ಯುರೋ ಬಳಿಕ ಸ್ಪೇನ್ ಕೋಚ್ ಹುದ್ದೆ ತ್ಯಜಿಸುವೆ: ವಿನ್ಸೆಂಟ್

ಮ್ಯಾಡ್ರಿಡ್, ಮೇ 18: ಫ್ರಾನ್ಸ್‌ನಲ್ಲಿ ಜೂ.10 ರಿಂದ ಜು.10ರ ತನಕ ಯುರೋ 2016 ಫುಟ್ಬಾಲ್ ಚಾಂಪಿಯನ್‌ಶಿಪ್ ಕೊನೆಗೊಂಡ ಬಳಿಕ ತನ್ನ ಹುದ್ದೆ ತ್ಯಜಿಸುವೆ ಎಂದು ಸ್ಪೇನ್‌ನ ಮುಖ್ಯ ಕೋಚ್ ವಿನ್ಸೆಂಟ್ ಡೆಲ್ ಬಾಸ್ಕೂ ದೃಢಪಡಿಸಿದ್ದಾರೆ.
ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆ ಮನಸ್ಸು ಬದಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿನ್ಸೆಂಟ್, ಈ ಕ್ಷಣ ನನ್ನ ಅಧಿಕಾರವಿರುವುದು ಯುರೋ ಟೂರ್ನಿಯಲ್ಲಿ ಮಾತ್ರ ಎಂದಿದ್ದಾರೆ.
ಯುರೋಪಿಯನ್ ಸ್ಪರ್ಧೆಗಳಲ್ಲಿ ಸ್ಪೇನ್ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ವಿನ್ಸೆಂಟ್, ಯುರೋ ಆರಂಭವಾಗುವ 6 ದಿನಗಳ ತನಕ ಸ್ಪೇನ್ ತಂಡ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅಭ್ಯಾಸ ನಡೆಸುವ ಅನಿವಾರ್ಯತೆ ಕುರಿತು ಬೇಸರ ವ್ಯಕ್ತಪಡಿಸಿದರು.
ಎರಡು ಬಾರಿಯ ಹಾಲಿ ಚಾಂಪಿಯನ್ ಸ್ಪೇನ್ ಯುರೋ 2016ರ ಟೂರ್ನಿಯಲ್ಲಿ ರೆುಕ್ ಗಣರಾಜ್ಯ, ಟರ್ಕಿ ಹಾಗೂ ಕ್ರೋವೇಷಿಯ ತಂಡದೊಂದಿಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ.
Next Story





