ಮಂಗಳೂರು: ಇಂದು ಅಝಾರಿಯಾ ಮದ್ರಸದಲ್ಲಿ ಸನದುದಾನ ಪ್ರದಾನ
ಮಂಗಳೂರು, ಮೇ 18: ನಗರದ ಅಝೀಝುದ್ದೀನ್ ರಸ್ತೆಯ ಅಲ್ ಅಝಾರಿಯಾ ಮದ್ರಸದ ಸನದುದಾನ ಕಾರ್ಯಕ್ರಮವು ಮೇ 19ರಂದು ಸಂಜೆ 4 ಗಂಟೆಗೆ ಅಲ್ ಅಝಾರಿಯಾ ಮದ್ರಸ ವಠಾರದಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸೈಯದ್ ಆಟಕೋಯ ತಂಙಳ್ ಕುಂಬೋಳ್ ಸನದುದಾನ ಪ್ರದಾನ ಮಾಡಲಿದ್ದಾರೆ. ಅಲ್ ಅಝಾರಿಯಾ ಅಸೋಸಿಯೇಶನ್‌ನ ಅಧ್ಯಕ್ಷ ಹಾಜಿ ವೈ.ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಝಾರಿಯಾದ ಉಪಾಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





