ಕರ್ತವ್ಯ ಲೋಪ ಆರೋಪ: ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು

ಸೊರಬ, ಮೇ 20: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೊರಬ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗ ರಾಜ್ ಅವರನ್ನು ರಾಜ್ಯಪಾಲರ ಆದೇಶಾನುಸಾರ ಶಿಕ್ಷಣ ಇಲಾಖೆ (ಆಡಳಿತ) ಸರಕಾರದ ಅಧೀನ ಕಾರ್ಯದರ್ಶಿ ಜೆ.ಆರ್. ಅನ್ನಪೂರ್ಣ ಅಮಾನತುಗೆ
ೂಳಿಸಿ ಆದೇಶ ಹೊರಡಿಸಿದ್ದಾರೆ. ಹಿನ್ನೆಲೆ: ಶಿಕಾರಿಪುರ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಡಿ. ಉಮೇಶ್ ಎಂಬವರು ಸಲ್ಲಿಸಿದ್ದ ದೂರಿನನ್ವಯ ಸೊರಬ ತಾಲೂಕಿನ ಬಾರಂಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಮತಾ ಸಾಲಿ ಎಂಬವರು 2015 ಡಿಸೆಂಬರ್ 26ರಂದು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ಸಲ್ಲಿಸಿದ ಅದೇ ತಿಂಗಳ 31ರಂದು ರಾಜೀನಾಮೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ್‌ಅಂಗೀಕರಿಸಿದ್ದರು ಎನ್ನಲಾಗಿದೆ. ಸರಕಾರಿ ನೌಕರರು ರಾಜೀನಾಮೆ ನೀಡುವುದಾದಲ್ಲಿ ಕನಿಷ್ಠ 1 ತಿಂಗಳು ಮೊದಲು ನೀಡಬೇಕು. ಅಲ್ಲದೆ, ಜೊತೆ ಯಲ್ಲಿ ಒಂದು ತಿಂಗಳ ವೇತನವನ್ನು ಇಲಾಖೆಗೆ ಪಾವತಿಸಿದ ನಂತರವೇ ರಾಜಿನಾಮೆಯನ್ನು ಅಂಗೀಕರಿ ಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ರಾಜೀನಾಮೆ ಸಲ್ಲಿಸಿದ ಐದೇ ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ರಾಜೀನಾಮೆಯನ್ನು ಅಂಗೀಕರಿಸಲಾಗಿತ್ತು. ಶಿಕ್ಷಕಿ ಮಮತಾ ಸಾಲಿ ಅವರಿಗೆ ರಾಜಕೀಯವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿಯಮಗಳನ್ನು ಉಲ್ಲಂಘಿಸಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಡಿ. ಉಮೇಶ್ ದೂರು ನೀಡಿದ್ದರು. ಈ ಮೂಲಕ ನಾಗರಾಜ್ ಅವರು ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾದಂತೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾತುಗೊಳಿಸಲಾಗಿದೆ. ಇಲಾಖಾ ವಿಚಾರಣೆಗೆ ಕಾಯ್ದಿರಿಸಿ, ಅವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.





