ಅಸ್ಸಾಮ್ ಜನಾದೇಶ ಐತಿಹಾಸಿಕ : ಪ್ರಧಾನಿ ಮೋದಿ

ಹೊಸದಿಲ್ಲಿ, ಮೇ 19:ಅಸ್ಸಾಮ್ ನಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸುವುದು ಖಚಿತವಾಗುತ್ತಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದನ್ನು " ಐತಿಹಾಸಿಕ ಜನಾದೇಶ " ಎಂದು ಬಣ್ಣಿಸಿದ್ದು ರಾಜ್ಯದ ಜನರ ನಿರೀಕ್ಷೆಗಳನ್ನು ನಿಜವಾಗಿಸಲು ಬಿಜೆಪಿ ಸರ್ವ ಪ್ರಯತ್ನ ನಡೆಸಲಿದೆ ಎಂದು ಭರವಸೆ ನೀಡಿದ್ದಾರೆ. " ರಾಜ್ಯದ ಅಭಿವೃದ್ಧಿಯನ್ನು ಬಿಜೆಪಿ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲಿದೆ " ಎಂದು ಪ್ರಧಾನಿ ಹೇಳಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳು ತಿಳಿಸಿದಂತೆ ಅಸ್ಸಾಂ ನಲ್ಲಿ ಬಿಜೆಪಿ ತನ್ನ ಮೈತ್ರಿ ಪಕ್ಷ ಎಜಿಪಿ ಜೊತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಖಚಿತವಾಗಿದೆ.
"ಈ ಅಭೂತಪೂರ್ವ ಜಯಕ್ಕೆ ಅಸ್ಸಾಮ್ ನ ಬಿಜೆಪಿ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು. ಯಾವುದೇ ಮಾನದಂಡದಲ್ಲೂ ಇದು ಐತಿಹಾಸಿಕ ಜನಾದೇಶ . ದೇಶಾದ್ಯಂತ ಜನರು ಬಿಜೆಪಿ ಸಮಗ್ರ ಅಭಿವೃದ್ಧಿ ತರಲಿದೆ ಎಂದು ಭರವಸೆ ಇಡುತ್ತಿದ್ದಾರೆ. " ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Next Story





