ಎತ್ತಿನಹೊಳೆ ಯೋಜನೆ ವಿರುದ್ಧದ ಅರ್ಜಿ ಸ್ವೀಕರಿಸಿದ ಚೆನ್ನೈ ಹಸಿರುಪೀಠ

ಮಂಗಳೂರು, ಮೇ 19:ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಪರಿಸರ ಹೋರಾಟಗಾರ ಸಕಲೇಶಪುರದ ಸೋಮಶೇಖರ್ ಎಂಬವರು ಸಲ್ಲಿಸಿದ ನೂತನ ಅರ್ಜಿಯನ್ನು ಚೆನ್ನೈನ ಹಸಿರುಪೀಠ ಗುರುವಾರ ಸ್ವೀಕರಿಸಿದೆ.
ಅರ್ಜಿಯಲ್ಲಿ ಹೆಸರಿಸಲಾದ 10 ಮಂದಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಈ ಬಗೆಗಿನ ಮುಂದಿನ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದೆ.
ಈ ಹಿಂದೆ ಸೋಮಶೇಖರ್ ಹಸಿರು ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಸಿರುಪೀಠ ವಜಾಗೊಳಿಸಿತ್ತು. ಸೋಮಶೇಖರ್‌ರಿಗೆ ಹೊಸ ಅರ್ಜಿ ಸಲ್ಲಿಸಲು ಪೀಠವು ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸ ಅರ್ಜಿ ಸಲ್ಲಿಸಿದ್ದರು. ಮೇ 12ರಂದು ಈ ಕುರಿತು ವಿಚಾರಣೆ ನಡೆದಿದ್ದರೂ ಪೀಠವು ಅರ್ಜಿಯನ್ನು ಸ್ವೀಕರಿಸಿರಲಿಲ್ಲ.
ಇದೀಗ ಪೀಠವು ಸೋಮಶೇಖರ್ ಅವರ ಹೊಸ ಅರ್ಜಿಯನ್ನು ಸ್ವೀಕರಿಸಿ ಅರ್ಜಿಯಲ್ಲಿ ಹೆಸರಿಸಲಾದ 10 ಮಂದಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
Next Story





