Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೇಪಾಳ ಪ್ರತಿಭಟನೆ ಕೂಟ: ಇತಿಹಾಸದಿಂದ...

ನೇಪಾಳ ಪ್ರತಿಭಟನೆ ಕೂಟ: ಇತಿಹಾಸದಿಂದ ಕಲಿಯಬೇಕಿದೆ ಪಾಠ!

ಉಜ್ವಲ್ ಪ್ರಸಾಯಿಉಜ್ವಲ್ ಪ್ರಸಾಯಿ20 May 2016 10:37 PM IST
share
ನೇಪಾಳ ಪ್ರತಿಭಟನೆ ಕೂಟ: ಇತಿಹಾಸದಿಂದ ಕಲಿಯಬೇಕಿದೆ ಪಾಠ!

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಮತ್ತೆ ಹೊಸ ಪ್ರತಿಭಟನೆ ಅಲೆ ಎದ್ದಿದೆ. ಯುನೈಟೆಡ್ ಡೆಮಾಕ್ರೆಟಿಕ್ ಮಧೇಸಿ ್ರಂಟ್, ದೇಶದಲ್ಲಿ ವಿಭಜನೆಕಾರಿ ಸಂವಿಧಾನ ವಿರುದ್ಧದ ಐದು ತಿಂಗಳು ಸುದೀರ್ಘವಾದ ಚಳವಳಿಯನ್ನು ಸ್ಥಗಿತಗೊಳಿಸಿ ಸರಿಯಾಗಿ ಮೂರು ತಿಂಗಳ ಬಳಿಕ ಈ ಹೋರಾಟ ಆರಂಭವಾಗಿದೆ. ಯುಡಿಎಂಎ್ ಹಾಗೂ ಇತರ 29 ಪಕ್ಷಗಳ ಮೈತ್ರಿಕೂಟದ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಮಧೇಸಿ ್ರಂಟ್‌ನಲ್ಲಿ ಮಧೇಸಿ, ದಲಿತ, ಜಂಜಾಟಿ ಹಾಗೂ ಇತರ ಹಲವು ತುಳಿತಕ್ಕೊಳಗಾದ ಗುಂಪುಗಳು ಸೇರಿದ್ದು, ರವಿವಾರ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ವೈವಿಧ್ಯಮಯ ಹಿನ್ನೆಲೆಯಿಂದ ಬಂದಿದ್ದ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಈ ಮೈತ್ರಿ ರ್ಯಾಲಿ, ಎಲ್ಲರ ಸಹಭಾಗಿತ್ವದ ರಾಷ್ಟ್ರೀಯತೆಯ ನಿದರ್ಶನವಾಗಿ ಕಂಡುಬಂತು. ಇಂಥ ಎಲ್ಲರ ಪಾಲ್ಗೊಳ್ಳುವಿಕೆ ಸಹಭಾಗಿತ್ವವನ್ನು ದೇಶದ ಆಡಳಿತ ವ್ಯವಸ್ಥೆ ಇದುವರೆಗೆ ನಿರಾಕರಿಸುತ್ತಾ ಬಂದಿದೆ.
ಈ ರ್ಯಾಲಿ ಕಠ್ಮಂಡುವಿನ ಮೂಲ ನಿವಾಸಿ ಸಮುದಾಯ ಹಾಗೂ ಇತರ ಗುಡ್ಡಗಾಡು ಕೇಂದ್ರಿತ ಸಮುದಾಯಗಳಿಗೆ ನೇಪಾಳಿ ಏಕತೆಯನ್ನು ಪ್ರದರ್ಶಿಸಲು ಹೊಸ ಅವಕಾಶವನ್ನೂ ಸೃಷ್ಟಿಸಿಕೊಟ್ಟಿದೆ. ದೇಶದಲ್ಲಿ ಒಕ್ಕೂಟ ವ್ಯವಸ್ಥೆ, ಪ್ರತಿನಿತ್ವ ಹಾಗೂ ಎಲ್ಲರ ಪಾಲ್ಗೊಳ್ಳುವಿಕೆ ಕುರಿತ ವಿವಾದವನ್ನು ದುರ್ಬಲಗೊಳಿಸಲು ಆಡಳಿತಯಂತ್ರ ನಡೆಸುತ್ತಿರುವ ಯತ್ನವನ್ನು ವಿಲಗೊಳಿಸಲು ಕೂಡಾ ಇದು ವೇದಿಕೆಯಾಗುವ ಸೂಚನೆ ಕಾಣುತ್ತಿದೆ.

ವಿಶ್ವಕ್ಕೆ ಪಾಠ

ಭಾರತ, ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಗಳು ಮತ್ತು ಅಂತಾರಾಷ್ಟ್ರೀಯ ಸಂಘರ್ಷ ಗುಂಪುಗಳು, ಸಂವಿಧಾನದಲ್ಲಿ ನಿರ್ಲಕ್ಷಿಸಲ್ಪಟ್ಟ ನಾಗರಿಕರ ನ್ಯಾಯಯುತ ಬೇಡಿಕೆಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳುವಂತೆ ನೇಪಾಳ ಸರಕಾರವನ್ನು ಆಗ್ರಹಿಸುತ್ತಲೇ ಬಂದಿವೆ. ಹೊಸ ಪ್ರತಿಭಟನೆಗಳು ಇವುಗಳನ್ನು ನೆನಪಿಸಲು ಅವಕಾಶ ಮಾಡಿಕೊಡುವ ಜತೆಗೆ, ಇತಿಹಾಸದ ತಪ್ಪುಗಳಿಂದ ಪಾಠ ಕಲಿಯಲು ಇದು ಸುಸಂದರ್ಭವೂ ಆಗಿದೆ.
ಅಂತಾರಾಷ್ಟ್ರೀಯ ಸಮುದಾಯ ಈ ವಿವಾದದಲ್ಲಿ ಉಪಯುಕ್ತ ಪಾತ್ರ ವಹಿಸಲು ಅವಕಾಶವಿದ್ದು, ಸರಕಾರ ಹಾಗೂ ಪ್ರತಿಭಟನಾಕಾರರು ಹಿಂಸಾತ್ಮಕ ಮಾರ್ಗದಿಂದ ದೂರ ಇರುವಂತೆ ಆಗ್ರಹಿಸಬಹುದಾಗಿದೆ.
ಮಧೇಸಿ ಹಾಗೂ ಇತರ ದುರ್ಬಲ ವರ್ಗಗಳ ದೂರು ದುಮ್ಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರಬಹುದಾಗಿದ್ದು, ಇದಕ್ಕೆ ಪ್ರಜಾಸತ್ತಾತ್ಮಕ ನಡೆ ಅಗತ್ಯವೇ ವಿನಃ ಸರಕಾರವನ್ನು ಪತನಗೊಳಿಸುವಂಥ ಪ್ರಯತ್ನಗಳು ನಡೆಯಬಾರದು.
ಸರಕಾರವನ್ನು ಪತನಗೊಳಿಸುವಂಥ ಪ್ರಯತ್ನಗಳು ಸಹಜವಾಗಿಯೇ ಎಲ್ಲರ ಸಹಭಾಗಿತ್ವವನ್ನು ಒಳಗೊಳ್ಳದ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಆಡಂಬರದ ದೇಶಭಕ್ತಿ ಪ್ರದರ್ಶಿಸುವ, ವಾಚಾಳಿ ವರ್ಗ ಅಕಾರವನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಿ ಒಗ್ಗೂಡಲು ಕಾರಣವಾಗುತ್ತದೆ. ಈ ಹೊಸ ಪ್ರತಿಭಟನೆಗಳಿಗೆ ಭಾರತದ ಬೆಂಬಲ ಇದೆ ಎನ್ನುವ ವದಂತಿಗಳು ಈಗಾಗಲೇ ಕಠ್ಮಂಡುವಿನಲ್ಲಿ ಬಲವಾಗಿ ಹರಡಿವೆ. ನೇಪಾಳದಲ್ಲಿ ಅಸ್ಥಿರತೆ ಮೂಡಿಸುವ ಇನ್ನೊಂದು ಹುನ್ನಾರ ಎಂದು ಈ ಹೋರಾಟವನ್ನು ಬಿಂಬಿಸಲಾಗುತ್ತಿದೆ.
ನೇಪಾಳದ ಬಹುತೇಕ ಮಾಧ್ಯಮಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಂವಿಧಾನದಲ್ಲಿ ಯಾವುದೇ ಸಮಸ್ಯೆಗಳನ್ನು ಕಾಣುತ್ತಿಲ್ಲ. ಈ ಕಾರಣದಿಂದ ಹೊರಗುಳಿದ ದುರ್ಬಲ ವರ್ಗಗಳ ಪ್ರತಿಭಟನೆಯನ್ನು ಸಹಜವಾಗಿಯೇ ಮಾಧ್ಯಮಗಳು ಅನನುಕೂಲ ಎಂದು ಪರಿಗಣಿಸಿವೆ. ಆದ್ದರಿಂದಲೇ ಈ ಪ್ರತಿಭಟನೆಗಳನ್ನು ಭಾರತೀಯ ಸಂಚು ಎಂಬ ಅರ್ಥದಲ್ಲಿ ಭಾವನಾತ್ಮಕವಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಮೂಲಕ ಪ್ರತಿಭಟನಾಕಾರರನ್ನು ಮಾಧ್ಯಮಗಳು ಸಂಚುಕೋರರಾಗಿ ಚಿತ್ರಿಸುತ್ತಿವೆ.

ನಾಯಕರಿಗೆ ಪಾಠ
ಪ್ರತಿಭಟನೆ ನೇತೃತ್ವ ವಹಿಸಿರುವ ಮುಖಂಡರು, ವಿದೇಶಿ ರಾಜತಾಂತ್ರಿಕರು ಹಾಗೂ ಸಹಚರರ ಜತೆ ಸಲುಗೆಯಿಂದ ಇರುವ ಬಗ್ಗೆ ಬುದ್ಧಿಜೀವಿಗಳು ಇತ್ತೀಚೆಗೆ ಮಧೇಸಿ ಪಕ್ಷ ಕರೆದಿದ್ದ ನಾಗರಿಕ ಸಮಾಜ ಸಮಾವೇಶಗಳಲ್ಲಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ರಾಜತಾಂತ್ರಿಕ ಕಚೇರಿಗಳಲ್ಲಿ ನಡೆಸುವಂಥ ರಹಸ್ಯ ಸಭೆಗಳಿಂದ ಸಹಜವಾಗಿಯೇ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗುತ್ತದೆ. ಇದರಿಂದ ಇದೊಂದು ಅಂತಾರಾಷ್ಟ್ರೀಯ ಪಿತೂರಿ ಎಂಬಂಥ ವದಂತಿಯನ್ನು ತೇಲಿ ಬಿಡಲು ಕಾರಣವಾಗುತ್ತದೆ ಎನ್ನುವುದು ಈ ಬುದ್ಧಿಜೀವಿಗಳ ವಾದ.
ಇಂಥ ಹೊಸ ಹೊಸ ಸುದ್ದಿಗಳು ಮೈತ್ರಿಕೂಟದ ಪಾಲುದಾರರಲ್ಲಿ ಸಹಜವಾಗಿಯೇ ಸಂಶಯ ಹಾಗೂ ಅಪನಂಬಿಕೆಯ ಬೀಜವನ್ನು ಬಿತ್ತಲು ಕಾರಣವಾಗುತ್ತವೆ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟದ ಹಲವು ಪಕ್ಷಗಳ ಮುಖಂಡರು ತಮ್ಮ ಸಂವಹನ ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯ. ಯಾವುದೇ ಅನಗತ್ಯ ಭೌಗೋಳಿಕ-ರಾಜಕೀಯ ಆಟಗಳು ಖಂಡಿತವಾಗಿಯೂ ಇಂಥ ನ್ಯಾಯಬದ್ಧ ಹೋರಾಟಕ್ಕೆ ಮಾರಕವಾಗಿ ಪರಿಣಮಿಸಿ, ಮೈತ್ರಿಕೂಟದ ಪಾಲುದಾರರಲ್ಲಿ ಅಪನಂಬಿಕೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯ.
ಎಲ್ಲ ಭಿನ್ನಾಭಿಪ್ರಾಯಗಳು ಹಾಗೂ ಭೌಗೋಳಿಕ ಸಂಘರ್ಷಗಳು ಮೈತ್ರಿಕೂಟದ ಅಗ್ರ ನಾಯಕರಲ್ಲಿದ್ದರೂ, ಈ ಹೋರಾಟದಲ್ಲಿ ಗೆಲ್ಲುವವರೆಗೂ ಎಲ್ಲರೂ ಒಗ್ಗಟ್ಟಿನಿಂದ ನಿಂತಲ್ಲಿ ಮಾತ್ರ ಈ ಮಹತ್ವದ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಬಹುದು. ಆಡಳಿತ ವರ್ಗದಿಂದ ಎದುರಾಗುವ ಸವಾಲಿಗಿಂತಲೂ ದೊಡ್ಡ ಸವಾಲು ಎಂದರೆ ಈ ಮೈತ್ರಿಕೂಟದ ಏಕತೆಯನ್ನು ಉಳಿಸಿಕೊಳ್ಳುವುದು.

ತಡೆಯಿಂದ ಕಲಿಯಬೇಕಾದ ಪಾಠ
ಮೊನ್ನೆ ನಡೆದ ಕೊನೆಯ ಸುತ್ತಿನ ಪ್ರತಿಭಟನೆಯ ವೇಳೆ ಸರಕಾರ ಅಕವಾಗಿ ಬಲಪ್ರಯೋಗ ಮಾಡಿ, ಪ್ರತಿಭಟನಾಕಾರರನ್ನು ಬೇಕಾಬಿಟ್ಟಿಯಾಗಿ ಹತ್ಯೆ ಮಾಡುವ ದುಸ್ಸಾಹಸಕ್ಕೆ ಕೈಹಾಕಿದೆ. ಇದರಿಂದಾಗಿ ಸಹಜವಾಗಿಯೇ ಪ್ರತಿರೋಧಾತ್ಮಕ ಹಿಂಸೆ ಭುಗಿಲೆದ್ದಿದ್ದು, ಪ್ರತಿಭಟನಾನಿರತ ಮಧೇಸಿ ಮೋರ್ಚಾ ಗಡಿಗಳನ್ನು ಮುಚ್ಚಿದೆ.
ಇದಕ್ಕಾಗಿ ಪ್ರತಿಭಟನಾಕಾರರು ಭಾರತದ ನೆರವು ಯಾಚಿಸಿದ್ದಾರೆ. ಮೂಲಭೂತ ಅಗತ್ಯದ ವಸ್ತುಗಳ ಸರಬರಾಜು ಕಡಿತಗೊಂಡಿರುವುದರಿಂದ, ಜನಸಾಮಾನ್ಯರು ಸಹಜವಾಗಿಯೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸರಕಾರದ ದೌರ್ಜನ್ಯಗಳು ಇಳಿಮುಖವಾಗಿದ್ದರೂ, ಪ್ರತಿಭಟನಾಕಾರರು ಮಾಡಿದ ಗಡಿ ತಡೆ ಹಾಗೂ ಭಾರತ ಇದರಲ್ಲಿ ನಿರ್ವಹಿಸಿದ ಪಾತ್ರ ಇಡೀ ದೇಶದಲ್ಲಿ ಚರ್ಚಾ ವಿಷಯವಾಗಿದೆಯೇ ವಿನಃ ಸಂವಿಧಾನದಿಂದ ಹೊರಗುಳಿದ ವರ್ಗದ ದೂರು- ದುಮ್ಮಾನಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯೂ ಬಾರದ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ವರ್ಗದಲ್ಲಿ ದಣಿವು ಕಾಣಿಸಿಕೊಂಡಿದೆ. ಇದರಿಂದ ಕ್ರಮೇಣ ಗಡಿ ತಡೆ ಕರೆಯನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಅನಿವಾರ್ಯವಾಗಿ ಬಂದಿದ್ದಾರೆ.
ಭಾರತದ ಪಾತ್ರ ಕುರಿತ ಟ್ರಂಪ್ ಕಾರ್ಡನ್ನು ಅತಿಯಾಗಿ ಬಳಸುವುದರಿಂದ, ಯಾವ ಅಪೇಕ್ಷಿತ ಲ ಕೂಡಾ ಸಿಗುವ ಸಾಧ್ಯತೆ ಇಲ್ಲ ಎನ್ನುವುದು ನಿಸ್ಸಂದೇಹ ಹಾಗೂ ಇದು ಅನುಭವದಿಂದ ಕಲಿಯಬೇಕಾದ ಪಾಠ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ನೈತಿಕ ಬೆಂಬಲ ಯಾಚಿಸಿ, ಹೋರಾಟವನ್ನು ಸುಸ್ಥಿರವಾಗಿರಿಸಲು ಮುಂದಾಗಬೇಕಿದೆ. ಇದರ ಜತೆಗೆ ಸರಕಾರದ ಮೇಲೂ ನಿಯತವಾಗಿ ಒತ್ತಡವನ್ನು ಹೇರಬೇಕಿದೆ.
ಮೋರ್ಚಾ ಇತ್ತೀಚೆಗೆ ಕಠ್ಮಂಡುವಿನಲ್ಲಿ ಆಯೋಜಿಸಿದ್ದ ಒಂದು ಸಭೆಯಲ್ಲಿ ಹಿರಿಯ ಲೇಖಕ ಖಗೇಂದ್ರ ಸಂಗ್ರೌಲಾ ಹೇಳಿದಂತೆ, ‘‘ಸಿಂಗ್ ದರ್ಬಾರ್ ಅಥವಾ ದಿಲ್ಲಿ ದರ್ಬಾರ್ ಮಧೇಸಿಗಳಿಗೆ ತಮ್ಮ ಹಕ್ಕುಗಳನ್ನು ದೊರಕಿಸಿಕೊಡಲು ಸಾಧ್ಯವಿಲ್ಲ. ನಿಮ್ಮ ಸಂಘರ್ಷವೇ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು’’
          ನಿಜವಾಗಿಯೂ ಇದು ಅತ್ಯಂತ ಒಳ್ಳೆಯ ಸಲಹೆಯಾಗಿದ್ದು, ಇದನ್ನು ಅಳವಡಿಸಿಕೊಳ್ಳಬೇಕು. ಹೋರಾಟವನ್ನು ಜೀವಂತವಾಗಿ ಇರಿಸಿಕೊಳ್ಳುವುದೊಂದೇ ಹೋರಾಟಗಾರ ಮುಖಂಡರಿಗೆ ಇರುವ ಏಕೈಕ ಮಾರ್ಗವೇ ವಿನಃ ತಮ್ಮ ನೆರವಿಗೆ ದೇವದೂತ ಬರುತ್ತಾನೆ ಎಂಬ ನಿರೀಕ್ಷೆ ಅಲ್ಲ. ಕೃಪೆ: scroll.in

share
ಉಜ್ವಲ್ ಪ್ರಸಾಯಿ
ಉಜ್ವಲ್ ಪ್ರಸಾಯಿ
Next Story
X