ಶಿಶುಮರಣ ಪ್ರಮಾಣ: ಭಾರತಕ್ಕಿಂತ ಆಫ್ರಿಕನ್ ದೇಶಗಳೇ ಲೇಸು
ಮೋದಿಯ ಸೊಮಾಲಿಯಾ ಅಣಕದಿಂದಾಚೆ...

‘‘ಸೊಮಾಲಿಯಾದಲ್ಲಿ ಸಂಭವಿಸುವ ಶಿಶುಮರಣ ಪ್ರಮಾಣಕ್ಕಿಂತ ಕೇರಳದ ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚು ಶಿಶುಮರಣ ಸಂಭವಿಸುತ್ತಿದೆ’’ ಎಂಬ ಮೋದಿ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಮೋದಿ ಪ್ರತಿಪಾದನೆ ಸುಳ್ಳು ಎನ್ನುವ ಅಂಶ ್ಯಾಕ್ಟ್‌ಚೆಕ್ಕರ್ ವರದಿ ಸಾಬೀತುಪಡಿಸಿದೆ.
ಆಫ್ರಿಕನ್ ದೇಶವನ್ನು ಕೀಳಾಗಿ ಕಾಣುವ ದೃಷ್ಟಿಯಿಂದ ಆ ದೇಶಗಳ ಜೊತೆ ತುಲನೆ ಮಾಡುವ ಮುಸುಕಿನ ವರ್ಣಭೇದದ ಬಗ್ಗೆ ಕೆಲವರು ಗಮನ ಸೆಳೆದು, ಹೋಲಿಕೆ ಹಾಗೂ ಟೀಕೆಗಳನ್ನು ಪರಿಶೀಲಿಸಿದಾಗ ಹೊಸ ಮಹತ್ವದ ಅಂಶವೊಂದು ಬಹಿರಂಗವಾಗಿದೆ. 13 ಆಫ್ರಿಕನ್ ದೇಶಗಳ ಒಟ್ಟಾರೆ ಚಿತ್ರಣವನ್ನು ನೋಡಿದರೆ, ಶಿಶುಮರಣ ಪ್ರಮಾಣದ ಮಾನದಂಡದಲ್ಲಿ ಭಾರತಕ್ಕಿಂತ ಈ ದೇಶಗಳು ಮುಂದಿವೆ ಎನ್ನುವ ಅಂಶ ವಿಶ್ವ ಬ್ಯಾಂಕಿನ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.
ಹದಿಮೂರು ಆಫ್ರಿಕನ್ ದೇಶಗಳ ಪೈಕಿ ಉತ್ತರ ಆಫ್ರಿಕಾದ ಐದು ದೇಶಗಳಾದ ಲಿಬಿಯಾ, ಟ್ಯೂನೇಶಿಯಾ, ಮೊರಾಕ್ಕೊ, ಈಜಿಪ್ಟ್ ಹಾಗೂ ಅಲ್ಜೀರಿಯಾ ಭಾರತಕ್ಕಿಂತ ಸಮೃದ್ಧ. ಆದರೆ ಕೇಂದ್ರ ಹಾಗೂ ದಕ್ಷಿಣ ಆಫ್ರಿಕಾದ ದೇಶಗಳು ಭಾರತಕ್ಕಿಂತಲೂ ಬಡದೇಶಗಳು. ಇಷ್ಟಾಗಿಯೂ ಈ ದೇಶಗಳಲ್ಲಿ ಶಿಶುಮರಣ ಪ್ರಮಾಣ ಭಾರತಕ್ಕಿಂತ ಕಡಿಮೆ ಎನ್ನುವುದು ಗಮನಾರ್ಹ.
ಯುದ್ಧಪೀಡಿತ ಲಿಬಿಯಾ, ಇಡೀ ಆಫ್ರಿಕಾ ಖಂಡದಲ್ಲೇ ಅತ್ಯಂತ ಕನಿಷ್ಠ ಶಿಶುಮರಣ ಪ್ರಮಾಣವನ್ನು ಹೊಂದಿದೆ. ಈ ದೇಶದಲ್ಲಿ ಪ್ರತಿ 1,000 ನವಜಾತ ಶಿಶುಗಳ ಪೈಕಿ 12 ಮಂದಿ ಮಾತ್ರ ಸಾಯುತ್ತವೆ. ಈ ಪ್ರಮಾಣ ಕೇರಳದ ಶಿಶುಮರಣ ಪ್ರಮಾಣಕ್ಕೆ ಸಮ. ಟ್ಯೂನೇಶಿಯಾ (13) ನಂತರದ ಸ್ಥಾನದಲ್ಲಿದೆ. ಭಾರತದಲ್ಲಿ ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ ಅತ್ಯಂತ ಕಡಿಮೆ ಅಂದರೆ ಪ್ರತಿ ಸಾವಿರ ನವಜಾತ ಶಿಶುಗಳಲ್ಲಿ 10 ಮಾತ್ರ ಅಸು ನೀಗುತ್ತವೆ ಎಂದು ಸರಕಾರದ ಅಂಕಿ ಅಂಶಗಳು ಹೇಳುತ್ತವೆ. ಆದರೆ ಮಧ್ಯಪ್ರದೇಶದಲ್ಲಿ ಅತ್ಯಕ ಶಿಶುಮರಣ ಸಂಭವಿಸುತ್ತಿದ್ದು, ಪ್ರತಿ ಸಾವಿರಕ್ಕೆ 56 ಮಕ್ಕಳು ಸಾಯುವ ಈ ರಾಜ್ಯ, ವಿಶ್ವದಲ್ಲೇ ಅತ್ಯಕ ಶಿಶುಮರಣ ಪ್ರಮಾಣ ಹೊಂದಿದೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ, ಮಕ್ಕಳಿಗೆ ಸುರಕ್ಷಿತ ದೇಶ ಎನಿಸಿದ ಆಫ್ರಿಕಾ ದೇಶಗಳಿಗಿಂತ ಹೆಚ್ಚು. ಉದಾಹರಣೆಗೆ ಗುಜರಾತ್‌ನಲ್ಲಿ ಶಿಶುಮರಣ ಪ್ರಮಾಣ 1,000ಕ್ಕೆ 38 ಇದ್ದರೆ, ರಾಜಸ್ಥಾನದಲ್ಲಿ ಈ ಪ್ರಮಾಣ 49.
ಮಡಗಾಸ್ಕರ್ ಹಾಗೂ ಕೀನ್ಯಾದಲ್ಲಿ ಶಿಶುಮರಣ ಪ್ರಮಾಣ 1,000ಕ್ಕೆ 38 ಇದೆ. ಇದು ಭಾರತದ ಪ್ರಮಾಣಕ್ಕೆ ಸನಿಹದಲ್ಲಿದ್ದರೂ, ಭಾರತಕ್ಕಿಂತ ಉತ್ತಮ. ಭಾರತದಲ್ಲಿ ಸರಾಸರಿ ಸಾವಿರಕ್ಕೆ 42 ನವಜಾತ ಶಿಶುಗಳು ಸಾಯುತ್ತಿವೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈ ಎರಡೂ ದೇಶಗಳು ಭಾರತಕ್ಕಿಂತ ಕಡಿಮೆ ತಲಾದಾಯ ಹೊಂದಿರುವ ದೇಶಗಳು ಎಂದು ವಿಶ್ವಬ್ಯಾಂಕಿನ ಅಂಕಿ ಅಂಶ ಹೇಳುತ್ತದೆ. ಭಾರತದ ತಲಾದಾಯಕ್ಕಿಂತ ಅರ್ಧದಷ್ಟು ತಲಾದಾಯ ಹೊಂದಿರುವ ಉಗಾಂಡಾದಲ್ಲಿ ಭಾರತದಷ್ಟೇ ಶಿಶುಮರಣ ಪ್ರಮಾಣ (42) ಇದೆ. ಭಾರತದ ಆರೋಗ್ಯ ಹಾಗೂ ಮಾನವ ಅಭಿವೃದ್ಧಿ ಸಾಧನೆಗಳು ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿವೆ ಎಂಬ ಪ್ರತಿಪಾದನೆಗೆ ಈ ಅಂಶ ಒತ್ತು ನೀಡುತ್ತವೆ. ವಿಶ್ವದಲ್ಲೇ ಅತ್ಯಕ ಶಿಶುಮರಣ ಪ್ರಮಾಣ ಹೊಂದಿರುವ ದೇಶಗಳಲ್ಲೂ ಕೆಲ ಆಫ್ರಿಕನ್ ದೇಶಗಳು ಸೇರಿವೆ. ಉದಾಹರಣೆಗೆ ಅಂಗೋಲಾದಲ್ಲಿ ಹುಟ್ಟುವ ಪ್ರತಿ 1,000 ಮಕ್ಕಳ ಪೈಕಿ 101 ಶಿಶುಗಳು ಸಾಯುತ್ತವೆ. ಸೊಮಾಲಿಯಾದಲ್ಲಿ ಶಿಶುಮರಣ ಪ್ರಮಾಣ 85.
(ಕೃಪೆ: ಇಂಡಿಯಾಸ್ಪೆಂಡ್.ಕಾಮ್)







