ಝಿಂಬಾಬ್ವೆ ಪ್ರವಾಸ: ಧೋನಿಗೆ ಅವಕಾಶ ಸಾಧ್ಯತೆ

ಹೊಸದಿಲ್ಲಿ, ಮೇ19: ಜೂ.11 ರಿಂದ 20ರ ತನಕ ನಡೆಯಲಿರುವ ಝಿಂಬಾಬ್ವೆ ಪ್ರವಾಸಕ್ಕೆ ಲಭ್ಯವಿರುವ ಬಗ್ಗೆ ಸೀಮಿತ ಓವರ್ ತಂಡದ ನಾಯಕ ಎಂಎಸ್ ಧೋನಿಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಅವಕಾಶ ನೀಡುವ ಸಾಧ್ಯತೆಯಿದೆ.
ತಂಡದ ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ಯುವ ಆಟಗಾರರಿಗೆ ಝಿಂಬಾಬ್ವೆ ವಿರುದ್ಧದ ಸರಣಿಗೆ ಅವಕಾಶ ನೀಡಲು ಬಯಸುತ್ತಿರುವುದಾಗಿ ಐವರು ಸದಸ್ಯರ ಆಯ್ಕೆ ಸಮಿತಿಯು ಭಾರತದ ಹಿರಿಯ ಆಟಗಾರರಿಗೆ ಈಗಾಗಲೆೇ ಮಾಹಿತಿ ನೀಡಿದೆ.
ಭಾರತ ಇನ್ನು ಮುಂದೆ 17 ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ ಎಂಎಸ್ ಧೋನಿ ಝಿಂಬಾಬ್ವೆ ಪ್ರವಾಸದಿಂದ ಹೊರಗುಳಿದರೆ ಮುಂದಿನ ವರ್ಷದ ಮಾರ್ಚ್ ತನಕ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.
ಝಿಂಬಾಬ್ವೆ ಪ್ರವಾಸಕ್ಕೆ ಜೂನಿಯರ್ ಆಟಗಾರರನ್ನು ಆಯ್ಕೆ ಆಡುವ ಸಂಬಂಧ ಆಯ್ಕೆಗಾರರು ಕೆಲವು ಹಿರಿಯ ಆಟಗಾರರೊಂದಿಗೆ ಮಾತನಾಡಿದ್ಧಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಧೋನಿ ಟೆಸ್ಟ್ ಕ್ರಿಕೆಟ್ ನಂದ ನಿವೃತಿಯಾಗಿರುವ ಕಾರಣ ಅವರಿಗೆ ಝಿಂಬಾಬ್ವೆ ಪ್ರವಾಸದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.





