ವೈದ್ಯಕೀಯ ಮಂಡಳಿಯ ನೀಟ್ (NEET)
ಅನ್ಯಾಯದ ಪರ ಮತ್ತು ನಿರಂಕುಶವಾಗಿರುವ

ಭಾರತದ ಬಹುದೊಡ್ಡ ವೈವಿಧ್ಯತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಪರಿಗಣಿಸಿ ಸಂವಿಧಾನವು ಪ್ರತೀ ರಾಜ್ಯಗಳು ಸರಕಾರಿ ಉದ್ಯೋಗಗಳಿಗೆ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ತಮ್ಮ ಸ್ವಂತ ಪರೀಕ್ಷೆಗಳನ್ನು ನಡೆಸುತ್ತವೆ. ಇದೇ ರೀತಿಯಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳು ಕೂಡಾ ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿವೆ ಮತ್ತು ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುತ್ತವೆ. ಖಂಡಿತವಾಗಿಯೂ, ಸಮಸ್ಯೆಯಿತ್ತು. ವಿದ್ಯಾರ್ಥಿಗಳ ದಾಖಲಾತಿಯ ವಿಷಯದಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಅವುಗಳ ಕಾಲೇಜುಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿದ್ದವು. ಸರಕಾರವು ತನ್ನ ಸ್ವಂತ ಸಂಸ್ಥೆಗಳ ಹೊರತಾಗಿ ಖಾಸಗಿ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಹೆಚ್ಚು ಸೀಟುಗಳನ್ನು ತೆಗೆದಿಡುತ್ತಿತ್ತು. ಖಾಸಗಿ ಸಂಸ್ಥೆಗಳು ಮೇಜಿನ ಕೆಳಗಿನಿಂದ ಬಹಳ ದೊಡ್ಡ ಮೊತ್ತವನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿವೆ ಎಂಬ ಆರೋಪವೂ ಇತ್ತು. ಸರ್ವೋಚ್ಚ ನ್ಯಾಯಾಲಯ ತನ್ನ 2002ರ ನಿರ್ಣಯದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿತ್ತು, ಆದರೆ ಭಾರತೀಯ ವೈದ್ಯಕೀಯ ಮಂಡಳಿ (ಎಂಐಸಿ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅಖಿಲ ಭಾರತ ದಾಖಲಾತಿ ಪರೀಕ್ಷೆಯ ಮೂಲಕ ಈ ತೀರ್ಪನ್ನು ಬುಡಮೇಲು ಮಾಡಲು ಹೊರಟಿದೆ.
ಕತೆ
ಈ ಕತೆಯು ಸ್ವಲ್ಪ ಕ್ಲಿಷ್ಟಕರವಾಗಿದ್ದು, ಭಾರತದ ಪ್ರೌಢ ಶಿಕ್ಷಣದ ಆಳಕ್ಕೆ ಹೋಗುತ್ತದೆ. 1951ರಿಂದಲೇ ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ಮತ್ತು ಮೀಸಲಾತಿ ಸಂಬಂಧಿ ವಿಷಯಗಳನ್ನು ನಿಭಾಯಿಸುತ್ತಲೇ ಇದೆ. 1993ರ ಉಣ್ಣಿಕೃಷ್ಣನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅನನುಕೂಲತೆಯತ್ತ ಒಲವು ತೋರಿಸುತ್ತಾ ಕಾಲೇಜು ಸೀಟುಗಳ ಹಂಚಿಕೆಯನ್ನು ರಾಷ್ಟ್ರೀಯಗೊಳಿಸುವ ಪ್ರಯತ್ನವನ್ನು ಮಾಡಿತ್ತು. ಇದು ಭಯಾನಕ ವೈಫಲ್ಯವನ್ನು ಕಂಡಿತು ಯಾಕೆಂದರೆ ಉಳ್ಳವರಿಗೆ ಅನುದಾನಿತ ಸೀಟುಗಳು ಸಿಕ್ಕಿತು ಮತ್ತು ಸಂಸ್ಥೆಗಳು ಹಣದ ಕೊರತೆಯ ಬಗ್ಗೆ ದೂರಿಕೊಳ್ಳಲು ಆರಂಭಿಸಿದವು. ಕೊನೆಯದಾಗಿ ಇದು 2002ರ ಟಿಎಂಎ ಪೈ ಪ್ರಕರಣದ ಹನ್ನೊಂದು ಮಂದಿ ನ್ಯಾಯಾಧೀಶರು ನಿರ್ಣಯಿಸಿದ ಪ್ರಸಿದ್ಧ ತೀರ್ಪಿಗೆ ಹೇತುವಾಯಿತು. ಟಿಎಂಎ ಪೈ ಪ್ರಕರಣದ ತೀರ್ಪಿನ ಮುಖ್ಯಾಂಶಗಳು ಈ ರೀತಿಯಿದ್ದವು, 1. ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಕೇವಲ ಸರಕಾರ ಒಂದರಿಂದಲೇ ಒದಗಿಸಲು ಸಾಧ್ಯವಿಲ್ಲ ಬದಲಾಗಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಒಟ್ಟುಗೂಡುವಿಕೆಯಿಂದ ಮಾತ್ರ ಸಾಧ್ಯ. 2. ಅನುದಾನರಹಿತ ಕಾಲೇಜುಗಳು, ಅ. ವಿದ್ಯಾರ್ಥಿಗಳ ದಾಖಲಾತಿ, ಆ. ಆಡಳಿತ ವರ್ಗ, ಇ. ಸಿಬ್ಬಂದಿ ( ಅಭಿವೃದ್ಧಿ ಕಾಯ್ದೆಗಳ ನ್ಯಾಯಸಮ್ಮತಿ ಮತ್ತು ಅಂಗೀಕಾರಕ್ಕೆ ಬದ್ಧವಾಗಿರುತ್ತದೆ) ಮತ್ತು ಈ. ವಿವೇಕಯುತವಾದ ಶುಲ್ಕ ಮತ್ತು ವ್ಯವಹಾರ ಮುಂತಾದ ವಿಷಯಗಳಲ್ಲಿ ಸ್ವಾಯತ್ತತೆ ಹೊಂದುವ ಮೂಲಕ ಸರಕಾರಿ ಹಸ್ತಕ್ಷೇಪವನ್ನು ತಡೆಯುವುದು. ಅನುದಾನಿತವಾಗಿರುವ ಬಹುತೇಕ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಮೀಸಲಾತಿಗೆ ಸಂಬಂಧಪಟ್ಟಂತೆ ಈ ಸ್ವಾಯತ್ತತೆಯನ್ನು ಹೊಂದಿರುತ್ತವೆ. ಈ ಫಾರ್ಮುಲಾವನ್ನು ಏಳು ನ್ಯಾಯಾಧೀಶರನ್ನೊಳಗೊಂಡ 2005ರ ಇನಾಮ್ದಾರ್ ಪ್ರಕರಣದಲ್ಲಿ ದೃಢೀಕರಿಸಲ್ಪಟ್ಟಿತು. ಖಾಸಗಿ ಕಾಲೇಜುಗಳು ತಮ್ಮ ಆಯ್ಕೆಯ ವಿದ್ಯಾರ್ಥಿಗಳನ್ನು ಸ್ವಾಯತ್ತತೆಯ ಅಡಿಯಲ್ಲಿ ಪಾರದರ್ಶಕ, ನ್ಯಾಯಯುತ ಮತ್ತು ಶೋಷಣೆರಹಿತವಾಗಿ ಶುಲ್ಕವನ್ನು ಪಡೆದು ದಾಖಲಿಸಿಕೊಳ್ಳಲು ಇರುವ ಹಕ್ಕನ್ನು ಗೌರವಿಸುತ್ತಾ, ಪ್ರತೀ ರಾಜ್ಯಗಳಲ್ಲಿರುವ ಕಾಲೇಜುಗಳು ಒಂದೇ ರೀತಿಯ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಒಟ್ಟಾಗಬೇಕು ಎಂದು ನ್ಯಾಯಾಧೀಶರುಗಳ ತಂಡ ಸಲಹೆ ನೀಡಿತ್ತು. ಹಾಗಾಗಿ ಪ್ರತೀ ರಾಜ್ಯಗಳಲ್ಲಿ ಎರಡು ಪರೀಕ್ಷೆಗಳು ನಡೆಯಬೇಕಿತ್ತು, ಸರಕಾರಿ ಮತ್ತು ಸಾಂಘಿಕ. ಕೆಲವು ರಾಜ್ಯಗಳು ಎಲ್ಲಾ ಪರೀಕ್ಷೆಗಳನ್ನು ಸರಕಾರವೇ ನಡೆಸಬೇಕೆಂದು ಬಯಸಿದ್ದವು. ಒಂದು ಕಡೆಯಲ್ಲಿ ತಮಿಳುನಾಡು ಇಂಗ್ಲಿಷ್ ಮತ್ತು ತಮಿಳಿನಲ್ಲಿ 12ನೆ ತರಗತಿ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿತ್ತು. ಆಂಧ್ರಪ್ರದೇಶದಲ್ಲಿ ಸೀಟುಗಳ ಹಂಚಿಕೆಗೆ ಸಂಬಂಧಿಸಿ ಸಾಂವಿಧಾನಿಕ ತಿದ್ದುಪಡಿ ಮಾಡಲಾಗಿತ್ತು. ಬಹುತೇಕ ರಾಜ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುತ್ತಿದ್ದವು. ಸಾಂಘಿಕ ಪರೀಕ್ಷೆಗಳ ಮತ್ತು ಶುಲ್ಕಗಳ ಮೇಲುಸ್ತುವಾರಿಯನ್ನು ವಿಶೇಷ ಸಮಿತಿಯೊಂದು ನೋಡಿಕೊಳ್ಳುತ್ತಿತ್ತು. ಕೆಲವು ಉತ್ತಮ ಮತ್ತು ಪ್ರಾಮಾಣಿಕ ಕಾಲೇಜುಗಳು ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುತ್ತಿದ್ದವು. ವೆಲ್ಲೋರ್‌ನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಂಥಾ ಕೆಲವು ಕಾಲೇಜುಗಳು ವೈದ್ಯಕೀಯ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದನ್ನು ದೃಢಪಡಿಸುವಂಥಾ ಪರೀಕ್ಷೆಗಳನ್ನು ನಡೆಸುತ್ತಿದ್ದವು. ವರ್ಧಾದ ಎಂಜಿ ಕಾಲೇಜು ಗಾಂಧೀಜಿಯವರ ಸಿದ್ಧಾಂತಗಳ ಬಗ್ಗೆ ಪರೀಕ್ಷೆ ನಡೆಸುತ್ತಿತ್ತು. ಇದಕ್ಕೆಲ್ಲ ವಿರುದ್ಧವಾಗಿ ಮಧ್ಯಪ್ರದೇಶವು 2007ರಲ್ಲಿ ಶಾಸನವೊಂದನ್ನು ಜಾರಿಗೆ ತಂದು ಖಾಸಗಿ ಸಂಸ್ಥೆಗಳ ಪರೀಕ್ಷೆ ಮತ್ತು ಶುಲ್ಕ ನಿಗದಿಪಡಿಸುವ ಮೇಲಿನ ನಿಯಂತ್ರಣವನ್ನು ಕಿತ್ತು ಅದನ್ನು ಸರಕಾರದ ಕೈಗೆ ನೀಡಿತು. ಮಧ್ಯಪ್ರದೇಶದಲ್ಲಿ ಅತೀ ಕೆಟ್ಟ ಶಿಕ್ಷಣ ಇತಿಹಾಸವಿದೆ. ಅದರ ಪರೀಕ್ಷೆ ನಡೆಸುವ ಸಂಸ್ಥೆ (ವ್ಯಾಪಂ) ಕೇವಲ ಭ್ರಷ್ಟ ಮಾತ್ರವಲ್ಲ, ಮುಜುಗರ ತರಿಸುವಂಥಾ ಹಗರಣವನ್ನೂ ಸೃಷ್ಟಿಸಿದೆ. ಅದೊಂದು ದುಸ್ವಪ್ನ, ಅದು ರಾಜ್ಯಗಳ ಕೈಗೆ ದಾಖಲಾತಿ ಮತ್ತು ಶುಲ್ಕ ನಿಗದಿಪಡಿಸುವ ಸ್ವಾಯತ್ತತೆಯನ್ನು ನೀಡುವ ತಿಳಿಗೇಡಿತನವನ್ನು ಮಾಡುವುದರ ವಿರುದ್ಧ ಇಡೀ ದೇಶವನ್ನೇ ಬಡಿದೆಬ್ಬಿಸಬೇಕಿತ್ತು. 2014ರಲ್ಲಿ ಸ್ಥಗಿತಗೊಂಡಿದ್ದ ನೀಟ್ ಅನ್ನು 2016ರಲ್ಲಿ ಪುನರುತ್ಥಾನಗೊಳಿಸಲಾಯಿತು. ಎಲ್ಲ ಶಿಕ್ಷಣ ನಿಯಂತ್ರಣ ಸಂಸ್ಥೆಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿವೆ (ಉದಾ: ಎಐಸಿಟಿಇ, ಎಂಸಿಐಯಿಂದ ಹಿಡಿದು ಒಂದಷ್ಟು ಮಟ್ಟಿಗೆ ಯುಜಿಸಿ ಕೂಡಾ). ಎಂಸಿಐಗೆ ಕಾಲೇಜು ಆರಂಭಿಸಲು ಅನುಮತಿ ನೀಡುವ, ವಿದ್ಯಾರ್ಥಿಗಳ ಕೋಟಾವನ್ನು ಮುಂದುವರಿಸಬಹುದೇ ಎಂದು ನಿರ್ಧರಿಸುವ, ಈ ಸಂಸ್ಥೆಗಳು ತಮ್ಮ ಚಟುವಟಿಕೆಯನ್ನು ವಿಸ್ತರಿಸಬಹುದೇ ಎಂದು ತೀರ್ಮಾನಿಸುವ ಮತ್ತು ದೂರುಗಳನ್ನು ಆಲಿಸುವ ಪ್ರಭಾವಿ ಅಧಿಕಾರವನ್ನು ಹೊಂದಿದೆ. ಎಂಸಿಐ ಎಷ್ಟು ಭ್ರಷ್ಟವಾಗಿತ್ತೆಂದರೆ, 2011ರಲ್ಲಿ ಮಂಡಳಿಯನ್ನು ಗವರ್ನರ್‌ಗಳ ಮಂಡಳಿಯೊಂದಿಗೆ ಬದಲಾಯಿಸಲಾಯಿತು. ಈ ಸ್ವಾಧೀನತೆ ಕೊನೆಯಾದಾಗ ಎಂಸಿಐ ತನ್ನದೇ ಆದ ಭ್ರಷ್ಟ ಹಾದಿಗಳನ್ನು ಹಿಡಿಯಿತು ಮತ್ತು ಅದು ಈಗಲೂ ಮುಂದುವರಿದಿದೆ. ಸಂಸತ್‌ನ 2015ರ ವರದಿಯಲ್ಲಿ ಎಂಐಸಿ ಅದ್ಯಾವ ರೀತಿ ಭ್ರಷ್ಟಾಚಾರದಲ್ಲಿ ತೊಡಗಿ ಅನುಚಿತವಾಗಿ ವರ್ತಿಸುತ್ತಿದೆ ಎಂಬುದನ್ನು ವಿವರಿಸುವುದರ ಜೊತೆಗೆ ಅದನ್ನು ಬಹಿಷ್ಕರಿಸುವಂತೆ ಸೂಚಿಸಿತ್ತು. ಹಾಗಾದರೆ ಎಂಸಿಐ ತನ್ನನ್ನು ಮತ್ತೆ ಪುನರುತ್ಥಾನಗೊಳಿಸುವುದಾದರೂ ಹೇಗೆ? ನಿಜಾಂಶವೆಂದರೆ ಅದನ್ನು ಮತ್ತೆ ನವೀಕರಿಸಲು ಸಾಧ್ಯವಿಲ್ಲ, ಆದರೆ ರಾಷ್ಟ್ರೀಯ ಶೈಕ್ಷಣಿಕ ಅರ್ಹತಾ ಪರೀಕ್ಷೆ (ನೀಟ್)ನ್ನು ಆರಂಭಿಸುವ ಸಲಹೆ ನೀಡುವ ಮೂಲಕ ಅದು ತನ್ನ ನಿಯಂತ್ರಕ ಸ್ನಾಯುಗಳನ್ನು ವಿಸ್ತರಿಸಿಕೊಳ್ಳಲು ಯೋಚಿಸಿತು. ಇದರ ಉದ್ದೇಶವೇನೆಂದರೆ ಏಕಸಮಾನ ಪರೀಕ್ಷೆಯನ್ನು ನಡೆಸುವುದು, ಇದರಲ್ಲಿ ವಿದ್ಯಾರ್ಥಿಗಳ ಹಿನ್ನೆಲೆಯನ್ನೂ ಪರಿಗಣಿಸುವ ಹಾಗಿಲ್ಲ ಮತ್ತು ಅದು ಉಳ್ಳವರಿಗೆ ಸಹಾಯಕವಾಗಿದ್ದರೂ ಚಿಂತೆಯಿಲ್ಲ. 2014ರ ಕ್ರಿಶ್ಚಿಯನ್ ವೆಲ್ಲೋರ್ ಪ್ರಕರಣದಲ್ಲಿ ನೀಟ್ ಸಾಂವಿಧಾನಿಕ ಸವಾಲನ್ನು ಎದುರಿಸಿತ್ತು. ಎಂಐಸಿ ದಾಖಲಾತಿ ಪರೀಕ್ಷೆಗಳಿಗೆ ಮಾರ್ಗದರ್ಶನವನ್ನು ಮತ್ತು ಸೂಚನೆಗಳನ್ನು ನೀಡುವುದೂ ಸೇರಿದಂತೆ ಇತರ ವಿಷಯಗಳ ಗುಣಮಟ್ಟಗಳನ್ನು ಸಂಘಟಿಸುವ ಅಧಿಕಾರವನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದು ಸಾಧ್ಯವಾದರೂ, ನೀಟ್‌ನ ದಾರಿಗೆ ತೊಡಕಾಗಿರುವುದು 2002ರಲ್ಲಿ ಟಿಎಂಎ ಪೈ ಪ್ರಕರಣದಲ್ಲಿ ಹನ್ನೊಂದು ನ್ಯಾಯಾಧೀಶರ ತಂಡ ನೀಡಿದ ತೀರ್ಪು ಮತ್ತು 2005ರಲ್ಲಿ ಆ ತೀರ್ಪನ್ನು ಎತ್ತಿಹಿಡಿದ ಏಳು ನ್ಯಾಯಾಧೀಶರನ್ನೊಳಗೊಂಡ ಇನಾಮ್ದಾರ್ ಪ್ರಕರಣ. ಈ ತೀರ್ಪಿನಲ್ಲಿ ‘‘ಅನುದಾನರಹಿತ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳು ತಮ್ಮ ಸ್ವಂತ ಆಯ್ಕೆಯನ್ನು ಮಾಡುವಲ್ಲಿ ಸ್ವತಂತ್ರವಾಗಿದ್ದಾರೆ’’ ಎಂದು ಉಲ್ಲೇಖಿಸಲಾಗಿದೆ. ಇನ್ನು 1991ರ ಸಂತ ಸ್ಟೀವನ್ಸ್ ಪ್ರಕರಣದಲ್ಲಿ ಅನುದಾನಿತ ಅಲ್ಪಸಂಖ್ಯಾತ ಸಂಸ್ಥೆಗಳು ಕೂಡಾ ವಿದ್ಯಾರ್ಥಿಗಳ ಆಯ್ಕೆಯನ್ನು ತಮ್ಮ ಸಂಸ್ಥೆಯ ಉದ್ದೇಶದ ಆಧಾರದಲ್ಲಿ ಮಾಡಿಕೊಳ್ಳಬಹುದು ಎಂದು ತೀರ್ಪಿತ್ತಿದೆ. ದಾಖಲಾತಿಯ ವಿಷಯದಲ್ಲಿ ಟಿಎಂಎ ಪೈ ಫಾರ್ಮುಲಾ ಅನುದಾನರಹಿತ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸ್ವಾಯತ್ತತೆಯನ್ನು ಕಲ್ಪಿಸಿದೆ. ಹಿಂದಿನ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ನೀಟ್ ವಿರುದ್ಧ ತೀರ್ಪು ನೀಡಿತ್ತು (ಮುಖ್ಯ ನ್ಯಾಯಾಧೀಶರಾದ ಕಬೀರ್ ಮತ್ತು ನ್ಯಾಯಾಧೀಶ ವಿಕ್ರಂಜಿತ್ ಸೇನ್, ಆದರೆ ನ್ಯಾಯವಾದಿ ಅನಿಲ್ ದಾವೆ ಅಸಮ್ಮತಿಯೊಂದಿಗೆ). ಭ್ರಷ್ಟಾಚಾರದ ಆರೋಪವನ್ನು ಮಾಡುವಲ್ಲೂ ಬದ್ಧದ್ವೇಷ ಹೊಗೆಯಾಡಿತ್ತು, ಕಬೀರ್ ಮತ್ತು ಸೇನ್ ಅಲ್ಪಸಂಖ್ಯಾತ ನ್ಯಾಯಾಧೀಶರಾಗಿದ್ದರೆ ದಾವೆ ಕಟ್ಟಾ ಬಹುಸಂಖ್ಯಾತ ನ್ಯಾಯಾಧೀಶರಾಗಿದ್ದಾರೆ. ಸಮ್ಮತಿ ಹೊಂದಿರುವ ನ್ಯಾಯಾಧೀಶ ದಾವೆಯವರನ್ನು ಬೆಂಬಲಿಸಲು ಎಂಐಸಿ ಒಂದು ಯೋಜನೆ ಹಾಕಿತು. ಎಂಐಸಿಯು ಕೇಂದ್ರದ ಬೆಂಬಲದೊಂದಿಗೆ ನೀಟ್-ಉಳಿದೆಲ್ಲಾ ಪರೀಕ್ಷೆಗಳನ್ನು ಬಹಿಷ್ಕರಿಸುವ ಏಕಸಮಾನ ಅಖಿಲ ಭಾರತ ಪರೀಕ್ಷಾ ವಿಧಾನವನ್ನು ಪುನರುತ್ಥಾನಗೊಳಿಸಿತು- 2012ರ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಪ್ರಕರಣದಲ್ಲಿ ನೀಟನ್ನು ನ್ಯಾಯಾಲಯ ರದ್ದುಗೊಳಿಸಿದ್ದರೂ. ಅಸಮಾಧಾನ ಹೊಂದಿದ್ದ ನ್ಯಾಯಾಧೀಶ ಅನಿಲ್ ದಾವೆ ಕಾನೂನು ವಿರುದ್ಧವಾಗಿದ್ದರೂ ಅಖಿಲ ಭಾರತ ಪರೀಕ್ಷ ವಿಧಾನವನ್ನು ಬಯಸಿದ್ದರು. ಕಬೀರ್ ಮತ್ತು ನಂತರ ಸೇನ್ ನಿವೃತ್ತರಾದ ಕಾರಣ ದಾವೆಗೆ ಸಿಎಂಸಿಯ ನಿರ್ಧಾರವನ್ನು ಮರುಪರಿಶೀಲಿಸಲು ದಾರಿ ಸುಗಮವಾಯಿತು. ಅದು ನ್ಯಾಯಾಧೀಶ ದಾವೆ ಅಧ್ಯಕ್ಷತೆ ವಹಿಸಿದ್ದ ಸಾಂವಿಧಾನಿಕ ಪೀಠಕ್ಕೆ ಹೋಯಿತು. ನ್ಯಾಯಾಧೀಶರಾದ ದಾವೆ ಮತ್ತು ಟಿಎಂಎ ಪೈ ಪ್ರಕರಣವನ್ನು ಸಂಪೂರ್ಣವಾಗಿ ಓದಿರುವ ನ್ಯಾಯಾಧೀಶ ಗೋಯೆಲ್ ತಮ್ಮ ಸ್ಥಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ವಾದಿಸಲಾಯಿತು. ಅದಲ್ಲದೆ ಗೋಯೆಲ್‌ಗೆ, ಕೆಲವು ಬಿಜೆಪಿ ನಾಯಕರೊಂದಿಗೆ ಕಾನೂನು ಸಂಬಂಧಿ ಸಂಪರ್ಕವಿತ್ತು. ಅನೇಕ ಪ್ರಖ್ಯಾತ ವಕೀಲರು ಅಲ್ಲಿ ಮರುಪರಿಶೀಲನೆಗೆ ಯಾವುದೇ ಆಧಾರವಿಲ್ಲ ಎಂದು ವಾದಿಸಿದ್ದರು. ಆದರೆ 2016ರ ಎಪ್ರಿಲ್ 11ರಂದು ಸಂವಿಧಾನ ಪೀಠ ಒಂದು ಕುತೂಹಲಕಾರಿ ನಿರ್ಧಾರವನ್ನು ತೆಗೆದುಕೊಂಡು ಸಿಎಂಸಿ ಮರುಪರಿಶೀಲನೆ ವಾದವನ್ನು ಆಲಿಸಲಾಗುವುದು ಎಂದು ಹೇಳಿತು. ಅರ್ಹತೆಯ ಮೇರೆಗೆ ಪ್ರಕರಣವನ್ನು ಆಲಿಸದೆ ಸಿಎಂಸಿ ನಿರ್ಧಾರವನ್ನು ಹಿಂಪಡೆಯಲಾಯಿತು. ಎಪ್ರಿಲ್ 28ರ ಆದೇಶದಲ್ಲಿ, ಹಿಂಪಡೆಯಲಾಗಿದೆ ಎಂದರೆ ವಿಚಾರಣೆಗೆ ಮರುಕರೆಯಲಾಗಿದೆ ಎಂಬುದನ್ನು ನಾನು ಬೊಟ್ಟು ಮಾಡಿದಾಗ, ನ್ಯಾಯಾಲಯವು ಸಿಎಂಸಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿತು. ಆದರೆ ರದ್ದಿನ ಬಗ್ಗೆ ವಿಚಾರಣೆ ನಡೆದೇ ಇರಲಿಲ್ಲ.
Next Story





