ಭಾರತೀಯ ಅಮೆರಿಕನ್ ವಿಜ್ಞಾನಿಗೆ ಅಮೆರಿಕದ ಉನ್ನತ ಪ್ರಶಸ್ತಿ

ವಾಶಿಂಗ್ಟನ್, ಮೇ 20: ಭಾರತೀಯ ಅಮೆರಿಕನ್ ವಿಜ್ಞಾನಿ 65 ವರ್ಷದ ರಾಕೇಶ್ ಕೆ. ಜೈನ್‌ರಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ‘ರಾಷ್ಟ್ರೀಯ ವಿಜ್ಞಾನ ಪದಕ’ವನ್ನು ಗುರುವಾರ ಪ್ರದಾನ ಮಾಡಿದ್ದಾರೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕದಲ್ಲಿ ನೀಡುತ್ತಿರುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಆ್ಯಂಡ್ ಮ್ಯಾಸಚುಸೆಟ್ಸ್ ಜನರಲ್ ಹಾಸ್ಪಿಟಲ್‌ನ ರಾಕೇಶ್ ಜೈನ್ ಜೊತೆಗೆ ಪಾಕಿಸ್ತಾನಿ ಅಮೆರಿಕನ್ ವೈದ್ಯ ಮಾರ್ಕ್ ಎಸ್. ಹುಮಾಯೂನ್ ಕೂಡ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಾನವರಲ್ಲಿ ಕ್ಯಾನ್ಸರ್ ಪತ್ತೆ, ತಡೆ ಹಾಗೂ ಚಿಕಿತ್ಸೆಯ ಕ್ಷೇತ್ರದಲ್ಲಿ ಸಂಶೋಧಿಸಿದ ನೂತನ ವಿಧಾನಗಳಿಗಾಗಿ ರಾಕೇಶ್ ಜೈನ್‌ಗೆ ಪ್ರಶಸ್ತಿ ನೀಡಲಾಗಿದೆ. ಐಐಟಿ ಕಾನ್ಪುರದ ಹಳೆ ವಿದ್ಯಾರ್ಥಿಯಾಗಿರುವ ಜೈನ್ ಟ್ಯೂಮರ್ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Next Story





