ಮಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿ ಇಕ್ಬಾಲ್‌ಗೆ ಸರ್ವೋತ್ತಮ ಪ್ರಶಸ್ತಿ
ಮಂಗಳೂರು, ಮೇ 18: ಕಡತಗಳ ನಿರ್ವಹಣೆಯಲ್ಲಿ ತೋರಿದ ಸಾಮರ್ಥ್ಯ ಮತ್ತು ಅಕ್ರಮ ಹಣವನ್ನು ಪತ್ತೆ ಹಚ್ಚಿ ಸರಕಾರಕ್ಕೆ ಅಂದಾಜು ರೂ. 1.50 ಕೋಟಿ ಉಳಿತಾಯವಾಗಲು ಸಹಕರಿಸಿದ ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮುಹಮ್ಮದ್ ಇಕ್ಬಾಲ್ ಅಹ್ಮದ್ ಅವರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಅಭಿಲೇಖಾಲಯದ ಕಡತಗಳನ್ನು ನಿರ್ವಹಣೆ ಮಾಡಲು ಎಂ.ಎಸ್. ಆಕ್ಸಿಸ್ ಅಪ್ಲಿಕೇಶನ್ ಬಳಸಿ ರೆಕಾರ್ಡ್ ಎಂಟ್ರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಸಿರುವುದು, ಕಚೇರಿಯಲ್ಲಿ ಸ್ವೀಕರಿಸಿದ ಪತ್ರಗಳನ್ನು ಲೆಸ್ ಪೇಪರ್ ಸಿಸ್ಟಮ್‌ನಲ್ಲಿ ಅಳವಡಿಸಿರುವುದು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಸಹಕಾರದಿಂದ ಇ- ಟಿಂಬರ್/ ಸೇಲ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿರುವುದು, ಅಕ್ರಮವಾಗಿ ಸೆಳೆದಿರುವ ಹಣವನ್ನು ಪತ್ತೆ ಹಚ್ಚುವ ಮೂಲಕ ಸರಕಾರಕ್ಕೆ ಅಂದಾಜು ರೂ. 1.50 ಕೋಟಿ ಉಳಿತಾಯವಾಗಲು ಸಹಕರಿಸಿರುವುದು, ಕಾರ್ಯಕ್ಷಮತೆ ಮತ್ತು ಸೇವಾ ವೃದ್ಧಿಗೆ ಸಂಬಂಧಿಸಿದಂತೆ, ಬ್ಲಾಗ್‌ಸ್ಪಾಟ್ ಮೂಲಕ ಉಚಿತ ಸೇವಾ ಮಾಹಿತಿಯನ್ನು ನೀಡಲು ಪ್ರಯತ್ನಿಸಿರುವುದು, ಕಚೇರಿಯಲ್ಲಿನ ಇತರ ನೌಕರರು ಸಹ ಕಡತ ಮತ್ತು ಪತ್ರಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಪ್ರೇರಣೆ ನೀಡುತ್ತಿರುವುದನ್ನು ಇಲಾಖೆಯು ಗಮಸಿದ್ದು, ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.
ಈ ಪ್ರಶಸ್ತಿಯನ್ನು ಅರಣ್ಯ ಪರಿಸರ ಮತ್ತು ಜೀಶಾಸ್ತ್ರ ಸಚಿವ ಬಿ. ರಮಾನಾಥ ರೈ ಇವರ ಸಮ್ಮುಖದಲ್ಲಿ ಹಾಗೂ ಭಾ.ಅ.ಸೇ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಯ ಭಾಸ್ಕರ್ ಇವರುಗಳ ಸಮಕ್ಷಮದಲ್ಲಿ ರೂ. 15,000 ಗಳ ಚೆಕ್ ಹಾಗೂ ಫಲಪುಪ್ಪಗಳೊಂದಿಗೆ ನೀಡಿ ಗೌರಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





