ಕರಂಗಲ್ಪಾಡಿ: ಮರದ ಕೊಂಬೆ ಬಿದ್ದು ಹಾನಿ

ಮಂಗಳೂರು, ಮೇ 19: ನಗರದ ಬಂಟ್ಸ್‌ಹಾಸ್ಟೆಲ್ ಬಳಿಯ ಕರಂಗಲ್ಪಾಡಿ ಮಾರುಕಟ್ಟೆ ಎದುರಿನಲ್ಲಿದ್ದ ಮರವೊಂದರ ಕೊಂಬೆ ಬಿದ್ದು ಮೂರು ಅಂಗಡಿಗಳು, ಟ್ರಾನ್ಸ್‌ಫಾರ್ಮರ್ ಹಾಗೂ ಕಾರೊಂದು ಹಾನಿಗೊಂಡ ಬಗ್ಗೆ ವರದಿಯಾಗಿದೆ.
ಇಂದು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಮಾರುಕಟ್ಟೆ ಎದುರಿನ ಬೃಹತ್ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಮಾರುಕಟ್ಟೆ ಕಾಂಪೌಂಡ್ ಒಳಗಿನ ಮೂರು ಅಂಗಡಿಗಳಿಗೆ ಹಾಗೂ ಕಾಂಪೌಂಡ್‌ನ ಹೊರಗಡೆ ನಿಲ್ಲಿಸಲಾಗಿದ್ದ ಕಾರೊಂದಕ್ಕೆ ಹಾನಿಯಾಗಿವೆ. ಕೊಂಬೆಯು ವಿದ್ಯುತ್ ತಂತಿಯ ಮೇಲೆ ಬಿದ್ದು ಟ್ರಾನ್ಸ್‌ಫಾರ್ಮರ್ ಮುರಿದು ಬಿದ್ದಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಕೊಂಬೆಗಳನ್ನು ಕತ್ತರಿಸಿದರು.
ಮಾರುಕಟ್ಟೆಯ ಮುಂಭಾಗ ನಿತ್ಯ ಜನದಟ್ಟಣೆ ಸಾಮಾನ್ಯವಾಗಿರುತ್ತದೆ. ಆದರೆ ಇಂದು ದ.ಕ. ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಜನದಟ್ಟಣೆ ಹಾಗೂ ವಾಹನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಮನಪಾ ಆಯುಕ್ತ ಡಾ.ಎಚ್.ಗೋಪಾಲಕೃಷ್ಣ ಮತ್ತು ಕಾರ್ಪೊರೇಟರ್ ಡಿ.ಕೆ.ಅಶೋಕ್ ಸ್ಥಳಕ್ಕೆ ಭೇಟಿ ನೀಡಿದರು.
Next Story





