ಮೋದಿಯ ಅತಿದೊಡ್ಡ ಅಸ್ತ್ರ ರಾಹುಲ್ ಗಾಂಧಿ : ಮಮತಾ ಬ್ಯಾನರ್ಜಿ
ಕೊಲ್ಕತ್ತಾ,ಮೇ19 : ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ವಿಜಯ ಆಚರಿಸುತ್ತಿರುವ ಪಕ್ಷ ಕಾರ್ಯಕರ್ತರನ್ನು ಭೇಟಿಯಾದಮಮತಾತನ್ನ ವಿರುದ್ಧಕೀಳುಮಟ್ಟದ ಪ್ರಚಾರ ಕೈಗೊಂಡ ತನ್ನ ಎದುರಾಳಿಗಳನ್ನು ಟೀಕಿಸುತ್ತಾ ‘ಮೋದಿಯ ಅತಿ ದೊಡ್ಡಅಸ್ತ್ರ ರಾಹುಲ್ ಗಾಂಧಿ. ನಾನಿಷ್ಟೇ ಹೇಳಬಯಸುತ್ತೇನೆ’ ಎಂದು ಸುದ್ದಿಗಾರರು ಮತ್ತೆ ಕಾಂಗ್ರೆಸ್ ಜತೆ ಕೈಜೋಡಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕಾಂಗ್ರೆಸ್ ಹಿನ್ನಡೆಗೆ ರಾಹುಲ್ ಗಾಂಧಿಯೇ ಕಾರಣ ಎಂದೂ ಅವರು ಹೇಳಿದರು.
ತಮ್ಮ ಪಕ್ಷದ ಗೆಲುವು ಅಭೂತಪೂರ್ವವೆಂದು ಬಣ್ಣಿಸಿದ ಅವರುತಮ್ಮ ಪಕ್ಷದ ಮೇಲೆ ವಿಶ್ವಾಸವಿರಿಸಿದ ಜನತೆಯನ್ನು ಅಭಿನಂದಿಸಿದರು. ‘‘ರಾಜಕೀಯದಲ್ಲಿ ಲಕ್ಷ್ಮಣ ರೇಖೆಯೊಂದಿರಬೇಕು. ನಮ್ಮ ವಿರುದ್ಧ ಕೆಟ್ಟ ಪ್ರಚಾರಾಂದೋಲನ ನಡೆಯಿತು. ಇದು ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲ,’’ಎಂದು ಮಮತಾ ಹೇಳಿದರು. ಹೀಗೆ ಮಾಡಿದವರಿಗೆ ಜನರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಮಮತಾ ಬಣ್ಣಿಸಿದರು.
ಯಾವುದೇ ಬೇಧಭಾವವಿಲ್ಲದೇ ಸುದ್ದಿ ಪ್ರಕಟಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಧನ್ಯವಾದ ಹೇಳಿದ ಮಮತಾ ಅದೇ ಸಮಯ ಈ ಮಾತು ಬಂಗಾಳಿ ಮಾಧ್ಯಮಕ್ಕೆ ಅನ್ವಯಿಸುವುದಿಲ್ಲ, ಎಂದಿದ್ದಾರೆ. ‘‘ಈ ಬಗ್ಗೆ ನನ್ನ ಬಾಯನ್ನು ತೆರೆಯಲು ಬಲವಂತ ಮಾಡಬೇಡಿ,’’ಎಂದೂ ಅವರು ಹೇಳಿದರು.
ಎಡ ಪಕ್ಷದೊಂದಿಗೆ ಮೈತ್ರಿ ಸಾಧಿಸಿದ್ದಕ್ಕೆ ಕಾಂಗ್ರೆಸ್ ಕ್ಷಮಾಪಣೆ ಸಲ್ಲಿಸಬೇಕು ಎಂದು ಹೇಳಿದ ಮಮತಾ ಎರಡೂ ಪಕ್ಷಗಳು ಜತೆಯಾಗಿ ಬಹಳ ದೊಡ್ಡ ತಪ್ಪು ಮಾಡಿವೆ ಎಂದಿದ್ದಾರೆ.