ವಕ್ಫ್ ಬೋರ್ಡ್ ಆದೇಶದಂತೆ ಕ್ರಮ: ವಕ್ಫ್ ಅಧ್ಯಕ್ಷ ರಶೀದ್ ಹಾಜಿ
ಉಳ್ಳಾಲ ದರ್ಗಾ ಅಧ್ಯಕ್ಷತೆ ವಿವಾದ

ಮಂಗಳೂರು, ಮೇ 18: ಉಳ್ಳಾಲ ದರ್ಗಾ ಅಧ್ಯಕ್ಷತೆ ವಿವಾದದಕ್ಕೆ ಸಂಬಂಧಿಸಿ ಉಂಟಾಗಿರುವ ಗೊಂದಲಕ್ಕೆ ಇದೇ ವಾರದಲ್ಲಿ ಅಂತಿಮ ತೆರೆ ಬೀಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಕ್ಫ್ ಅಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ಕರೆದ ಸಭೆಯಲ್ಲಿ ಎರಡೂ ಬಣಗಳ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ಇದರ ವರದಿಯನ್ನು ಬೆಂಗಳೂರಿನ ವಕ್ಪ್ ಬೋರ್ಡ್ ಮತ್ತು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ವರದಿಯನ್ನು ಪರಿಶೀಲಿಸಿ ವಕ್ಫ್ ಬೋರ್ಡ್ ನೀಡುವ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆದೇಶದ ಪ್ರತಿ ಶೀಘ್ರ ಕೈಸೇರಲಿದ್ದು, ಅದರಂತೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ ರಶೀದ್ ಹಾಜಿ, ಕೆಲವೇ ದಿನಗಳಲ್ಲಿ ಗೊಂದಲ ನಿವಾರಣೆ ಆಗಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Next Story





