ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯಾಗಿ ಚೆನ್ನಬಸಪ್ಪ
ದಿಢೀರ್ ಬದಲಾದ ಸರಕಾರದ ಆದೇಶ!
ಶಿವಮೊಗ್ಗ, ಮೇ 20: ಇತ್ತೀಚೆಗಷ್ಟೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿ (ಎ.ಡಿ.ಸಿ.)ಯಾಗಿ ನಿಯೋಜನೆ ಗೊಂಡಿದ್ದ ಎಚ್.ಜಿ. ಅನುರಾಧಾರವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನವೇ ವರ್ಗಾ ವಣೆಗೊಂಡಿದ್ದಾರೆ. ! ಮಹತ್ವದ ವಿದ್ಯಮಾನವೊಂದರಲ್ಲಿ ಎಚ್.ಜಿ. ಅನುರಾಧಾರವರನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಎ.ಡಿ.ಸಿ.ಯಾಗಿ ಪ್ರಸ್ತುತ ಉಡುಪಿ ಎ.ಡಿ.ಸಿ.ಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಚೆನ್ನಬಸಪ್ಪರವರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಶಿವ ಮೊಗ್ಗ ಎ.ಡಿ.ಸಿ.ಯಾಗಿರುವ ಎನ್.ಎಂ. ನಾಗರಾಜ್‌ರವರನ್ನು ಬೆಂಗಳೂರಿನ ಕೃಷ್ಣ ಭಾಗ್ಯ ಜಲ ನಿಗಮದ ಜನರಲ್ ಮ್ಯಾನೇಜರ್ ಆಗಿ ನೇಮಿಸಿ ವರ್ಗಾವಣೆ ಮಾಡಲಾಗಿತ್ತು. ಉಪ ಆಯುಕ್ತರಾಗಿದ್ದರು: ಪ್ರಸ್ತುತ ಎ.ಡಿ.ಸಿ.ಯಾಗಿ ವರ್ಗವಾಗಿರುವ ಚೆನ್ನಬಸಪ್ಪರವರು, ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾಗಿ ಸುಮಾರು ಏಳೆಂಟು ತಿಂಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದರು. ಸುಮಾರು ಒಂದು ತಿಂಗಳ ಕಾಲ ಪಾಲಿಕೆ ಪ್ರಭಾರ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಣೆ ಮಾಡಿದ್ದರು. ಉಪ ಆಯುಕ್ತರಾಗಿದ್ದ ಅವಧಿಯಲ್ಲಿ ನೇರ-ನಿ
ರ್ಭೀತ ಕಾರ್ಯವೈಖರಿಯ ಮೂಲಕ ಆಡಳಿತ ವಿಭಾಗದಲ್ಲಿ ಆಮೂ ಲಾಗ್ರ ಬದಲಾವಣೆಗೆ ಮುಂದಾಗಿದ್ದರು. ಹತ್ತು ಹಲವು ವಿನೂತನ ವ್ಯವಸ್ಥೆ ಕಾರ್ಯ ಗತಗೊಳಿಸಿದ್ದರು. ತಮ್ಮ ಜನಪರ ಕಾರ್ಯನಿರ್ವಹಣೆಯ ಮೂಲಕ ಸೀಮಿತಾ ವಧಿಯಲ್ಲಿಯೇ ಉತ್ತಮ ಹೆಸರು ಸಂಪಾದಿಸಿದ್ದರು. ದಕ್ಷ ಅಧಿಕಾರಿ: ಶಿವಮೊಗ್ಗ ಎ.ಡಿ.ಸಿ.ಯಾಗಿ ಚೆನ್ನಬಸಪ್ಪರವರನ್ನು ನೇಮಿಸಿರುವ ರಾಜ್ಯ ಸರಕಾರದ ಕ್ರಮವನ್ನು ಮಹಾನಗರ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿಯವರು
ೆುಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜಿಲ್ಲೆಗೆ ಮತ್ತೆ ದಕ್ಷ ಅಧಿಕಾರಿಯ ಸೇವೆ ಲಭ್ಯವಾಗಿರುವುದು ನಿಜಕ್ಕೂ ಸಂತಸದ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ೞಚೆನ್ನಬಸಪ್ಪರವರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾಗಿದ್ದ ವೇಳೆ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗಿದ್ದರು. ಜನಪರ ನಿಲುವು ಹೊಂದಿದ್ದರು. ಆದ್ಯತೆಯ ಮೇಲೆ ಕಡತಗಳ ವಿಲೇವಾರಿ ಮಾಡುತ್ತಿದ್ದರು. ಉತ್ತಮ ಅಧಿಕಾರಿ ಎಂಬ ಹೆಸರು ಸಂಪಾದಿಸಿದ್ದರುೞಎಂದು ಐಡಿಯಲ್ ಗೋಪಿಯವರು ಹೇಳಿದ್ದಾರೆ. ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಡಿ.ಸಿ. ಎನ್.ಎಂ.ನಾಗರಾಜ್, ತಮ್ಮ ಅವಧಿಯಲ್ಲಿ ನಡೆದ ಲೋಕಸಭೆ, ಶಿಕಾರಿಪುರ ವಿಧಾನಸಭೆ ಉಪ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು ಯಾವುದೇ ಗೊಂದಲ, ಆರೋಪ-ಪ್ರತ್ಯಾರೋಪಗಳಿಗೆ ಆಸ್ಪದ ನೀಡದಂತೆ ನಡೆಸಲಾಗಿದೆ. ಅರಣ್ಯ ಹಕ್ಕು ಕಾಯ್ದೆ, ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ವಿಷಯದಲ್ಲಿ ಹಲವು ಮಹತ್ತರ ಕ್ರಮಗಳನ್ನು ಕೈಗೊಳ್ಳಲಾಯಿತು. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವುದರ ಜೊತೆಗೆ, ತ್ವರಿತಗತಿಯಲ್ಲಿ ಕಡತ ವಿಲೇವಾರಿಯಾಗುವಂತೆ ಎಚ್ಚರವಹಿಸಿದ್ದೆ. ನಾಗರಿಕರು ಕೂಡ ತಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದ ಜಿಲ್ಲೆಯ ಎಲ್ಲ ನಾಗರಿಕರಿಗೆ ಆಭಾರಿಯಾಗಿದ್ದೇನೆ ಎಂದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ಹೊಸ ಅನುಭವ ನೀಡಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿಯಿದೆ. ತಮಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಸಲ್ಲಿಸುತ್ತೇನೆಎ.ಡಿ.ಸಿ. ಎನ್.ಎಂ.ನಾಗರಾಜ್







