ಮೇ 22ರಂದು ರಾಜ್ಯಮಟ್ಟದ ವಿಚಾರ ಸಂಕಿರಣ
ಮಂಗಳೂರು, ಮೇ 20: ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಹೆರಿಟೇಜ್ ಮಲಬಾರ್ ಆಯುರ್ವೇದಿಕ್ ಾರ್ಮಸಿ ಸಂಯುಕ್ತಾಶ್ರಯದಲ್ಲಿ ಮೇ 22 ರಂದು ‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಭಾಂಗಣದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಜರಗಲಿದೆ.
‘ಆಯುರ್ವೇದ ಚಿಕಿತ್ಸೆಯಲ್ಲಿ ಶಾಸೀಯ ಔಷಧಗಳ ಬಳಕೆ’ ಕುರಿತ ವಿಚಾರವಾಗಿ ನಡೆಯುವ ವಿಚಾರಸಂಕಿರಣದಲ್ಲಿ ಡಾ. ಗೋಪಕುಮಾರ್ ವಿಷಯ ತಜ್ಞರಾಗಿರುವರು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ದಿನೇ ದಿನೇ ಕುಸಿತ ಕಾಣುತ್ತಿರುವ ಪರಿಣಾಮಕಾರಿಯಾಗಿರುವ ಶಾಸೀಯ ಔಷಧಗಳ ಸರಿಯಾದ ಬಳಕೆ ಮತ್ತು ಅದರಿಂದಾಗುವ ಪ್ರಯೋಜನಗಳ ಕುರಿತು ಬೆಳಕು ಚೆಲ್ಲಲಿದೆ. ಆಯುರ್ವೇದ ವೈದ್ಯರಿಗೆ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ.
ಕಾರ್ಯಕ್ರಮವನ್ನು ಪತ್ರಕರ್ತ ಮನೋಹರ್ ಪ್ರಸಾದ್ ಉದ್ಘಾಟಿಸುವರು. ಡಾ. ಪ್ರಕಾಶ್ ತಾರಿವಾಳ್, ಡಾ. ರಾಜೇಶ್ವರಿದೇವಿ ಮತ್ತು ಡಾ. ದೇವದಾಸ್ ಪುತ್ರನ್ ವಿಶೇಷ ಅತಿಥಿಗಳಾಗಿರುವರು ಎಂದು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





