ಮುಂಡಗೋಡ: ಗುಡುಗು ಸಿಡಿಲು ಆಲೆಕಲ್ಲು ಸಹಿತ ಭಾರಿ ಮಳೆಗಾಳಿಯಿಂದ ಜನಜೀವನ ಅಸ್ತವ್ಯಸ್ತ

ಮುಂಡಗೋಡ : ಗುಡುಗು ಸಿಡಿಲು ಆಲೆಕಲ್ಲು ಮಿಶ್ರಿತ ಭಾರೀ ಗಾಳಿ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಆಸ್ತಿ ಪಾಸ್ತಿ ಹಾನಿಯಾಗಿ ರಸ್ತೆಗಳಲ್ಲಿ, ರಸ್ತೆಯ ಅಕ್ಕಪಕ್ಕದ ಅಂಗಡಿಗಳಲ್ಲಿ ಹಾಗು ಮನೆಗಳಲ್ಲಿ ನೀರು ನುಗ್ಗಿ ಗಾಳಿಯಿಂದಾಗಿ ಮೆಲ್ಛಾವಣಿಗಳು ಹಾರಿಹೋಗಿ ಮತ್ತು ಗಿಡ ಮರಗಳ ಟೊಂಗೆಗಳು ಕಡಿದು ಬಿದ್ದು ಅವಾಂತರ ಸೃಷ್ಟಿಸಿ ಜನಜೀವನ ಅಸ್ತವ್ಯಸ್ಥಗೊಂಡಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಕಳೆದ ಬುಧವಾರ ಸುರಿದ ಪ್ರಥಮ ಮಳೆಯ ದಿಂದ ಈವರೆಗೆ ಸುರಿದ ಮಳೆಯು ಮಂಗಳವಾರ ಎರಡುವರೆ ತಾಸು ಸುರಿದಮಳೆಯೇ ಅತ್ಯುತ್ತಮ ಎಂದು ಹೇಳಲಾಗಿದೆ. ದೇವರು ಮುಂಡಗೋಡ ಜನತೆಯ ದೈನ್ಯತೆಯ ಮನವಿ ಕೇಳಿರುವುದರಿಂದ ಮಂಗಳವಾರ ಅತಿಹೆಚ್ಚಿನ ಮಳೆಯಾಗಿ ರೈತರಲ್ಲಿ ಹಾಗು ಸಾರ್ವಜನಿಕರಲ್ಲಿ ಸಂತಸದ ನಗುತಂದಿದೆ.
ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿರುವ ಅಮ್ಮಾಜಿ ಕೆರೆಗೆ ನೀರು ಹರಿದು ಬಂದಿದ್ದು ಇದನ್ನು ವಿಕ್ಷೀಸಲು ಸ್ವತಃ ಪಟ್ಟಣ ಪಂಚಾಯತ ಅಧ್ಯಕ್ಷ ರಫೀಕ ಇನಾಮದಾರ ಸೇರಿದಂತೆ ಪ.ಪಂ ಸದಸ್ಯರಾದ ಲತೀಫ ನಾಲಬಂದ, ಅಲ್ಲಿಖಾನ ಪಠಾಣ, ಸಂಜು ಪಿಶೆ, ರಾಬರ್ಟ ಲೊಭೋ ಬಂದು ಕೆರೆಗೆ ನೀರು ಹರಿದು ಬರುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿ ಮಳೆರಾಯನಿಗೆ ನಮನ ಸಲ್ಲಿಸಿದರು.
ಪಟ್ಟಣದ ಹಲವಡೆಗಳಲ್ಲಿ ಮಳೆಯ ಅವಾಂತರದಿಂದ ತತ್ತರಿಸಿರುವ ಬಡವಾಣೆಗಳಿಗೆ ಅಧ್ಯಕ್ಷ ಹಾಗು ಪಪಂ ಸದಸ್ಯರು ಭೇಟಿ ನೀಡಿ ಜನತೆಯ ಕಷ್ಟವನ್ನು ಅರಿತು ಅದನ್ನು ಪರಿಹರಿಸುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂದಿತು. ಪಟ್ಟಣಪಂಚಾಯತ ಸಿಬ್ಬಂದಿಗೆ ಭರಪೂರ ಕೆಲಸಮಾಡುವ ಯೋಗ ಮಳೆಯು ತಂದುಕೊಟ್ಟಿತು. ರಾತ್ರಿಯವರೆಗೂ ಪ.ಪಂ ಸಿಬ್ಬಂದಿ ಕೆಲಸದಲ್ಲಿತೋಡಗಿಕೊಂಡಿತು.
ತಹಶೀಲ್ದಾರ ಅಶೋಕ ಗುರಾಣಿ ಮಳೆಯು ಒಳ್ಳೆಯ ರೀತಿಯಿಂದ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಕಂಡು ಬಂದಿತು.
ಹುಬ್ಬಳ್ಳಿ ಶಿರಸಿ ರಸ್ತೆಯ ದನಗರ ಗೌಳಿಯ ಕಾಂಪ್ಲೇಕ್ಸ ನ ನೆಲಮಹಡಿಯ ಅಂಗಡಿಗಳಲ್ಲಿ ನೀರು ನುಗ್ಗಿದೆ. ಪಟ್ಟಣದ ಬಹುತೇಕ ಗಟಾರಗಳ ಹೂಳು ತೆಗೆಯದೇ ಇರುವುದರಿಂದ ಗಟಾರುಗಳು ತುಂಬಿ ರಸ್ತೆಗೆ ನೀರು ಹರಿಯಿತು. ಸಿಂಡಿಕೇಟ ಬ್ಯಾಂಕ್ ಹಿಂದೆ ಇರುವ ದೊಡ್ಡ ಗಟಾರ ಸ್ವಚ್ಚ ಮಾಡದೇ ಇರುವುದರಿಂದ ಬಂಕಾಪುರ ರಸ್ತೆಯ ಡಾ॥
1)ಪ.ಪಂ ಅಧ್ಯಕ್ಷ ಹಾಗು ಇತರೆ ಸದಸ್ಯರು ಅಮ್ಮಾಜಿ ಕೆರೆಗೆ ಭೇಟಿನೀಡಿದ್ದು
2)ತಹಶೀಲ್ದಾರ ಅಶೋಕ ಗುರಾಣಿ ಮಳೆಯ ಅವಾಂತರದ ಪ್ರದೇಶಕ್ಕೆ ಭೇಟಿ ನೀಡಿದ್ದು
3)ಪ.ಪಂ ಅಧ್ಯಕ್ಷ ರಫೀಕ ಇನಾಮದಾರ ಹಾಗು ಲತೀಫ ನಾಲಬಂದ ಕೆರೆಗೆ ಕೆರೆಯಲ್ಲಿ ಇಳಿದು ಸಂತಸ ವ್ಯಕ್ತಪಡಿಸಿದ್ದು
4) ಮುತ್ತುಗಳಂತೆ ರಸ್ತೆಯಲ್ಲಿ ಆಲೆಕಲ್ಲುಗಳು ಹಾಸಿರುವುದು
5) ಬಂಕಾಪೂರ ರಸ್ತೆಯಲ್ಲಿ ನೀರು ರಸ್ತೆಗೆ ಹರಿದು ಬಂದದ್ದು ಅಧ್ಯಕ್ಷರ ಭೇಟಿ
6)ಹುಬ್ಬಳ್ಳಿ-ಶಿರಸಿ ರಸ್ತೆಯ ಗೌಳಿದನಗರ ಗೌಳಿ ಕಾಂಪ್ಲೇಕ್ಸನಲ್ಲಿ ನೀರು ನಿಂತಿರುವುದು












