ಉಳ್ಳಾಲ ದರ್ಗಾಕ್ಕೆ ಖಾಝಿ ತ್ವಾಕ ಉಸ್ತಾದ್ ಭೇಟಿ

ಮಂಗಳೂರು, ಮೇ 20: ದ.ಕ. ಜಿಲ್ಲಾ ಖಾಝಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಗುರುವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದಾರೆ.
ಕೋಟೆಕಾರ್ ಬೀರಿಯ ನೂರ್ ಮಹಲ್‌ನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲೆಂದು ಅವರು ಗುರುವಾರ ಕಾಸರಗೋಡಿನಿಂದ ಪ್ರಯಾಣಿಸಿದ್ದರು. ಅಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್ ಇದ್ದುದರಿಂದ ಮಂಗಳೂರಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಅಲ್ಲಿ ಕೆಲವರೊಂದಿಗೆ ಮಾತುಕತೆ ನಡೆಸಿದ್ದರು.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅಲ್ಲಿದ್ದ ಕೆಲವರು ಮಾಡಿದ ಮನವಿಯಂತೆ ನಾನು ಉಳ್ಳಾಲ ದರ್ಗಾಕ್ಕೆ ತೆರಳಿ ಝಿಯಾರತ್ ನಡೆಸಿದ್ದೇನೆ. ಬಳಿಕ ಅಲ್ಲೇ ಜುಮಾ ಮಸೀದಿಯಲ್ಲಿ ಝೊಹರ್ ನಮಾಝ್ ನಿರ್ವಹಿಸಿ ಮಂಗಳೂರಿನ ಕಡೆಗೆ ತೆರಳಿರುವುದಾಗಿ ಖಾಝಿಯವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
Next Story





