ಶಾಲೆಯಿಂದ ಹೊರಗಿರುವ ಮಕ್ಕಳಲ್ಲಿ 75% ದಲಿತರು, ಮುಸ್ಲಿಮರು
ನವದೆಹಲಿ :ಶಿಕ್ಷಣ ಹಕ್ಕು ಕಾಯಿದೆ ಮತ್ತು ಸರ್ವ ಶಿಕ್ಷಾ ಅಭಿಯಾನದ ಹೊರತಾಗಿಯೂ ದೇಶದಲ್ಲಿ ಸುಮಾರು 60.64 ಲಕ್ಷಮಕ್ಕಳು ಶಾಲೆಯಿಂದ ಹೊರಗಿದ್ದಾರೆಂಬ ಕಳವಳಕಾರಿ ಅಂಶ ರಾಜ್ಯಸಭೆಯಲ್ಲಿ ಸದಸ್ಯರೊಬ್ಬರು ಎತ್ತಿದ ಪ್ರಶ್ನೆಗೆ ಸಿಕ್ಕಿದ ಉತ್ತರದಿಂದ ತಿಳಿದು ಬಂದಿದೆ.
ಸಿಪಿಐ ಸಂಸದ ಕೆ ಕೆ ರಾಗೇಶ್ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿಶಾಲೆಯಿಂದ ಹೊರಗಿರುವ6ರಿಂದ 13 ವರ್ಷ ವಯಸ್ಸಿನ60 ಲಕ್ಷ ಮಕ್ಕಳಲ್ಲಿ ಹೆಚ್ಚಿನವರು ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಮಕ್ಕಳು ಎಂಬ ಮಾಹಿತಿ ನೀಡಿದ್ದಾರೆ.
ಶಾಲೆಗೆ ಹೋಗದಿರುವ ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಮಕ್ಕಳ ಒಟ್ಟು ಸಂಖ್ಯೆ ಇತರ ಸಮುದಾಯದ ಶಾಲೆಯಿಂದ ಹೊರಗಿರುವ ಮಕ್ಕಳ ಸಂಖ್ಯೆಯನ್ನು ಗಮನಿಸಿದಾಗ ಮೂರು ಪಟ್ಟು ಅಧಿಕವಿದೆಯೆಂದು ತಿಳಿದು ಬಂದಿದೆ. ಇನ್ನೊಂದು ವಿಧದಲ್ಲಿ ತಿಳಿಸುವುದಾದರೆ ಶಾಲೆಯಿಂದ ಹೊರಗಿರುವ ಒಟ್ಟು ಮಕ್ಕಳಲ್ಲಿ ಶೇ. 75ರಷ್ಟು ಮಕ್ಕಳು ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಒಟ್ಟು 60 ಲಕ್ಷ ಮಕ್ಕಳಲ್ಲಿ32.4%. ಮಕ್ಕಳು ಪರಿಶಿಷ್ಟ ವರ್ಗಗಳಿಗೆ ಸೇರಿದ್ದರೆ, 25.7% ಮಂದಿ ಮುಸ್ಲಿಮ್ ಸಮುದಾಯದವರುಹಾಗೂ 16.6%ಮಂದಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ.
2014ರಲ್ಲಿ ನಡೆಸಲಾದ ಐಎಂಆರ್ಬಿ ಎಂಬ ಸಮೀಕ್ಷೆಯೊಂದರ ಪ್ರಕಾರ ಶಾಲೆಯಿಂದ ಹೊರಗಿರುವ ಹೆಚ್ಚಿನ ಮಕ್ಕಳು ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯದವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 16.12 ಮಕ್ಕಳು ಶಾಲೆಯಿಂದ ಹೊರಗಿದ್ದರೆ ಅವರಲ್ಲಿ 5.6 ಲಕ್ಷ, 5.57 ಲಕ್ಷಹಾಗೂ 1.08 ಲಕ್ಷ ಮಕ್ಕಳು ಪರಿಶಿಷ್ಟ ಜಾತಿ, ಮುಸ್ಲಿಮ್ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಅಂತೆಯೇ ಬಿಹಾರದಲ್ಲಿ ಈ ಸಂಖ್ಯೆ 11.69 ಲಕ್ಷ ಆಗಿದ್ದರೆ, ಇದರಲ್ಲಿ5.24 ಲಕ್ಷ, 2.46 ಲಕ್ಷ ಮಕ್ಕಳು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರೆ 31,000 ಮಕ್ಕಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಗೋವಾದಲ್ಲಿ 6ರಿಂದ 13ರ ಹರೆಯದ ಮಕ್ಕಳಲ್ಲಿ ಶಾಲೆಯಿಂದ ಹೊರಗಿರುವವರು ಯಾರೂ ಇಲ್ಲವಾದರೆ ಲಕ್ಷದ್ವೀಪ ಹಾಗೂ ಪುದುಚ್ಚೇರಿಗಳಲ್ಲಿ ಕ್ರಮವಾಗಿ 267 ಹಾಗೂ 285 ಮಕ್ಕಳು ಶಾಲೆಗೆ ಹೋಗುತ್ತಿಲ್ಲ.