೆ ತೆಗೆದುಕೊಂಡ ಉದಾಹರಣೆ ನೀಡಲಾಗಿ. ಇದರಿಂದ ಆಸ್ಪತ್ರೆಯ ಹಿರಿಯ ಸರ್ಜನ್‌ರಾಜಿನಾಮೆ ನೀಡಬೇಕಾಗಿತ್ತು ಎಂಬಿತ್ಯಾದಿ ಮಾಹಿತಿಗಳನ್ನು ಪುಸ್ತಕ ಬಹಿರಂಗ ಪಡಿಸಿದೆ ಎಂದು ವರದಿಯಾಗಿದೆ.







