ಮಂಜೇಶ್ವರದಲ್ಲಿ ಯುಡಿಎಫ್ ಗೆ 89 ಮತಗಳ ಗೆಲುವು !

ಮಂಜೇಶ್ವರ, ಮೇ19: ತೀವ್ರ ಹಣಾಹಣಿ ನಡೆದಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಹಾಲಿ ಶಾಸಕ ಅಬ್ದುಲ್ ರಝಾಕ್ ಅವರು ಕೇವಲ 89 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 56870 ಮತ ಪಡೆದ ರಝಾಕ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ 56781 ಮತ ಪಡೆದ ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು ಕೇವಲ 89 ಮತಗಳಿಂದ ಸೋಲಿಸಿದ್ದಾರೆ. ಎಡರಂಗದ ಅಭ್ಯರ್ಥಿ ಇಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಈ ಮೂಲಕ ಬಿಜೆಪಿ ಬಾರಿ ನಿರೀಕ್ಷೆ ಹೊಂದಿದ್ದ ಮಂಜೆಶ್ವರ ಕ್ಷೇತ್ರದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
Next Story





