Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆಶಾದಾಯಕ ಫಲಿತಾಂಶ

ಆಶಾದಾಯಕ ಫಲಿತಾಂಶ

ವಾರ್ತಾಭಾರತಿವಾರ್ತಾಭಾರತಿ19 May 2016 11:58 PM IST
share
ಆಶಾದಾಯಕ ಫಲಿತಾಂಶ

ಹಲವು ಅನಿರೀಕ್ಷಿತ ಫಲಿತಾಂಶಗಳ ಮೂಲಕ ಪಂಚ ರಾಜ್ಯಗಳ ಚುನಾವಣೆ ಗಮನ ಸೆಳೆದಿದೆ. ಈ ಫಲಿತಾಂಶ ಯಾರ ಪರವಾಗಿದೆ? ಎನ್ನುವುದನ್ನು ನಿರ್ಧರಿಸುವುದು ಅಷ್ಟು ಸುಲಭವಿಲ್ಲ. ಬಿಜೆಪಿಯೇನೋ ಫಲಿತಾಂಶ ತನಗೆ ಪೂರಕವಾಗಿದೆ ಎಂದು ಹೇಳಿಕೊಳ್ಳಬಹುದು. ಅಥವಾ ಎರಡು ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ವಿರೋಧಿ ಫಲಿತಾಂಶ ಎಂದೂ ಹೇಳಬಹುದು. ಆದರೆ ಅದಷ್ಟರಲ್ಲೇ ಈ ಸೋಲು ಗೆಲುವುಗಳ ತೂಕವನ್ನು ಅಳೆಯಲಾಗುವುದಿಲ್ಲ. ಇಡೀ ಫಲಿತಾಂಶದ ಕೇಂದ್ರ ಬಿಂದು ಅಸ್ಸಾಂ. ಮೊತ್ತ ಮೊದಲ ಬಾರಿಗೆ ಬಿಜೆಪಿ ಈಶಾನ್ಯ ಭಾರತದಲ್ಲಿ ತನ್ನ ಧ್ವಜವನ್ನು ಊರಿದೆ. ಆದರೆ ಇದಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಕಳೆದ ಒಂದು ದಶಕದಿಂದ ನಡೆಸಿದ ಶ್ರಮಕ್ಕೆ ಹೋಲಿಸಿದರೆ, ಈ ಗೆಲುವು ಏನೇನೂ ಅಲ್ಲ. ಇನ್ನೊಂದು ಫಲಿತಾಂಶ ಕೇರಳದಲ್ಲಿ ಹೊರಬಿದ್ದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ, ಕೇರಳದ ಒಂದು ವಿಧಾನಸಭಾ ಕ್ಷೇತ್ರವನ್ನು ಗೆದ್ದಿರುವ ಬಿಜೆಪಿ ಬಹಳ ಸಂಭ್ರಮದಲ್ಲಿದೆ. ಮೇಲ್ನೋಟಕ್ಕೆ ಇದು ಏನೇನೂ ಅಲ್ಲವಾಗಿದ್ದರೂ, ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ಒಂದೇ ಒಂದು ಸ್ಥಾನವನ್ನೂ ಹೊಂದದೇ ಇದ್ದುದು ಬಿಜೆಪಿಯ ಪಾಲಿಗೆ ಈವರೆಗೆ ಬಹುದೊಡ್ಡ ಅವಮಾನವಾಗಿತ್ತು. ಇದೀಗ ಆ ಅವಮಾನದಿಂದ ಮೊದಲ ಬಾರಿಗೆ ಹೊರ ಬಂದಿದೆ. ದೇಶಾದ್ಯಂತ ಜನರ ಭಾವನೆಗಳನ್ನು ಕೆರಳಿಸಿ ಧರ್ಮಗಳ ಹೆಸರಲ್ಲಿ ಹೊಡೆದಾಡಿಸಿದ ಬಳಿಕವೂ ಈವರೆಗೂ ಈಶಾನ್ಯ ಮತ್ತು ಕೇರಳದೊಳಗೆ ಬಿಜೆಪಿಗೆ ಪ್ರವೇಶಿಸಲು ಸಾಧ್ಯವಾಗದೇ ಇರುವುದು ಪ್ರಜಾಸತ್ತೆ, ಜಾತ್ಯತೀತ ನಿಲುವಿನ ಗೆಲುವೇ ಆಗಿದೆ. ಹಾಗೆಂದು, ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದನ್ನು, ಕೇರಳದಲ್ಲಿ ಒಂದು ವಿಧಾನಸಭಾಕ್ಷೇತ್ರ ಗೆದ್ದಿರುವುದನ್ನು ನಿರ್ಲಕ್ಷಿಸುವಂತಿಲ್ಲ. ಇಷ್ಟಕ್ಕೂ ಈ ಗೆಲುವು ಬಿಜೆಪಿಗೆ ಸಾಧ್ಯವಾಗಿರುವುದು ಜಾತ್ಯತೀತ ಪಕ್ಷಗಳ ನಿರ್ಲಕ್ಷದಿಂದಲೇ ಹೊರತು, ಬಿಜೆಪಿ ಮತ್ತು ಸಂಘಪರಿವಾರದ ಪ್ರಭಾವದಿಂದ ಖಂಡಿತ ಅಲ್ಲ.

ಅಸ್ಸಾಂನಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿ ಹಲವು ಕ್ಷೇತ್ರಗಳಲ್ಲಿ ಮುಗ್ಗರಿಸಿತ್ತು. ಭ್ರಷ್ಟಾಚಾರ ಮಾತ್ರವೇ ಅಲ್ಲ, ವಿಚ್ಛಿದ್ರಗೊಳ್ಳುತ್ತಿರುವ ಸಾಮಾಜಿಕ, ಆರ್ಥಿಕ ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತರಲು ಅದು ಸಂಪೂರ್ಣ ವಿಫಲವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಐದು ವರ್ಷಗಳಿಂದ ಸಂಘಪರಿವಾರ ಅಲ್ಲಿರುವ ಜನರ ಮನಸ್ಸನ್ನು ಒಡೆಯುವಲ್ಲಿ ಭಾರೀ ಪ್ರಯತ್ನ ಮಾಡುತ್ತಾ ಬಂದಿದೆ. ಅಲ್ಲಿರುವ ಬಾಂಗ್ಲಾ ನಿರ್ವಸಿತ ಮುಸ್ಲಿಮರ ವಿರುದ್ಧ ಸಂಘಪರಿವಾರ ಸ್ಥಳೀಯರನ್ನು ಎತ್ತಿಕಟ್ಟುತ್ತಾ ಬಂದಿದೆ. ಜನರನ್ನು ಭಾವನಾತ್ಮಕವಾಗಿ ಒಡೆಯುತ್ತಾ, ರಾಜಕೀಯವಾಗಿ ಬೇರೂರಲು ಬಿಜೆಪಿ ಪ್ರಯತ್ನ ನಡೆಸುತ್ತಾ ಬಂದಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯನ್ನು ಬಹಳ ಎಚ್ಚರಿಕೆಯಿಂದ ಎದುರಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಅತಿ ಆತ್ಮವಿಶ್ವಾಸವನ್ನು ಹೊಂದಿತ್ತು. ಅದು ಸ್ಥಳೀಯ ರಾಜಕೀಯ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸಿತು. ಜೆಡಿಯು, ಆರ್‌ಜೆಡಿ ಮತ್ತು ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅಸ್ಸಾಂ ಚುನಾವಣೆಯನ್ನು ಎದುರಿಸಿದ್ದೇ ಆಗಿದ್ದರೆ, ಎನ್‌ಡಿಎ ಇಷ್ಟು ಸುಲಭವಾಗಿ ಈಶಾನ್ಯ ಭಾಗವನ್ನು ಪ್ರವೇಶಿಸುತ್ತಿರಲಿಲ್ಲ. ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮೂರ್ಖತನಕ್ಕೆ ಬೆಲೆ ತೆತ್ತಿದೆ. ಆದುದರಿಂದ ಇದು ಬಿಜೆಪಿಯ ಜನಪ್ರಿಯತೆಯನ್ನು ಹೇಳುವುದಕ್ಕಿಂತಲೂ ಕಾಂಗ್ರೆಸ್‌ನ ವೈಫಲ್ಯವನ್ನು ಹೇಳುತ್ತಿದೆ. ಇತ್ತ ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಒಂದಿಷ್ಟು ಕಾರ್ಯಯೋಜನೆಗಳನ್ನು ರೂಪಿಸಿದ್ದರೆ, ಕೇರಳದಲ್ಲಿ ಒಂದು ಸ್ಥಾನವನ್ನು ಗೆದ್ದುಕೊಳ್ಳುವುದೂ ಬಿಜೆಪಿಗೆ ಕಷ್ಟವಾಗಿ ಬಿಡುತ್ತಿತ್ತು. ಕಳೆದ ಬಾರಿ ಈ ಕ್ಷೇತ್ರವನ್ನು ಬಿಜೆಪಿ ಅಲ್ಪ ಅಂತರದಲ್ಲಿ ಸೋತಿತ್ತು. ಈ ಬಾರಿ ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲಬಹುದು ಎನ್ನುವುದು ಗೊತ್ತಿದ್ದರೂ ಜಾತ್ಯತೀತ ಪಕ್ಷಗಳು ತಮ್ಮ ಪ್ರತಿಷ್ಠೆಗಳಿಗೆ ಜೋತು ಬಿದ್ದವು. ಹಾಗೆ ನೋಡಿದರೆ, ಮಂಜೇಶ್ವರದಲ್ಲಿ ಬಿಜೆಪಿ ಅಲ್ಪ ಅಂತರದಿಂದ ಈ ಬಾರಿ ಸೋತಿದೆ. ಮುಂದಿನ ಬಾರಿ ಅದನ್ನೂ ತನ್ನದಾಗಿಸಿಕೊಳ್ಳುವ ಸಾಧ್ಯತೆಗಳಿವೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಕಾಲಿಟ್ಟಿರುವುದೇ ಜಾತ್ಯತೀತ ಪಕ್ಷಗಳ ಹೆಗಲ ಮೇಲೆ ಕುಳಿತು. ಈ ಹಿಂದೆ ಜೆಡಿಎಸ್ ಮೂಲಕವೇ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು. ಹಾಗೆಯೇ ಈ ಬಾರಿ ಗುರುತಿಸಬಹುದಾದ ಮತ್ತೊಂದು ಫಲಿತಾಂಶ ತಮಿಳುನಾಡಿನಲ್ಲಿ ಹೊರ ಬಿದ್ದಿದೆ. ಸಾಧಾರಣವಾಗಿ ಅಲ್ಲಿನ ಜನರು ಒಮ್ಮೆ ಆಡಳಿತ ನಡೆಸಿದ ಸರಕಾರವನ್ನು ಎರಡನೆ ಬಾರಿ ಗೆಲ್ಲಿಸುವ ಸಂಪ್ರದಾಯವಿಲ್ಲ. ಈ ಹಿನ್ನೆಲೆಯಲ್ಲಿಯೇ ಮಾಧ್ಯಮಗಳು ಈ ಬಾರಿ ಡಿಎಂಕೆ ಸರಕಾರ ರಚಿಸುತ್ತದೆ ಎಂದು ಲೆಕ್ಕ ಹಾಕಿದ್ದರು. ಆದರೆ ಜನರು ಬೇರೆಯೇ ರೀತಿಯ ಲೆಕ್ಕಾಚಾರದ ಮೂಲಕ ಜಯಲಲಿತಾರನ್ನು ಗೆಲ್ಲಿಸಿದ್ದಾರೆ. ಜಯಲಲಿತಾ ತಳಮಟ್ಟದ ಜನರನ್ನು ಕೇಂದ್ರೀಕರಿಸಿ ಅತ್ಯಂತ ಜನಪರ ಯೋಜನೆಗಳನ್ನು ಈ ಬಾರಿ ಹಾಕಿದ್ದರು. ಒಂದು ರೀತಿಯಲ್ಲಿ ಬಡವರ ‘ಅಮ್ಮ’ ಎಂದೇ ಬಿಂಬಿತವಾಗಿದ್ದರು. ಇದೇ ಸಂದರ್ಭದಲ್ಲಿ ಡಿಎಂಕೆ ಮತ್ತೆ ಕರುಣಾನಿಧಿಯನ್ನು ಮುಂದಿಟ್ಟು ಮತಯಾಚನೆ ಮಾಡಿತ್ತು. ಅವರ ವೃದ್ಧಾಪ್ಯ, ಅಸಮರ್ಥತೆ ಢಾಳಾಗಿ ಕಾಣುತ್ತಿತ್ತು. ಜಯಲಲಿತಾರನ್ನು ಎದುರಿಸಲು ಬೇಕಾದ ಸ್ಪಷ್ಟ ಘೋಷಣೆಗಳು ಡಿಎಂಕೆ ಬಳಿ ಇರಲಿಲ್ಲ. ಹಾಗೆಯೇ ಪಶ್ಚಿಮಬಂಗಾಳದಲ್ಲೂ ಮಾತೃ ಹೃದಯ ಕೆಲಸ ಮಾಡಿದೆ. ಬಿಜೆಪಿಯ ಯಾವ ನಾಟಕಗಳೂ ಅಲ್ಲಿ ಯಶಸ್ವಿಯಾಗಿಲ್ಲ.

ಉಳಿದಂತೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯಗಳ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಆದರೆ, ಒಂದೆಡೆ ಜನರು ಕಾಂಗ್ರೆಸ್ ಹೊರತಾದ ಪಕ್ಷಗಳ ಅನ್ವೇಷಣೆಯಲ್ಲಿದ್ದಾರೆ ಎನ್ನುವುದನ್ನು ಈ ಫಲಿತಾಂಶ ಹೇಳಿದೆ.ಜನರು ಕಾಂಗ್ರೆಸನ್ನು ಬದಿಗಿಡುವ ಸಂದರ್ಭದಲ್ಲಿ, ಪ್ರಾದೇಶಿಕ ಪಕ್ಷಗಳಿಗೆ ಬಹುತೇಕ ಮಣೆ ಹಾಕಿದ್ದಾರೆ. ಈ ಹಿಂದಿನ ಬಿಹಾರ ಫಲಿತಾಂಶವನ್ನೂ ಇದಕ್ಕೆ ಉದಾರಣೆಯಾಗಿ ತೆಗೆದುಕೊಳ್ಳಬಹುದು. ಕಾಂಗ್ರೆಸ್ ಮುಕ್ತ ಭಾರತವೆಂದರೆ, ಕೇಸರಿಯುಕ್ತ ಭಾರತವಲ್ಲ. ಕಾಂಗ್ರೆಸ್‌ಗೆ ಪರ್ಯಾಯವನ್ನು ಜನರು ಪ್ರಾದೇಶಿಕ ಪಕ್ಷಗಳಲ್ಲಿ ಗುರುತಿಸುತ್ತಿದ್ದಾರೆಯೇ ಹೊರತು, ಬಿಜೆಪಿಯ ಮೂಲಕವಲ್ಲ.ಆದುದರಿಂದ ಈ ವಿಧಾನಸಭಾ ಫಲಿತಾಂಶ ಕಾಂಗ್ರೆಸ್ ವಿರುದ್ಧವಾಗಿದೆ ನಿಜ. ಆದರೆ ಬಿಜೆಪಿಗೆ ಪರವಾಗಿ ಇಲ್ಲ. ಆದುದರಿಂದ ವಿಧಾನಸಭಾ ಫಲಿತಾಂಶಗಳಲ್ಲಿರುವ ಬಹಳಷ್ಟು ಆಶಾದಾಯಕವಾದ ಸಂಗತಿಗಳನ್ನು ಗುರುತಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X