ನೀರುಪಾಲಾಗಿದ್ದ ಯುವಕರ ಮೃತದೇಹ ಪತ್ತೆ
ಮಂಗಳೂರು, ಮೇ 20: ಗುರುಪುರ ಹೊಳೆಯ ಆದ್ಯಪಾಡಿ ಡ್ಯಾಂನ ಬಳಿ ಚಿಪ್ಪು ಮೀನು (ಮರುವಾಯಿ) ಹೆಕ್ಕಲು ಹೋಗಿ ನೀರುಪಾಲಾಗಿದ್ದ ಇಬ್ಬರು ಸಹೋದರರ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿದೆ.
ಮೂಡುಶೆಡ್ಡೆ ಶಿವನಗರದ ನಿವಾಸಿಗಳಾದ ಸಂದೀಪ್ ಮತ್ತು ಪ್ರದೀಪ್ ಎಂಬ ಸಹೋದರರ ಸಹಿತ ಮೂವರು ಗುರುವಾರ ಸಂಜೆ ಸುಮಾರು 4 ಗಂಟೆಗೆ ಡ್ಯಾಂ ಬಳಿ ತೆರಳಿದ್ದರು. ಇವರಲ್ಲಿ ಸಂದೀಪ್ ಮತ್ತು ಪ್ರದೀಪ್ ನೀರಿಗೆ ಇಳಿದು ಚಿಪ್ಪು ಮೀನು ಹೆಕ್ಕಲು ಪ್ರಾರಂಭಿಸಿದ್ದರು. ಚಿಪ್ಪು ಮೀನು ಹೆಕ್ಕುತ್ತಾ ನೀರಿನಲ್ಲಿ ಮುಂದೆ ಸಾಗುತ್ತಿದ್ದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಅಗ್ನಿ ಶಾಮಕ ದಳದವರು ನಾಪತ್ತೆಯಾದವರಿಗಾಗಿ ರಾತ್ರಿವರೆಗೂ ನೀರಿನಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ, ನಾಪತ್ತೆಯಾದ ಇಬ್ಬರ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





