ಬಿಹಾರದಲ್ಲಿ ಈಗ ಗುಟ್ಕಾ, ಪಾನ್ಮಸಾಲ ನಿಷೇಧ: ನಿತೀಶ್ರಿಂದ ಇನ್ನೊಂದು ಕ್ರಾಂತಿಕಾರಿ ಹೆಜ್ಜೆ
ಪಾಟ್ನಾ,ಮೇ 21: ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರ ಮಧ್ಯಪಾನ ನಿರೋಧ ನಂತರ ಈಗ ಗುಟ್ಕಾ ಮತ್ತು ಪಾನ್ ಮಸಾಲಕ್ಕೂ ಸಂಪೂರ್ಣ ನಿಷೇಧ ಹೇರಲಾಗಿದೆ. ಸರಕಾರ ಶುಕ್ರವಾರ ಜಾರಿಗೊಳಿಸಿದ ಆದೇಶದಲ್ಲಿ ಬಿಹಾರದಲ್ಲಿ ಗುಟ್ಕಾ, ಪಾನ್ಮಸಾಲ ಉತ್ಪಾದನೆ, ಮಾರಾಟ, ದಾಸ್ತಾನು ಮತ್ತು ಪ್ರದರ್ಶನವನ್ನು ಒಂದುವರ್ಷದ ವರೆಗೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ನಿಷೇಧ ಮೇ 21ರಿಂದ ಜಾರಿಗೆ ಬಂದಿದ್ದು ಆಹಾರ ಸುರಕ್ಷಾ ಆಯುಕ್ತ ಆರ್. ಮಹಾಜನ್ ಜನಹಿತ ಮತ್ತು ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಗುಟ್ಕಾಮತ್ತು ಪಾನ್ ಮಸಾಲೆ ನಿಷೇಧ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ನಿಷೇಧವನ್ನು ಜಾರಿಗೊಳಿಸಲು ನೆರವು ನೀಡಲು ಜಿಲ್ಲಾಡಳಿತಕ್ಕೂ ಸರಕಾರ ಸೂಚಿಸಿದೆ. ಆದೇಶದಲ್ಲಿ ಪರವಾನಿಗೆ ಅಧಿಕಾರಿಗಳು ಮತ್ತು ಆಹಾರ ಸಂರಕ್ಷಣಾ ಅಧಿಕಾರಿಗಳು ಇಡೀ ಬಿಹಾರದಲ್ಲಿ ದಾಳಿ ನಡೆಸಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಪ್ರಕಾರ ಕೈಗೊಳ್ಳಲಾಗುವುದು.