ಅತ್ಯಾಚಾರ ಪ್ರಕರಣದ ಆರೋಪಿ ಗೋವಾ ಶಾಸಕಗೆ ಜಾಮೀನು
![ಅತ್ಯಾಚಾರ ಪ್ರಕರಣದ ಆರೋಪಿ ಗೋವಾ ಶಾಸಕಗೆ ಜಾಮೀನು ಅತ್ಯಾಚಾರ ಪ್ರಕರಣದ ಆರೋಪಿ ಗೋವಾ ಶಾಸಕಗೆ ಜಾಮೀನು](https://www.varthabharati.in/sites/default/files/images/articles/2016/05/18/babush1.jpg)
ಪಣಜಿ,ಮೇ 18: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಖರೀದಿಸಿದ ಮತ್ತು ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಸುಮಾರು 15 ದಿನಗಳ ಹಿಂದೆ ಕಂಬಿಗಳ ಹಿಂದೆ ಸೇರಿದ್ದ ಗೋವಾ ಶಾಸಕ ಅಟಾನ್ಸಿಯೊ ಮಾನ್ಸೆರಾಟೆ ಅವರಿಗೆ ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ತನ್ನನ್ನು ‘ಸುಳ್ಳು ಆರೋಪ’ದಲ್ಲಿ ಸಿಲುಕಿಸಿದವವರನ್ನು ಸೂಕ್ತ ಸಮಯದಲ್ಲಿ ಬಯಲುಗೊಳಿಸುವುದಾಗಿ ಜಾಮೀನು ದೊರಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್ಸೆರಾಟೆ ಹೇಳಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿದ್ದ ಇನ್ನಿಬ್ಬರು ಆರೋಪಿಗಳಾದ ಸಂತ್ರಸ್ತ ಬಾಲಕಿಯ ಮಲತಾಯಿ ಮತ್ತು ಬಾಲಕಿಯನ್ನು ಮಾನ್ಸೆರಾಟೆಗೆ 50 ಲಕ್ಷ ರೂ.ಗೆ.ಮಾರಾಟ ಮಾಡಿದ್ದಳೆನ್ನಲಾದ ರೋಸಿ ಫೆರೋಸ್ಗೂ ನ್ಯಾಯಾಲಯವು ಜಾಮೀನು ನೀಡಿತು.
ಜನರು ತನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ ಮತ್ತು ತಾನವರಿಗೆ ಎಂದೂ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಸಾಂತಾಕ್ರೂಜ್ನಿಂದ ಆಯ್ಕೆಯಾಗಿರುವ ಮಾನ್ಸೆರಾಟೆ ಹೇಳಿದರು.
Next Story