ಅಂಬ್ಲಮೊಗರು ಸರಕಾರಿ ಪ್ರೌಢಶಾಲೆಗೆ ಶಿಕ್ಷಕರ ನೇಮಕಕ್ಕೆ ಮನವಿ
ಮಂಗಳೂರು, ಮೇ 20: ಅಂಬ್ಲಮೊಗರುವಿನ ಸರಕಾರಿ ಪ್ರೌಢಶಾಲೆಗೆ ಈ ಶೈಕ್ಷಣಿಕ ವರ್ಷದಿಂದಲೆ ಶಿಕ್ಷಕರ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಅಂಬ್ಲಮೊಗರು, ಮದಕ ಘಟಕದ ವತಿಯಿಂದ ದ.ಕ ಜಿಲ್ಲಾಧಿಕಾರಿಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಅಂಬ್ಲಮೊಗರು ಸರಕಾರಿ ಪ್ರೌಢಶಾಲೆಯು 2013-14ರಲ್ಲಿ 9 ನೆ ತರಗತಿ ಪ್ರಾರಂಭಿಸಿತ್ತು. 2014-15 ರಲ್ಲಿ ಎಸೆಸೆಲ್ಸಿಯಲ್ಲಿ 30 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದರು. ಆದರೆ ಎರಡು ವರ್ಷಗಳಲ್ಲಿ ಈ ಶಾಲೆಗೆ ಶಿಕ್ಷಕರ ನೇಮಕಾತಿ ಆಗಿರಲಿಲ್ಲ.
ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಇತರರ ಸಹಾಯ ಪಡೆದು ತಮ್ಮ ಸಂಬಳವನ್ನು ಹಂಚಿಕೊಂಡು ತಾತ್ಕಲಿಕ ಅಧ್ಯಾಪಕರನ್ನು ನೇಮಿಸಿದ್ದರು. ಇನ್ನು ಮುಂದೆ ಈ ರೀತಿ ಆಗದಂತೆ ಕೂಡಲೆ ಶಾಲೆಗೆ ಅವಶ್ಯವಿರುವ ಏಳು ಶಿಕ್ಷಕರನ್ನು ನೇಮಿಸಬೇಕೆಂದು ಡಿವೈಎಫ್‌ಐ ಅಂಬ್ಲಮೊಗರು ಮದಕ ಘಟಕದ ಮುಖಂಡ ಇಬ್ರಾಹೀಂ ನೇತೃತ್ವದಲ್ಲಿ ಮನವಿಯನ್ನು ನೀಡಲಾಯಿತು.
Next Story





