ಎಲ್ಲಿದೆ ಮೋದಿ ಮ್ಯಾಜಿಕ್ ?
ಶಿವಸೇನೆ ಲೇವಡಿ
ಮುಂಬೈ , ಮೇ 19: ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿ ಬೀಗುತ್ತಿದ್ದರೆ ಅದರ ಮೈತ್ರಿ ಪಕ್ಷ ಶಿವಸೇನೆಗೆ ಮಾತ್ರ ಇದು ಸಂಭ್ರಮಿಸುವ ವಿಷಯವಾಗಿ ಕಂಡಿಲ್ಲ. ಈ ಚುನಾವಣಾ ಫಲಿತಾಂಶ ' ಮೋದಿ ಮ್ಯಾಜಿಕ್ ' ಎಂಬುದು ಇಲ್ಲ ಎಂದು ಸಾಬೀತುಪಡಿಸಿವೆ ಎಂದು ಶಿವಸೇನೆ ನೇರವಾಗಿ ವಾಗ್ದಾಳಿ ನಡೆಸಿದೆ.
ಜಯಲಲಿತಾ , ಮಮತಾ ಬ್ಯಾನರ್ಜಿ ಹಾಗು ಎಡರಂಗವನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕಳೆದ 15 ವರ್ಷಗಳಿಂದ ಕಾಂಗ್ರೆಸ್ ವಿರುದ್ಧ ಜನರಲ್ಲಿ ಇದ್ದ ಆಡಳಿತ ವಿರೋಧಿ ಅಲೆಯನ್ನು ಬಳಸಿ ಅಸ್ಸಾಮ್ ನಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಅದು ಯಾವುದೇ ಯಶಸ್ಸು ಪಡೆದಿಲ್ಲ ಎಂದು ಶಿವಸೇನೆ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ೩, ಕೇರಳದಲ್ಲಿ ೧ ಸ್ಥಾನಗಳನ್ನು ಗಳಿಸಿದ್ದಾರೆ ತಮಿಳುನಾಡಿನಲ್ಲಿ ಒಂದೇ ಒಂದು ಸ್ಥಾನವನ್ನು ಗಳಿಸಿಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ' ಮಮತಾ ಮುಕ್ತ ಪಶ್ಚಿಮ ಬಂಗಾಳ ' ಹೇಳಿಕೆಯನ್ನೂ ಶಿವಸೇನೆ ಲೇವಡಿ ಮಾಡಿದೆ.
Next Story