ಪ್ರಯಾಣದ ಪ್ರಯಾಸ ಕಡಿಮೆ ಮಾಡುವ ಗ್ಯಾಜೆಟ್‌ಗಳು

ಪ್ರಯಾಣ ನಮಗಿಷ್ಟ. ಆ ಪ್ರಯಾಣವನ್ನು ಸ್ಟೈಲ್‌ನಲ್ಲಿ ಮುಗಿಸಬೇಕು ಎಂದೂ ಅಂದುಕೊಂಡಿರುತ್ತೇವೆ. ಹೀಗಾಗಿ ನಿಮ್ಮ ವಾರ್ಡ್‌ರೋಬಿನಿಂದ ಎಲ್ಲವನ್ನೂ ಪ್ಯಾಕ್ ಮಾಡಿಕೊಳ್ಳಿ. ನಿಮ್ಮ ಟೆಕ್ ಗ್ಯಾಜೆಟ್ ಗಳನ್ನು ಮರೆಯಬೇಡಿ. ಆದರೆ ಯಾವ ಗ್ಯಾಜೆಟ್ ಗಳು? ಈ ಬೇಸಗೆಯಲ್ಲಿ ನೀವು ಕೊಂಡೊಯ್ಯಬಹುದಾದ ಒಂಭತ್ತು ಪ್ರಯಾಣ ಸ್ನೇಹಿ ಗ್ಯಾಜೆಟ್ ಗಳ ವಿವರ ಇಲ್ಲಿದೆ.
ಪೋರ್ಟೇಬಲ್ ಫ್ಯಾನ್

ನೀವು ಚಾರಣ ಮಾಡಲು ಯೋಜಿಸಿದಲ್ಲಿ ನಿಮ್ಮ ಚಾರಣವನ್ನು ಅತ್ಯುತ್ತಮಗೊಳಿಸಬಲ್ಲ ಸೂಪರ್ ಕ್ಯೂಟ್ ಗ್ಯಾಜೆಟ್ ಇದು. ಈ ಪೋರ್ಟೇಬಲ್ ಗ್ಯಾಜೆಟ್ ಟಾರ್ಚ್ ತರಹವೂ ಕೆಲಸ ಮಾಡುತ್ತದೆ ಮತ್ತು ನಿಮ್ಮ ಮುಖದಲ್ಲಿ ಬೀಳುತ್ತಿರುವ ಬೆವರನ್ನೂ ದೂರ ಮಾಡುತ್ತದೆ. ಇದರ ಬೆಲೆ ಕೇವಲ ರು. 200!
ಕ್ವಿರ್ಕಿ ಹೆಡ್ ಫೋನ್ ಗಳು

ಉತ್ತಮ ಪ್ರವಾಸದಲ್ಲಿ ಮೋಜಿನ ಸಂಗೀತವಿದ್ದರೆ ಚೆನ್ನ. ಹೀಗಾಗಿ ನೀವು ಎಲ್ಲೇ ಹೋದರೂ ಒಂದು ಇಯರ್ ಫೋನ್ ಜೊತೆಗಿರಲಿ. ಇದು ನಿಮ್ಮ ಪ್ರಯಾಣವನ್ನು ಬೋರಿಂಗ್ ಆಗದಂತೆ ತಡೆಯುತ್ತದೆ. ಆದಷ್ಟು ಹಗುರವಾದ ಇಯರ್ ಫೋನ್ ಜೊತೆಗಿರಲಿ.
ವಾಟರ್ ಪ್ರೂಫ್ ಫೋನ್ ಕವರ್ ಗಳು

ಕಡಲತೀರದಲ್ಲಿ ಮೋಜು ಮಾಡಲು ಬಯಸುವವರು ಈ ಬಗ್ಗೆ ಎಚ್ಚರವಹಿಸಬೇಕು. ಇಡೀ ದಿನ ಕಡಲತೀರದಲ್ಲಿ ಬಿದ್ದುಕೊಂಡಿರಲು ಬಯಸುತ್ತಿದ್ದಲ್ಲಿ ವಾಟರ್ ಪ್ರೂಫ್ ಕೇಸನ್ನು ಫೋನಿಗಾಗಿ ತೆಗೆದುಕೊಳ್ಳಿ. ನಂತರ ನೊಂದುಕೊಳ್ಳುವ ಬದಲಾಗಿ ಸುರಕ್ಷೆ ಪಡೆದಿರುವುದು ಉತ್ತಮ. ಅದಕ್ಕಾಗಿ ಹಣ ತೆರಲು ಇಷ್ಟವಿಲ್ಲದಿದ್ದರೆ ಬಳಸಿದ ಹಳೇ ಪ್ಲಾಸ್ಟಿಕ್ ಬ್ಯಾಗಲ್ಲೇ ಫೋನ್ ಕಟ್ಟಿಕೊಳ್ಳುವುದು ಸುಲಭದ ಉಪಾಯ!
ಟ್ಯಾಬ್ಲೆಟ್

ಈ ಬೇಸಗೆಯಲ್ಲಿ ಕೆಲಸ ಮತ್ತು ಸಂತೋಷ ಎರಡಲ್ಲೂ ಮಿಶ್ರ ಮಾಡುವುದು ಉತ್ತಮ. ಟ್ಯಾಬ್ಲೆಟ್ ಬದಲಾಗಿ ಲಾಪ್ ಟಾಪ್ ಇಟ್ಟುಕೊಳ್ಳಿ. ಲ್ಯಾಪ್ ಟಾಪ್ ಹೊರೆ ಬೇಡವಿದ್ದರೆ ಕೀಬೋರ್ಡ್ ಇರುವ ಟ್ಯಾಬ್ಲೆಟುಗಳನ್ನು ಬಳಸಿ. ಅದು ಕೊಂಡೊಯ್ಯಲು ಹಗುರ ಮತ್ತು ನಿಮ್ಮ ಸಿನಿಮಾ ಮತ್ತು ವಿಡಿಯೋಗಳ ಬ್ಯಾಕಪ್ ಇರುತ್ತದೆ.
ಪೊಲರಾಯ್ಡ ಕ್ಯಾಮರಾ

ಈ ರೀತಿಯ ಕ್ಯಾಮರಾ ಈಗಿಲ್ಲ ಎಂದುಕೊಂಡರೆ ಮತ್ತೊಮ್ಮೆ ಯೋಚಿಸಿ. ಪೊಲರಾಯ್ಡೆ ಕ್ಯಾಮರಾ ಪೋಸ್ಟ್ ಕಾರ್ಡ್ ಫೋಟೋಗಳನ್ನು ಕ್ಲಿಕ್ ಮಾಡಿ ಮನೆಗೆ ಕಳುಹಿಸಲು ನೆರವಾಗುತ್ತದೆ. ಪ್ರಯಾಣದಲ್ಲಿ ಹೊಸ ಸ್ನೇಹಿತರಾದಲ್ಲಿ, ಅಲ್ಲೇ ಅವರಿಗೆ ಫೋಟೋಗಳನ್ನು ಕೊಡಬಹುದು. ಇದು ಫೋಟೋಗಳಿಗೆ ವಿಂಟೇಜ್ ಟಿಂಗ್ ಕೊಡುತ್ತದೆ.
ಫಿಟ್ನೆಸ್ ಬ್ಯಾಂಡ್

ಫಿಟ್ನೆಸ್ ಬಗ್ಗೆ ಕಾಳಜಿ ಇದ್ದಲ್ಲಿ ಪ್ರವಾಸದಲ್ಲಿ ವ್ಯಾಯಾಮ ಮಾಡುವ ಬಗ್ಗೆ ಚಿಂತೆ ಬೇಡ. ಫಿಟ್ನೆಸ್ ಬ್ಯಾಂಡ್ ನೆರವಾಗಲಿದೆ. ನಡೆಯುವಾಗ, ಓಡಾಡುವಾಗ ವ್ಯಾಯಾಮವಾಗುತ್ತದೆ. ಬ್ಯಾಂಡ್ ಮೇಲೆ ಹೆಜ್ಜೆ ಇಟ್ಟರೆ ಸ್ವಲ್ಪ ಫಿಟ್ನೆಸ್ ಪ್ರಯತ್ನ ಮಾಡಿದ ಖುಷಿಯಾಗಲಿದೆ.
ಮೆಮೊರಿ ಇರುವ ಸ್ಮಾರ್ಟ್‌ಫೋನ್

ಪ್ರವಾಸದಲ್ಲಿ ಮೆಮೊರಿ ಕಡಿಮೆಯಾದಲ್ಲಿ ಕಷ್ಟ. ಫೋಟೋ ತೆಗೆಯುವಾಗ ಸ್ಕ್ರೀನಲ್ಲಿ ಮೆಮೊರಿ ಫುಲ್ ಎಂದು ಬರಬಹುದು. ಸ್ಮಾರ್ಟ್ ಫೋನಲ್ಲಿ ಫೋಟೋ, ವಿಡಿಯೋ, ಸಂಗೀತಕ್ಕೆ ಸಾಕಷ್ಟು ಮೆಮೊರಿ ಇರುವುದು ಖಚಿತಪಡಿಸಿ.
ಬ್ಲೂಟೂತ್ ಪೋರ್ಟೇಬಲ್ ಸ್ಪೀಕರ್

ಇದಿಲ್ಲದೆ ರಜಾ ಪೂರ್ಣವಾಗುವುದಿಲ್ಲ. ಸಂಗೀತವನ್ನು ಸ್ನೇಹಿತರ ಜೊತೆಗೆ ಹಂಚಲು, ಹೊಟೇಲ್ ಕೋಣೆಯಲ್ಲಿ ಅಥವಾ ಕಡಲ ತೀರದಲ್ಲಿ ಖಾಸಗಿ ಪಾರ್ಟಿಗಳಲ್ಲಿ ಸಂಗೀತ ಹರಿಸಲು ಪೋರ್ಟೇಬಲ್ ಸ್ಪೀಕರುಗಳು ಉತ್ತಮ.
ಸೆಲ್ಫಿ ಸ್ಟಿಕ್

ಫೋಟೋ ತೆಗೆಯಲು ಸುಲಭ ವಿಧಾನವಿದು. ಸರಿಯಾದ ಬಟನ್ ಮತ್ತು ಉತ್ತಮ ಆಂಗಲ್ ಪಡೆಯಲು ಕಷ್ಟಪಡಬೇಕಾಗಿಲ್ಲ. ತಂಡದ ಫೋಟೋ ತೆಗೆಯುವಾಗ ಒಬ್ಬರು ಹೊರಗಿರುವ ಅಗತ್ಯವೂ ಇರುವುದಿಲ್ಲ.
ಪವರ್ ಬ್ಯಾಂಕ್

ಬ್ಯಾಟರಿ ಖಾಲಿಯಾಗುವುದನ್ನು ತಪ್ಪಿಸಲು ಪವರ್ ಬ್ಯಾಂಕ್ ಇರಬೇಕು. ಕರೆ ಮಾಡಲು, ಫೋಟೋ ತೆಗೆಯಲು ಸ್ಮಾರ್ಟ್ ಫೋನಲ್ಲಿ ಬ್ಯಾಟರಿ ಖಾಲಿಯಾದರೆ ಚಾರ್ಜ್ ಮಾಡಿಕೊಳ್ಳಬಹುದು.
ನಿಮ್ಮ ಮರೆಯಲಾಗದ ಪ್ರವಾಸಕ್ಕೆ ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಗ್ಯಾಜೆಟ್ ಪ್ಯಾಕ್ ಮಾಡಿ ಪ್ರಯಾಣ ಹೊರಡಿ.
ಕೃಪೆ:goodtimes.ndtv.com







