ಖಾಸಗಿ ಆಸ್ಪತ್ರೆಗಳಿಂದ ರೋಗಿಗಳಿಗೆ ದುಬಾರಿ ಬೆಲೆಗೆ ರಕ್ತ ಮಾರಾಟ!

ಬೆಂಗಳೂರು, ಮೇ 20: ರಕ್ತದಾನದಿಂದ ಮತ್ತೊಬ್ಬರ ಜೀವ ವನ್ನು ಉಳಿಸಬಹುದೆಂಬ ನಂಬಿಕೆಯಿಂದ ಮಾನವೀಯ ಹೃದಯ ವುಳ್ಳವರು ಸರಕಾರಿ ಆಸ್ಪತ್ರೆಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಹಾಗೂ ರಕ್ತದಾನ ಶಿಬಿರಗಳಿಗೆ ಸ್ವತಃ ತೆರಳಿ ರಕ್ತದಾನ ಮಾಡುತ್ತಾರೆ. ಆದರೆ, ಅಂತಃಕರಣ ಇಲ್ಲದ ಖಾಸಗಿ ಆಸ್ಪತ್ರೆಗಳಿಂದು ದಾನಿ ಗಳಿಂದ ಪಡೆದ ರಕ್ತವನ್ನು 6 ರಿಂದ 8 ಸಾವಿರ ರೂ.ಗೆ ಮಾರು ತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಬಿಸಿಲಿನ ತಾಪಮಾನ ಹಾಗೂ ಹವಾಮಾನದ ವೈಪರೀತ್ಯ ದಿಂದಾಗಿ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿವೆ ಹಾಗೂ ದಾನ ತೆಗೆದುಕೊಂಡ ರಕ್ತವನ್ನು ಹೆಚ್ಚು ದಿನ ಶೇಖರಿಸಿಡಲು ಬರುವುದಿಲ್ಲ. ಹೀಗಾಗಿ, ಮೂರು ಅಥವಾ ನಾಲ್ಕು ತಿಂಗಳಿ ಗೊಮ್ಮೆ ರಕ್ತದಾನ ಮಾಡಬಹುದೆಂದು ಪ್ರಚಾರ ಮಾಡು ತ್ತಾರೆ ಹಾಗೂ ಖಾಸಗಿ ಆಸ್ಪತ್ರೆಗಳು ಶಿಬಿರಗಳನ್ನು ಏರ್ಪಡಿಸಿ ದಾನಿಗಳಿಂದ ರಕ್ತವನ್ನು ಪಡೆದು ಒಂದು ಬಾಟಲ್ ರಕ್ತಕ್ಕೆ 6 ರಿಂದ 8 ಸಾವಿರ ರೂ.ಹಣವನ್ನು ಪಡೆದು ರೋಗಿಗಳಿಗೆ ಮಾರಾಟ ಮಾಡುತ್ತಾರೆ. ಬಡವರು ಅಷ್ಟೊಂದು ಹಣವನ್ನು ಕೊಡುವುದಕ್ಕೆ ಸಾಧ್ಯವಿಲ್ಲ ವೆಂದರೆ ನಮ್ಮ ಬ್ಲಡ್ ಬ್ಯಾಂಕ್‌ನಲ್ಲಿ ನಿಮಗೆ ಬೇಕಾಗಿರುವ ರಕ್ತವಿಲ್ಲ ಎಂದು ಹೇಳಿ ಅವರಿಗೆ ನೀಡುವ ಚಿಕಿತ್ಸೆಯನ್ನೇ ನಿರಾಕರಿ ಸುತ್ತಾರೆ. ಆದರೆ, ಶಿಬಿರಗಳನ್ನು ಏರ್ಪಡಿಸಿದಾಗ ದಾನಿಗಳಿಂದ ಪಡೆದ ರಕ್ತವನ್ನು ಯಾವುದೇ ಕಾರಣಕ್ಕೂ ಹಣಕ್ಕೆ ಮಾರುವು ದಿಲ್ಲವೆಂದು ಆಶ್ವಾಸನೆ ನೀಡುತ್ತಾರೆ. ಆದರೆ, ರಕ್ತದ ಕೊರತೆ ಯಾದಾಗ ರೋಗಿಗಳಿಗೆ ಉಚಿತವಾಗಿ ರಕ್ತವನ್ನು ನೀಡುವುದಿಲ್ಲ ಎನ್ನಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ರೋಗಿಗಳ ಚಿಕಿತ್ಸೆಗೆ ದುಬಾರಿ ಹಣವನ್ನು ಕಸಿದುಕೊಳ್ಳುವುದನ್ನು ಕಂಡಿದ್ದೇವೆ. ಆದರೆ, ದಾನಿಗಳಿಂದ ಪಡೆದ ರಕ್ತಕ್ಕೂ ಹಣವನ್ನು ಪಡೆಯುವುದೆಂದರೆ ಇದೊಂದು ನೋವಿನ ಸಂಗತಿಯಾಗಿದೆ. ಹತ್ತು ಹಲವು ಸಂಘಟನೆಗಳು ನಾನಾ ಕಾರಣಗಳಿಗೆ ಕಾರ್ಯ ಕ್ರಮಗಳನ್ನು ಏರ್ಪಡಿಸಿದಾಗ ಖಾಸಗಿ ಆಸ್ಪತ್ರೆಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ದಾನಿ ಗಳಿಂದ ರಕ್ತವನ್ನು ಪಡೆದುಕೊಂಡು ಹೋಗುತ್ತಾರೆ. ಯಾರಾದರೂ ರಕ್ತದ ಆವಶ್ಯಕತೆ ಇದ್ದಾಗ ರಕ್ತವನ್ನು ಉಚಿತವಾಗಿ ನೀಡುತ್ತೇ ವೆಂದು ಆಶ್ವಾಸನೆ ನೀಡುತ್ತಾರೆ. ಆದರೆ,ರಕ್ತದ ಆವಶ್ಯಕತೆ ಇದ್ದ ರೋಗಿಗಳು ರಕ್ತಬೇಕು ಎಂದಾಗ ಅವರ ಬಳಿ ದುಬಾರಿ ಹಣವನ್ನು ಕಿತ್ತುಕೊಂಡು ರಕ್ತವನ್ನು ನೀಡುತ್ತಾರೆ. ಸರಕಾರಿ ಆಸ್ಪತ್ರೆಗಳು ಕಾನೂನು ಪ್ರಕಾರ 400, 600 ಹಾಗೂ 800 ರೂ.ಹಣವನ್ನು ಪಡೆದುಕೊಂಡು ರೋಗಿಗಳಿಗೆ ರಕ್ತವನ್ನು ನೀಡುತ್ತವೆ. ಆದರೆ, ಸರಕಾರ ಇಲ್ಲಿಯವರೆಗೆ ಕಡಿವಾಣ ಹಾಕದಿರು ವುದರಿಂದಲೇ ಸರಕಾರಿ ಆಸ್ಪತ್ರೆಗಳು ರಕ್ತವನ್ನು ರೋಗಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಎನ್ನಲಾಗುತ್ತಿದೆ.





