6ವರ್ಷದ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ

ಬೆಂಗಳೂರು,ಮೇ.20-ನಗರದಲ್ಲಿ ಬೀದಿನಾಯಿಗಳು ಅಟ್ಟಹಾಸ ಮೆರೆದಿವೆ ಅಂಜನಾನಗರದ ಮನೆ ಮುಂಭಾಗ ಆಟ ವಾಡುತ್ತಿದ್ದ 6ವರ್ಷದ ಬಾಲಕಿಯ ಮೇಲೆ ಎರಗಿರುವ ಬೀದಿ ನಾಯಿಗಳು ಮಾರಣಾಂತಿಕವಾಗಿ ಕಚ್ಚಿ ಗಾಯಗೊಳಿಸಿವೆ.
ಅಂಜನಾನಗರದ ಮನೆ ಮುಂಭಾಗ ಮತ್ತೊಬ್ಬ ಬಾಲಕಿಯ ಜೊತೆ ಆಟವಾಡುತ್ತಿದ್ದ ಬಾಲಕಿ ರಮ್ಯಾ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.
ಕೈಕಾಲು, ಮುಖ, ಕುತ್ತಿಗೆ ಬಳಿ ಗಾಯಗೊಂಡಿರುವ ರಮ್ಯಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ರಾಮು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ ರಮ್ಯಾ ನಿನ್ನೆ ಮಧ್ಯಾಹ್ನ ಮತ್ತೊಬ್ಬ ಬಾಲಕಿಯ ಜೊತೆ ಆಟ ವಾಡುತ್ತಿದ್ದಳು ಈ ವೇಳೆ ಬಂದ 10 ನಾಯಿಗಳ ಗುಂಪು ರಮ್ಯಾ ಮೇಲೆ ದಾಳಿ ನಡೆಸಿವೆ ಇನ್ನೊಬ್ಬ ಅಲ್ಲಿಂದ ಓಡಿ ತಪ್ಪಿಸಿಕೊಂಡಿದೆ.
ಬಾಲಿಕೆಯನ್ನು ಕಚ್ಚುತ್ತಿದ್ದ ನಾಯಿಗಳ ಹಿಂಡನ್ನು ಸ್ಥಳೀಯರು ಗಲಾಟೆ ಮಾಡಿ ಓಡಿಸಿ ರಮ್ಯಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ನಿನ್ನೆಯೇ ಈಬಗ್ಗೆ ಬಿಬಿಎಂಪಿದೆ ದೂರು ನೀಡಲಾಗಿದೆ.
ಇತ್ತೀಚಿಗೆ ನಗರದಲ್ಲಿ ನಡೆದ 10ಕೆ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದ ಇಥಿಯೋಪಿಯಾದ ಖ್ಯಾತ ಮ್ಯಾರಾಥಾನ್ ಪಟು ಮೂಲೆ ವಾಸಿಹುನ್ ಅವರ ಗೆಲುವಿಗೆ ಅಡ್ಡಿಪಡಿಸಿ ಅವಮಾನ ಉಂಟುಮಾಡಿದ್ದ ಬೀದಿನಾಯಿಗಳ ಕಾಟವನ್ನು ನಿಯಂತ್ರಿಸಲು ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದಿರುವ ಬೆನ್ನಲ್ಲೇ ನಾಯಿಗಳ ದಾಳಿ ನಡೆದಿದ್ದು ಬೀದಿ ನಾಯಿಗಳನ್ನು ನಿಯಂತ್ರಿಸದ ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.





