ನಿಮ್ಮ ಬಜೆಟಿನಲ್ಲಿ ಹೋಗಬಹುದಾದ 8 ವಿದೇಶಗಳು

ರಜಾದ ಮಜಾ ಅನುಭವಿಸಲು ಪ್ರವಾಸದ ಯೋಜನೆ ಹಾಕುತ್ತಿದ್ದೀರಾ? ಅದರಿಂದ ಪಾಕೆಟಿಗೆ ಕತ್ತರಿ ಬೀಳುತ್ತದೆ ಎಂದು ಗೊತ್ತಿದ್ದರೂ ಸುಮ್ಮನಿರುವುದಿಲ್ಲ. ಬಜೆಟ್ ಒಳಗೆ ರಜಾ ನೋಡುವುದು ಸುಲಭವಲ್ಲ. ಕಡಿಮೆ ಜನರಿರುವ ಹೆಚ್ಚು ಉತ್ತಮ ಸ್ಥಳಗಳು ವಿಶ್ವದಾದ್ಯಂತ ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇವೆ.
1. ಕ್ಸಿಯಾನ್- ಚೀನಾ

ಕ್ಸಿಯಾನ್ ಚೀನಾದ ಜನಪ್ರಿಯ ಪ್ರವಾಸಿ ತಾಣ. ಬೀಜಿಂಗ್ ಮತ್ತು ಷಾಂಗೈನ ಅಬ್ಬರವಿಲ್ಲ. ಚೀನಾ ಸಂಸ್ಕೃತಿ ಮತ್ತು ಅದ್ಭುತವನ್ನು ಕಾಣಬಹುದು. ಮ್ಯೂಸಿಯಂ, ಸ್ಮಾರಕ ಮತ್ತು ಇತಿಹಾಸ ಇಲ್ಲಿದೆ. ಬೌದ್ಧಮತವನ್ನು ನಂಬುವವರಿಗೆ ಉತ್ತಮ ತಾಣ. ಸಣ್ಣ ಮತ್ತು ದೊಡ್ಡ ವೈಲ್ಡ್ ಗೂಸ್ ಪಗೋಡ, ಟೆರಕೋಟಾ ಮ್ಯೂಸಿಯಂ ಇಲ್ಲಿದೆ.
2. ಬ್ರಾಸೊವ್- ರೊಮಾನಿಯ

ಈ ನಗರ ಡ್ರಾಕುಲಗಳ ಮನೆ! ಬ್ರಾನ್ ಕಾಸಲ್ ಬ್ರಾಸೋವ್ ಸಮೀಪವೇ ಇದೆ. ಯುರೂಪಿನ ಅತೀ ಕಿರಿದಾದ ರಸ್ತೆ ಇಲ್ಲಿದೆ. ಟಿಕೆಟುಗಳೂ ಅಗ್ಗ. ಭಾರತೀಯ ಪ್ರವಾಸಿಗರು ಇಲ್ಲಿಗೆ ಹೆಚ್ಚು ಬರುತ್ತಾರೆ. ಹೆಚ್ಚು ಹಣ ಖರ್ಚಾಗದೆ ತಿರುಗಾಡಬಹುದು.
3. ನುವಾರ ಎಲಿಯ- ಶ್ರೀಲಂಕಾ

ಗಾಲ್ಫ್, ಜಲಪಾತ, ಹೈಕಿಂಗ್ ಇತ್ಯಾದಿ ಇಲ್ಲಿದೆ. ಸಾಹಸಿಗರಿಗೆ ಉತ್ತಮ ತಾಣ. ಬೆಳಕಿನ ಊರೆಂದು ಕರೆಯಲಾಗುತ್ತದೆ. ನೀಲ ಸಾಗರದಲ್ಲಿ ದೋಣಿಯಾನ ಮತ್ತು ಮೀನು ಹಿಡಿಯಬಹುದು. ಭಾರತಕ್ಕೆ ಹತ್ತಿರವಿರುವ ಕಾರಣ ಬೇಗನೇ ಹೋಗಿ ಬರಬಹುದು.
4. ವಿಯೆಟ್ನಾಂ- ಲಾವೋಸ್

ಅತೀ ಕಡಿಮೆ ಬಜೆಟಲ್ಲಿ ಉತ್ತಮ ತಾಣ. ಹೆಚ್ಚು ಜನರೂ ಇರುವುದಿಲ್ಲ. ಸುಂದರ ದೇಗುಲ ಮತ್ತು ಬೆಳಗಿನ ಮಾರುಕಟ್ಟೆಗಳಿವೆ. ತಾಜಾ ರೆಸ್ಟೊರೆಂಟ್, ಆಭರಣ, ಹಣ್ಣುಗಳ ಮಳಿಗೆ, ಕರಕುಶಲ ವಸ್ತುಗಳು ಇಲ್ಲಿವೆ.
5. ನುಸಾ ಲೆಂಬೊಂಗನ್- ಬಾಲಿ

ಇದು ಅತೀ ಅಗ್ಗ. ಚಾರಣ, ಸರ್ಫಿಂಗ್ ಮತ್ತು ಕಡಲ ತೀರಗಳು ಆಕರ್ಷಣೆ. ಅತ್ಯುತ್ತಮ ರೆಸ್ಟೊರೆಂಟುಗಳಿವೆ. ಕಡಿಮೆ ಹಣದಲ್ಲಿ ಉತ್ತಮ ರಿಲ್ಯಾಕ್ಸ್ ಪ್ರವಾಸ ಮಾಡಬಹುದು.
6. ಶುಸ್ಟೇಕ್ ಪ್ಲೇಸ್- ಭೂತಾನ್

ಶ್ರೀಮಂತ ಸಂಸ್ಕೃತಿ ಮತ್ತು ಭೂತಾನಿ ಊಟಕ್ಕೆ ಪ್ರಸಿದ್ಧ. ಅದ್ಭುತ ಹಬ್ಬಗಳ ಸಮಯದಲ್ಲೂ ಭೇಟಿ ನೀಡಬಹುದು. ಹಿಮಾಲಯದ ಹವೆ ಸವಿಯಬಹುದು. ಬಣ್ಣ ಬಣ್ಣದ ಫೋಟೋಗಳನ್ನು ತೆಗೆಯಬಹುದು. ಎಲ್ಲವೂ ಕಡಿಮೆ ಬೆಲೆಯಲ್ಲಿ ಸಿಗಲಿದೆ.
7. ಬೆನ್ ಟ್ರೀ-ವಿಯೆಟ್ನಾಂ

ಅದ್ಭು ಪ್ರಕೃತಿ ಸೌಂದರ್ಯ, ನದಿಗಳು ವಿಯೆಟ್ನಾಂ ಆಕರ್ಷಣೆ. ಮಿಂಚುಹುಳಗಳು ರಾತ್ರಿಸಮಯದಲ್ಲಿ ಕಂಪನಿ ಕೊಡಲಿವೆ. ಆಗಸವನ್ನು ನೋಡುತ್ತಾ ಪ್ರಕೃತಿಯ ಸೌಂದರ್ಯ ಸವಿಯಬಹುದು. ಇಲ್ಲಿನ ತೆಂಗಿನ ಕಾಯಿ ಫ್ಯಾಕ್ಟರಿಗೆ ಭೇಟಿ ಕೊಡಲೇಬೇಕಿದೆ. ದೋಣಿ, ಬೈಕ್ ಅಥವಾ ನಡೆದುಕೊಂಡೇ ಸುಂದರ ತಾಣಗಳಿಗೆ ಭೇಟಿ ನೀಡಬಹುದು.
8. ಖಾವೋ ಸ್ಯಾನ್ ರಸ್ತೆ- ಥಾಯ್ಲಂಡ್

ಖಾವೋ ಸ್ಯಾನ್ ರಸ್ತೆಗೆ ನಡೆದಾಡಿಕೊಂಡು ಹೋಗುವ ಅನುಭವವೇ ಅದ್ಭುತ. ರಸ್ತೆಯ ಸ್ನಾಕ್ ಅಥವಾ ಧೀರ್ಘ ಮಸಾಜ್ ಕಡಿಮೆ ಬೆಲೆಯಲ್ಲಿ ಅದ್ಭುತ ಅನುಭವ ಕೊಡಲಿದೆ. ಬ್ಯಾಂಕಾಕ್ ನದಿ ದಂಡೆಯ ದೇಗುಲಕ್ಕೂ ಭೇಟಿ ನೀಡಬಹುದು.
ಹಾಗಿದ್ದರೆ ಏಕೆ ತಡ, ಬ್ಯಾಗ್ ಕಟ್ಟಿಕೊಂಡು ಹೊರಡಿ.
ಕೃಪೆ:goodtimes.ndtv.com







