ಮಂಗಳೂರು: ಅಲ್ ಇಕ್ಲಾಸ್ ಟೂರ್ಸ್ ಆ್ಯಂಡ್ ಟ್ರಾವೆಲ್ ಸಂಸ್ಥೆಯ ವಿರುದ್ದ ಅಪಪ್ರಚಾರ - ಕೆ. ಅಬ್ದುಲ್ ಖಾದರ್
ಮಂಗಳೂರು, ಮೇ 18:ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯಲ್ಲಿರುವ ಅಲ್ ಇಕ್ಲಾಸ್ ಟೂರ್ಸ್ ಆ್ಯಂಡ್ ಟ್ರಾವೆಲ್ ಸಂಸ್ಥೆಯ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಲ್ ಇಕ್ಲಾಸ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ ಮಾಲಕ ಕೆ. ಅಬ್ದುಲ್ ಖಾದರ್ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯನ್ನುದ್ದೆಶಿಸಿ ಮಾತನಾಡಿದ ಅವರು ಕಳೆದ 12 ವರ್ಷಗಳಿಂದ ಸಂಸ್ಥೆಯು ಹಜ್ಜ್ ಮತ್ತು ಉಮ್ರಾ ಯಾತ್ರೆಯನ್ನು ನಿರ್ವಹಿಸುತ್ತಿದ್ದು ಸುಮಾರು 500 ಕ್ಕೂ ಅಧಿಕ ಮಂದಿ ಹಜ್ಜ್ ಮತ್ತು ಉಮ್ರಾ ಯಾತ್ರೆಯನ್ನು ನಿರ್ವಹಿಸಿದ್ದಾರೆ.
ಆದರೆ 2014ರಲ್ಲಿ ಉಡುಪಿ ಜಿಲ್ಲೆಯ ಸಾಸ್ತಾನದ ಮೊಯ್ದು ಕುಟ್ಟಿ ಎಂಬವರು 5 ಮಂದಿಗೆ ಉಮ್ರಾ ಯಾತ್ರೆಗೆ ಹೋದಲು ವ್ಯವಸ್ತೆ ಮಾಡಲು ತಿಳಿಸಿದ್ದರು. ಅದರಂತೆ ಅವರಿಗೆ ಉಮ್ರಾ ಯಾತ್ರೆಗೆ ಹೋಗಲು ವೀಸಾ ಮತ್ತು ವಿಮಾನ ಯಾನದ ಟಿಕೇಟುಗಳನ್ನು ನೀಡಿದ್ದೆ. ಇದರ ಮಧ್ಯೆ ಅವರು ಮತ್ತೆ 8 ಮಂದಿ ಗೆ ಉಮ್ರಾ ಯಾತ್ರೆಯ ವೀಸಾ ಮತ್ತು ವಿಮಾನ ಯಾನದ ವ್ಯವಸ್ಥೆ ಮಾಡುವಂತೆ ಕೋರಿಕೊಂಡಿದ್ದರು. ಆದರೆ ಮೊದಲು 5 ಮಂದಿಗೆ ಉಮ್ರಾ ಯಾತ್ರೆಗೆ ವಿಮಾನ ಯಾನದ ಟಿಕೇಟು ಮಾಡಿದ್ದರೂ ಅವರು ಪ್ರಯಾಣ ಮಾಡಿರಲಿಲ್ಲ. ಆ ಕಾರಣದಿಂದ 8 ಮಂದಿಗೆ ಉಮ್ರಾ ಯಾನದ ವ್ಯವಸ್ಥೆಯನ್ನು ಮಾಡಿರಲಿಲ್ಲ. ಅವರಿಂದ ಒಟ್ಟು 7.28 ಲಕ್ಷ ರೂಗಳನ್ನು ಪಡೆದಿದ್ದು ಅದರಲ್ಲಿ ಮೊದಲ 5 ಮಂದಿಯ ವೀಸಾ ಮತ್ತು ವಿಮಾನ ಯಾನದ ಟಿಕೇಟಿಗಾಗಿ 3.50 ಲಕ್ಷ ಖರ್ಚಾಗಿತ್ತು. ಉಳಿದ 3.78 ಲಕ್ಷ ರೂ ಗಳನ್ನು ವಾಪಾಸು ಕೊಡವ ಭರವಸೆ ನೀಡಿದ್ದೆ. ಅದರಂತೆ 4 ಲಕ್ಷ ರೂ.ಗಳನ್ನು ಮೊಯ್ದು ಕುಟ್ಟಿಯವರಿಗೆ ಅವರ ವಕೀಲ ಬಿ.ಇಬ್ರಾಹೀಮ್ ಅವರ ಸಮ್ಮುಖದಲ್ಲಿ ವಿವಿಧ ಹಂತಗಳಲ್ಲಿ ನೀಡಲಾಗಿದೆ.
ಆದರೆ ಮೊಯ್ದು ಕುಟ್ಟಿ ಅವರ ಸಂಬಂಧಿಕ ಉಡುಪಿಯ ವಕೀಲ ಇಕ್ಬಾಲ್ ಅವರು ಮತ್ತೆ 3.5 ಲಕ್ಷ ರು. ನೀಡುವಂತೆ ಒತ್ತಾಯಿಸಿದ್ದು ತಾನು ಅದನ್ನು ನಿರಾಕರಿಸಿದ್ದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ದ ಸುಳ್ಳು ದೂರು ನೀಡಿ ಮುಂಬೈಯಲ್ಲಿ ನನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನು ತೆಗೆದುಕೊಂಡು ಹೊರಬಂದಾಗ ಉಡುಪಿಯಲ್ಲೂ ಇದೇ ಪ್ರದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿ ಬಂಧಿಸಲಾಗಿತ್ತು. ಅಲ್ಲಿಯೂ ನನಗೆ ನ್ಯಾಯಾಲಯ ಜಾಮೀನು ನೀಡಿದೆ. ವಾಸ್ತವ ಸ್ಥಿತಿ ಹೀಗಿದ್ದು ನನ್ನ ಸಂಸ್ಥೆಯ ಮತ್ತು ನನ್ನ ಹೆಸರನ್ನು ಕೆಡಿಸಲು ತನ್ನದೇ ವ್ಯವಹಾರ ನಡೆಸುವ ಇತರ ಸಂಸ್ಥೆಗಳು ಮೊಯ್ದು ಕುಟ್ಟಿ ಮತ್ತು ಇಕ್ಬಾಲ್ ಅವರನ್ನು ಬಳಸಿಕೊಂಡು ಸುಳ್ಳು ದೂರು ನೀಡಿದ್ದಾರೆ. ಈ ಬಗ್ಗೆ ನ್ಯಾಯ ಕೋರಿ ನ್ಯಾಯಾಲಯದಲ್ಲಿ ಸಂಬಂಧಿತರ ವಿರುದ್ದ ಕೇಸು ದಾಖಲಿಸಲು ನಿರ್ಧರಿಸಿದ್ದೇನೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮುಸ್ಲಿಂ ಲೀಗ್ ಮುಖಂಡ ರಿಯಾಜ್ ಹರೇಕಳ ಉಪಸ್ಥಿತರಿದ್ದರು.







