ಕಾಸರಗೋಡು: ಭಾರೀ ಗಾಳಿ, ಮಳೆಯಿಂದಾಗಿ ಕೃಷಿಗೆ ಹಾನಿ

ಕಾಸರಗೋಡು, ಮೇ 20: ಕಾಸರಗೋಡು ನಗರಸಭಾ ವ್ಯಾಪ್ತಿಯ ಅಣಂಗೂರು, ನುಳ್ಳಿಪ್ಪಾಡಿ ಪರಿಸರದಲ್ಲಿ ಭಾರೀ ಗಾಳಿ ಮಳೆಗೆ ಕೃಷಿ ಹಾನಿ ಸಂಭವಿಸಿದೆ.
ಒಂದು ಸಾವಿರ ಅಡಿಕೆ ಮರಗಳು, ಎರಡು ಸಾವಿರ ಬಾಳೆ, ಕರಿಮೆಣಸು ಹಾಗೂ ಇನ್ನಿತರ ಕೃಷಿಗೆ ಹಾನಿ ಉಂಟಾಗಿದೆ. ಘಟನೆಯಿಂದ ಸುಮಾರು 16 ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ದಿನಕರ ರೈ, ಬಾಲಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಸಿ.ಎ. ಅಬ್ದುಲ್ಲ ಸೇರಿದಂತೆ ನೂರಕ್ಕೂ ಅಧಿಕ ಮಂದಿಗೆ ನಷ್ಟ ಉಂಟಾಗಿದೆ.
ಕೃಷಿ ಹಾನಿ ನಡೆದ ಸ್ಥಳಗಳಿಗೆ ಕೃಷಿ ಅಧಿಕಾರಿ ಕೆ. ಶಿವರಾಮಕೃಷ್ಣನ್, ಎ. ಗಿರಿಜಾ, ಎಂ.ವಿ. ಕೃಷ್ಣ ಸ್ವಾಮಿ, ಎ.ವಿ. ಲೀಲಾ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





