ಗುಜರಾತ್ ಲಯನ್ಸ್‌ಗೆ ಸುಲಭದ ಜಯ
ಎರಡನೆ ಸ್ಥಾನಕ್ಕೆ ಲಗ್ಗೆ *ರೈನಾ, ಸ್ಮಿತ್ ಉತ್ತಮ ಆಟ

ಕಾನ್ಪುರ, ಮೇ 19: ಇಲ್ಲಿ ನಡೆದ ಐಪಿಎಲ್‌ನ 51ನೆ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದೆ.
ಗ್ರೀನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 125 ರನ್‌ಗಳ ಸವಾಲನ್ನು ಪಡೆದ ಗುಜರಾತ್ ಲಯನ್ಸ್ ತಂಡ 39 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ನಾಯಕ ಸುರೇಶ್ ರೈನಾ ಔಟಾಗದೆ 53 ರನ್(36ಎ,7ಬೌ,1ಸಿ) ಗಳಿಸಿದರು.
ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡ 1.2 ಓವರ್‌ಗಳಲ್ಲಿ 18 ರನ್ ಗಳಿಸುವಷ್ಟರಲ್ಲಿ 2 ವಿಕೆಟ್‌ನ್ನು ಕಳೆದುಕೊಂಡಿತ್ತು.
ಡ್ವೇಯ್ನ ಸ್ಮಿತ್(0) ಮತ್ತು ಬ್ರೆಂಡನ್ ಮೆಕಲಮ್(6) ಬೇಗನೆ ಔಟಾದರು. ಬಳಿಕ ನಾಯಕ ರೈನಾ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಜೊತೆಯಾದರು. ಆದರೆ ಕಾರ್ತಿಕ್ (12) ಅವರು ಮೊರ್ಕೆಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಆ್ಯರೊನ್ ಫಿಂಚ್ ಅವರು ರೈನಾಗೆ ಸಾಥ್ ನೀಡಿ ಸ್ಕೋರ್‌ನ್ನು 9.5 ಓವರ್‌ಗಳಲ್ಲಿ 97ಕ್ಕೆ ಏರಿಸಿದರು. ಫಿಂಚ್ 26 ರನ್(23ಎ, 1ಬೌ,2ಸಿ) ಗಳಿಸಿ ಔಟಾದರು. ಬಳಿಕ ರೈನಾ ಮತ್ತು ರವೀಂದ್ರ ಜಡೇಜ (11)ಬ್ಯಾಟಿಂಗ್ ಮುಂದುವರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಜಪೂತ್, ನರೇನ್ ಮತ್ತು ಮೊರ್ಕೆಲ್ ಒಂದು ವಿಕೆಟ್ ಹಂಚಿಕೊಂಡರು.
ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 124 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್ ತಂಡ ಡ್ವೇಯ್ನ್ ಸ್ಮಿತ್ (8ಕ್ಕೆ 4) ದಾಳಿಗೆ ಸಿಲುಕಿ ರನ್ ಗಳಿಸಲು ಪರದಾಡಿತು.
ಯೂಸುಫ್ ಪಠಾಣ್(36) ಮಾತ್ರ 30ಕ್ಕಿಂತ ಹೆಚ್ಚು ರನ್ ಸೇರಿಸಿದರು. ಆರಂಭಿಕ ದಾಂಡಿಗ ರಾಬಿನ್ ಉತ್ತಪ್ಪ 25ರನ್ ಸೂರ್ಯಕುಮಾರ್ ಯಾದವ್ 17 ರನ್, ಹೋಲ್ಡರ್ 13ರನ್ , ಪಿಯೂಷ್ ಚಾವ್ಲಾ 11ರನ್ ಗಳಿಸಿದರು.
ಗೌತಮ್ ಗಂಭೀರ್ 8ರನ್, ಮನೀಷ್ ಪಾಂಡೆ 1ರನ್, ಶಾಕಿಬ್ ಅಲ್ ಹಸನ್ 3 ರನ್, ನರೇನ್ ಔಟಾಗದೆ 2ರನ್, ಮೊರ್ಕೆಲ್ ಔಟಾಗದೆ 1ರನ್ ಗಳಿಸಿದರು.





