ಭಾರತ ಬಯಸಿದ್ದರೆ 52 ವರ್ಷಗಳ ಹಿಂದೆಯೇ ಪರಮಾಣು ಬಾಂಬ್ ತಯಾರಿಸುತ್ತಿತ್ತು!

ವಾಶಿಂಗ್ಟನ್, ಮೇ 20: 52ವರ್ಷ ಮೊದಲು(1964) ಭಾರತ ಪರಮಾಣು ಬಾಂಬ್ ತಯಾರಿಸಲು ಶಕ್ತವಾಗಿತ್ತು. ಅಂದಿನ ಸರಕಾರ ರಾಷ್ಟ್ರಪ್ರೇಮದ ಕಾರಣದಿಂದ ಪರಮಾಣು ಸಂಸ್ಥೆಗೆ ರೂಪು ನೀಡಿತ್ತು. ನಂತರ ಪರಮಾಣು ಅಸ್ತ್ರ ತಯಾರಿಸುವತ್ತ ಅದರ ಗಮನ ಹರಿದಿತ್ತು ಎಂದು ಅಮೆರಿಕದ ವಿದೇಶ ಸಚಿವಾಲಯದ 196ರ ವರದಿಯಲ್ಲಿ ವಿವರಿಸಲಾಗಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಅಮೆರಿಕಕ್ಕೆ ಈ ಮಾಹಿತಿ ಬೇಹುಗಾರಿಕೆ ವರದಿಯಿಂದ ಸಿಕ್ಕಿತ್ತು. ಆದರೆ ಭಾರತ ಪರಮಾಣು ಬಾಂಬ್ ತಯಾರಿಸುವ ಕುರಿತು ಪುರಾವೆಯಿರಲಿಲ್ಲ. ಕೆನಡದಿಂದ ಕಳುಹಿಸಲಾದ ಟ್ರಾಂಬೆಯ ರಿಯಾಕ್ಟರ್‌ನಲ್ಲಿ ನಡೆಸಲಾದ ಬದಲಾವಣೆಯಿಂದ ಭಾರತ ಪರಮಾಣು ಬಾಂಬು ತಯಾರಿಸುವ ಪ್ರಯೋಗ ಆರಂಭಿಸಿದೆ ಎಂದು ನಿಷ್ಕರ್ಷೆ ಮಾಡಲಾಗಿತ್ತು. ಅಮೆರಿಕದ ನ್ಯಾಶನಲ್ ಸೆಕ್ಯುರಿಟಿ ಆರ್ಕೈವ್‌ನ ವತಿಯಿಂದ ಪ್ರಕಟಿಸಲಾದ ವರದಿಯಲ್ಲಿ ಕೆನಡಾದಿಂದ ರಿಯಾಕ್ಟರ್ ಕಳುಹಿಸಿದಾಗ ಪ್ಲೂಟೊನಿಯಂ ತಯಾರಿಸದಂತೆ ತಡೆಯುವ ಯಾವ ಉಪಾಯವೂ ಆಗ ಇರಲಿಲ್ಲ. ಆದ್ದರಿಂದ ಭಾರತ ಈ ವಸ್ತುವಿನಿಂದ ಲಾಭ ಪಡೆದಿದೆ ಎಂದು ಬರೆಯಲಾಗಿದೆ.
Next Story





