ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ಮೊಂಟೆಪದವಿನ ಕುಟುಂಬಕ್ಕೆ ನೆರವಾದ ಇಂಡಿಯ ಫೆಟರ್ನಿಟಿ ಫಾರಂ

ಬುರೈದ: ನಾಲ್ಕು ವರ್ಷಗಳ ಹಿಂದೆ ಸೌದಿ ಅರೇಬಿಯಾದ ಜುಬೈಲ್ ಎಂಬಲ್ಲಿ ಉದ್ಯೋಗಕ್ಕೆ ಸೇರಿದ ಅಬ್ಬಾಸ್ ಕಳೆದ ನವಂಬರ್ ನಲ್ಲಿ ವಿವಾಹವಾಗಿ ಬಳಿಕ ಅವರು ವಿದೇಶಕ್ಕೆ ತೆರಳಿ ಅಲ್ಲಿಂದ ಮೂರು ತಿಂಗಳ ವಿಸಿಟಿಂಗ್ ವೀಸಾ ಪಡೆದು ಪತ್ನಿ ಹಾಗೂ ತಂದೆ ತಾಯಿಗಳಿಗೆ ಉಮ್ರಾಕ್ಕೆ ಕರೆಸಿಕೊಂಡಿದ್ದರು.
ಅದರಂತೆ ಅಬ್ಬಾಸ್ ಹಾಗೂ ಕುಟುಂಬ ಕೇರಳದ ಕಬೀರ್ ಕುಟುಂಬದ ಜೊತೆ ಸೇರಿ ಉಮ್ರಾಕ್ಕೆ ತೆರಳಿ ಉಮ್ರಾ ನಿರ್ವಹಿಸಿ ಮದೀನದಲ್ಲಿ ಝಿಯಾರತ್ ಮಾಡಿ ಶನಿವಾರ ಹಿಂತಿರುಗುತ್ತಿದ್ದ ವೇಳೆ ಬುರೈದಿಂದ ಸುಮಾರು 250 ಕಿಮೀ ದೂರದ ಉಗ್ಲತ್ ಅಲ್ ಸುಗುರ್ ಎನ್ನುವ ಊರಿನಲ್ಲಿ ಈ ಅಪಘಾತ ಸಂಭವಿಸಿ ಅಪಘಾತದಲ್ಲಿ ಅಬ್ಬಾಸ್ ಹಾಗೂ ತಾಯಿ ಖದೀಜಮ್ಮ ನಿಧನರಾದರು. ಮತ್ತೆ ಅಬ್ಬಾಸ್ ರವರ ಪತ್ನಿ ಹಾಗೂ ತಂದೆ ಮಹಮ್ಮದ್ ಹಾಗೂ ಕೇರಳ ಕಬೀರ್ ಕುಟುಂಬದ ಸದಸ್ಯರಾದ ಪತ್ನಿ ಹಾಗೂ ಮಕ್ಕಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳೀಯ ಅಲ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತದ ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವರ್ತರಾದ ಐ.ಎಫ್.ಎಫ್ ರಿಯಾದ್, ಜಿಲ್ಲಾಧ್ಯಕ್ಷ ರವೂಫ್ ಕಲಾಯಿ ರವರ ನೇತೃತ್ವದಲ್ಲಿ ಶಬೀರ್ ತಲಪಾಡಿ, ಅಶ್ರಫ್ ಕ್ರಿಷ್ಣಾಪುರ, ಸುಹೇಲ್ ಉಲ್ಲಾಳ, ಹನೀಫ್ ಅಲ್ರಾಸ್, ಅಯಾಝ್ ತಂಡ ರಚಿಸಿ ಅಬ್ಬುಲ್ ಕಿನಾನ್ ರವರನ್ನು ಭೇಟಿಯಾಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಮಯ್ಯತ್ ನ ಇಟ್ಟಿರುವ ಆಸ್ಪತ್ರೆಗೆ ಭೇಟಿ ಮಾಡಿ ಮಯ್ಯತ್ ಬಿಟ್ಟುಕೊಡಬೇಕಾದರೆ ದಾಖಲೆ ಪತ್ರಗಳ ವರ್ಕ್ ಕೆಲಸದಲ್ಲಿ ನಿರತರಾದರು. ಅದಲ್ಲದೇ ರಾಯಭಾರಿ ಕಚೇರಿಗೆ ನೀಡಬೇಕಾದ ಫೈಲ್ ಗಳನ್ನು ಸಂಗ್ರಹಿಸಿ ಅಲ್ಲಿಂದ ಸಹಿ ಪಡೆದು ಅದನ್ನು ಸೌದಿ ಪೊಲೀಸ್ ಇಲಾಖೆ ಠಾಣೆಗೆ ನೀಡಿ ಮಯ್ಯತನ್ನು 18/05/2016 ರಂದು ಬುಧವಾರ ಸ್ಥಳೀಯ ಅಸೈಖ್ ಜಾಮಿಯ ಮಸೀದಿಯಲ್ಲಿ ಮಯ್ಯತ್ ಕಾರ್ಯಗಳನ್ನು ನಿರ್ವಹಿಸಿ ಅಸರ್ ನಮಾಝ್ ನ ನಂತರ ಜನಾಝ ನಮಾಝ್ ನಿರ್ವಹಿಸಿ ಜಾಮಿಯ ಮಸೀದಿಯ ಕಬರ್ ಸ್ಥಾನದಲ್ಲಿ ದಫನ್ ಕಾರ್ಯ ಮಾಡಲಾಯಿತು.
ಐ.ಎಫ್.ಎಫ್ ನ ಕೆಲಸ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ಕುಟುಂಬ
ಹೆಚ್ಚಿನ ಚಿಕಿತ್ಸೆಗಾಗಿ ಅಬ್ಬಾಸ್ ನ ಪತ್ನಿ ಮೆಹನಾಝ್ ,ತಂದೆ ಮಹಮ್ಮದ್ ರವರನ್ನು ಝೈನುದ್ದೀನ್ ರವರು ಬುಧವಾರ ಸಂಜೆ ದಮ್ಮಾಮ್ ಮೂಲಕ ಊರಿಗೆ ಕರೆದುಕೊಂಡು ಹೋಗುವಾಗ ಐ.ಎಫ್.ಎಫ್ ನ ಕೆಲಸ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿ ದುಆ ಮಾಡಿದರು.







